-ಮಳೆ ಕೊರತೆಯಿಂದ ಕೈಗೆ ಸಿಗದ ಬೆಳೆ । ಕಂಗಾಲಾದ ಬೆಳೆಗಾರರಿಂದ ಸರ್ಕಾರಕ್ಕೆ ಮೊರೆ

------

- ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಅವರಾದ್‌ (ಬಿ)ಪ್ರಸಕ್ತ ವರ್ಷದಲ್ಲಿ ಎದುರಾಗಿರುವ ಭಾರಿ ಮಳೆಯ ಕೊರತೆಯಿಂದ ಕಲಬುರಗಿಯಲ್ಲಿ ತೊಗರಿ ರೈತರು ಆತಂಕದಲ್ಲಿದ್ದಾರೆ.

ಹಗಲಿರುಳು ಕಠಿಣ ಶ್ರಮವಹಿಸಿ ಉದ್ದು ಬಿತ್ತಿ ಜತೆಗೆ ಹಣ ವ್ಯಯಿಸಿ ಬೆಳೆದಿರುವ ತೊಗರಿ ಮೇಲೆ ನಿರೀಕ್ಷೆ ಇಟ್ಟುಕೊಂಡಿದ ರೈತರಿಗೆ ಕಳೆದ 20 ದಿಗಳಿಂದ ಮಳೆ ಸುರಿಯದಿರುವುದರಿಂದ ಬೆಳೆ ಮುರುಟಿ ಚಿಂತಾಕ್ರಾಂತರಾಗಿದ್ದಾರೆ.


ಸೋಮವಾರ ಜಿಲ್ಲೆಯಲ್ಲಿ ಬರ ಪೀಡಿತ ರೈತರ ಹೊಲಗದ್ದೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಖುದ್ದು ಭೇಟಿ ನೀಡಿ ಹಾನಿಯ ಮಾಹಿತಿ ತಿಳಿಸಿದರುಕೊಂಡರು. ಕಮಲಾಪುರ ತಾಲೂಕಿನ ಅವರಾದ (ಬಿ) ಗ್ರಾಮದ ವಿಮಲಾಬಾಯಿ ಹಾಗೂ ಶಕುಂತಲಾಬಾಯಿ ಅವರ ತೊಗರಿ ಬಿತ್ತಿದ ಹೊಲಕ್ಕೆ ಭೇಟಿ ನೀಡಿ ಅಲ್ಲಿನ ಬೆಳೆ ಬೆಳವಣಿಗೆ ವೀಕ್ಷಿಸಿದರು.

ಈ ವೇಳೆ ಸಚಿವರ ಮುಂದೆ ಅಲವತ್ತುಕೊಂಡ ರೈತರು, ನಾವು ಹೆಸರು, ಉದ್ದು ಬಿತ್ತಿ ಹಣ ಕಳಕೊಂಡಿದ್ದೇವೆ. ಕಳೆದ 20 ದಿನಗಳಿಂದ ಮಳೆ ಸುರಿಯದಿರುವುದರಿಂದ ಬೆಳೆ ಕೈಕೊಟ್ಟಿದ್ದು, ಸಂಕಷ್ಟ ಎದುರಿಸುತ್ತಿದ್ದೇವೆ. ಸರ್ಕಾರ ನಮಗೆ ನೆರವಾಗಬೇಕು ಎಂದು ಒತ್ತಾಯಿಸಿದರು.

ನಂತರ ಭೋಸ್ಗಾ ಸಹಿತ ಸುತ್ತಲಿನ ಹಳ್ಳಿಗಳಲ್ಲಿಯೂ ರೈತರ ಭೇಟಿಯಾದ ಸಚಿವ ಖರ್ಗೆ ಬೆಳೆ ಹಾನಿ, ಬರಗಾಲದ ಸ್ಥಿತಗತಿ ವೀಕ್ಷಿಸಿದರು. ಜತೆಗೆ ಕಲಬುರಗಿ ಜಿಲ್ಲೆಯಲ್ಲಿ ಶೇ.80 ರಷ್ಟು ಬೆಳೆ ಹಾಳಾಗಿರುವ ಸಂಗತಿಯನ್ನು ಕೃಷಿ ಅಧಿಕಾರಿಗಳಿಂದ ತಿಳಿದುಕೊಂಡರು.

ತೊಗರಿ ಕಣಜವಾದ ಕಲಬುರಗಿಯಲ್ಲಿ ರೈತರು ಮಳೆಯ ನಿರೀಕ್ಷೆಯಲ್ಲಿ ಹೆಸರು, ಉದ್ದು, ಅಲಸಂಡೆ ಬಿತ್ತಿದ್ದು, ಆದರೆ ವರುಣನ ಅವಕೃಪೆಯ ಕಾರಣದಿಂದ ರೈತನ ಬೆಳೆ ಲಾಭಕ್ಕೆ ತಣ್ಣೀರು ಎರೆಚಿದಂತಾಗಿದೆ. ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮದ್‌ ಪಟೇಲ್‌, ಡೀಸಿ ಇಕ್ರಮ್‌ ಶರೀಫ್‌ ಸೇರಿದಂತೆ ಕೃಷಿ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಸಚಿವರ ಜತೆಗಿದ್ದು ರೈತರ ಬೆಳೆ ಹಾನಿ ಪ್ರಮಾಣ, ಸಂಕಷ್ಟಗಳ ಬಗ್ಗೆ ವಿವರಿಸಿದರು.------ಕೋಟ್‌---------

ಕಲಬುರಗಿಯಲ್ಲಿ ತೀವ್ರ ಮಳೆಯ ಕೊರತೆ ಕಾಣುತ್ತಿರುವುದು ಸರ್ಕಾರದ ಗಮನದಲ್ಲಿದೆ. ಕೊಳವೆ ಬಾವಿಗಳು ಬತ್ತಿದ್ದು, ಅಂತರ್ಜಲ ಪಾತಾಳ ಸೇರಿದೆ. ಜಾನುವಾರು ಮೇವು, ನೀರಿಗೂ ತತ್ವಾರ ಉಂಟಾಗಿದೆ. ಹೆಸರು, ಉದ್ದು ಹಾಳಾಗಿದ್ದು, ಈಗ ಬಿತ್ತಿರುವ ತೊಗರಿಗೂ ಮಳೆ ಕೊರತೆ ಕಾಡಿರುವುದಾಗಿ ರೈತರು ಅಳಲು ತೋಡಿಕೊಂಡಿದ್ದಾರೆ. ರಾಜ್ಯಾದ್ಯಂತ ಬರಗಾಲ, ಮಳೆ ಕೊರತೆಯ ಪರಿಸ್ಥಿತಿ ವೀಕ್ಷಣೆ ಸಾಗಿದೆ.ಸಚಿವರೆಲ್ಲರೂ ಪರಿಶೀಲನೆ ನಡೆಸಿದ್ದು ನಾಡಿದ್ದು ಇರುವ ಸಂಪುಟ ಸಭೆಯಲ್ಲಿ ಈ ಬಗ್ಗೆ ವಿಷಯ ಮಂಡಿಸಿ ಚರ್ಚಿಸಲಾಗುವುದು. ಸಂಕಷ್ಟದಲ್ಲಿರುವ ರೈತರ ಯಾವ ರೀತಿ ನೆರವಿಗೆ ಬರಬಹುದು ಎಂಬುದರ ಬಗ್ಗೆ ಸರ್ಕಾರ ನಿರ್ಣಯಕ್ಕೆ ಬರಲಿದೆ.

। ಪ್ರಿಯಾಂಕ್‌ ಖರ್ಗೆ, ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ

----ಪಾಯಿಂಟ್ಸ್‌-----

*ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ

*ಅಧಿಕಾರಿಗಳಿಂದ ಬೆಳೆಹಾನಿ ಮಾಹಿತಿ ಪಡೆದ ಪ್ರಿಯಾಂಕ್‌ ಖರ್ಗೆ

*ಇಲಾಖಾಧಿಕಾರಿಗಳಿಂದ ಸಮಸ್ಯೆಗಳ ವಿವರಣೆ

*ಸರ್ಕಾರದ ಗಮನಕ್ಕೆ ತರುವುದಾಗಿ ಖರ್ಗೆ ಭರವಸೆ-----ಫೋಟೊ------ ಪ್ರಿಯಾಂಕ್‌ 1 ಮತ್ತು ಪ್ರಿಯಾಂಕ್‌ 2

ಕಲಬುರಗಿ ಜಿಲ್ಲೆ ಅವರಾದ್‌ (ಬಿ) ಗ್ರಾಮದ ವಿಮಲಾಬಾಯಿ ಹಾಗೂ ಶಕುಂತಲಾ ಬಾಯಿ ಹೊಲದಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಬರಗಾಲ, ಬೆಳೆ ಹಾನಿಯ ಪರಿಸ್ಥಿತಿ ಖುದ್ದು ವೀಕ್ಷಿಸಿ ರೈತರಿಂದ ವಿವರವಾದ ವಿಷಗಳನ್ನು ಕೇಳಿ ಮಾಹಿತಿ ಸಂಗ್ರಹಿಸಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮದ್‌ ಪಟೇಲ್‌, ಡೀಸಿ ಇಕ್ರಮ್‌ ಶರೀಫ್‌ ಇತರರಿದ್ದರು.