ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪ್ರತಿ ವರ್ಷ ಹೋಳಿ ಹುಣ್ಣಿಮೆಯ ಕಾಮದಹನದ ಮರುದಿನ ಉತ್ತರ ಕರ್ನಾಟಕ ಭಾಗದ ಜನರು ಶ್ರೀಶೈಲ ಮಲ್ಲಿಕಾರ್ಜುನ ದೇವರ ದರ್ಶನಕ್ಕೆ ಪಾದಯಾತ್ರೆ ಆರಂಭಿಸುವದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಬುಧವಾರ ಶ್ರೀಶೈಲ ಮಲ್ಲಿಕಾರ್ಜುನ ದೇವರ ದರ್ಶನಕ್ಕೆ ಕಂಬಿಗಳೊಂದಿಗೆ ತೆರಳುವದು ಕಂಡು ಬಂದಿತ್ತು.ಮಲ್ಲಯ್ಯನ ಭಕ್ತರು ಪಾದಯಾತ್ರೆಯ ಮೂಲಕ ಶ್ರೀಶೈಲಕ್ಕೆ ಪಯಣ ಬೆಳೆಸಿದರು. ಯುಗಾದಿ ಪಾಡ್ಯದಂದು ನಡೆಯುವ ಜಾತ್ರೆಯಲ್ಲಿ ಎಲ್ಲರೂ ಭಾಗವಹಿಸಿ ಮರಳಿ ತಮ್ಮ ತಮ್ಮ ಗ್ರಾಮಗಳಿಗೆ ಆಗಮಿಸುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಈಚೆಗೆ ಪ್ರತಿ ಗ್ರಾಮದಿಂದಲೂ ಶ್ರೀಶೈಲ ಪಾದಯಾತ್ರೆ ಕಮಿಟಿ ರಚನೆಯಾಗಿದ್ದು. ಈ ಕಮಿಟಿ ನೇತೃತ್ವದಲ್ಲಿ ಜನರು ತಮ್ಮ ಪಾದಯಾತ್ರೆ ಬೆಳೆಸುತ್ತಿದ್ದಾರೆ. ಯುವಕರು, ಹಿರಿಯರು, ಕಿರಿಯರು, ಮಹಿಳೆಯರು ಒಂದಾಗಿ ಭಕ್ತಿಯಿಂದ ಶ್ರೀಶೈಲ ಮಲ್ಲಿಕಾರ್ಜುನ ಭಕ್ತಿಯಿಂದ ನಾಮಸ್ಮರಣೆ ಮಾಡುತ್ತ ಪಾದಯಾತ್ರೆ ಮಾಡುತ್ತಾರೆ. 10 ದಿನಗಳ ಕಾಲ ಪಾದಯಾತ್ರೆ ಮೂಲಕ ನಡೆದು ಮಾ.13 ರಂದು ಶ್ರೀಶೈಲಕ್ಕೆ ತಲುಪುತ್ತಾರೆ. ಯುಗಾದಿ ಅಮವಾಸ್ಯೆ, ಪಾಡ್ಯದಂದು ಶ್ರೀಶೈಲ ಮಲ್ಲಿಕಾರ್ಜುನ ದೇವರ ದರ್ಶನ, ರಥೋತ್ಸವ, ಭ್ರಮರಾಂಬೆದೇವಿಯ ಪಡೆದು ಧನ್ಯತೆಯಿಂದ ಪುನೀತರಾಗುತ್ತಾರೆ. ಇದು ಅನಾದಿ ಕಾಲದಿಂದಲೂ ನಡೆದುಕೊಂಡು ಬರುತ್ತಿದೆ. ಇಂದಿಗೂ ಮಲ್ಲಯ್ಯನ ಭಕ್ತರು ಶ್ರೀಶೈಲ ಪಾದಯಾತ್ರೆಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಶ್ರೀಶೈಲದಲ್ಲಿ ಶ್ರೀಶೈಲ ಜಗದ್ಗುರುಗಳ ಯಾತ್ರಾ ನಿವಾಸದ ಹಿಂದುಗಡೆ ಪಟ್ಟಣದ ಶ್ರೀಶೈಲಮಲ್ಲಿಕಾರ್ಜುನ ವಿವಿದ್ದೋದ್ದೇಶಗಳ ಸೇವಾ ಸಂಸ್ಥೆಯ ಮಲ್ಲಿಕಾರ್ಜುನ ಪಾದಯಾತ್ರಾ ಸಮಿತಿಯು ಮಾ.13 ರಿಂದ 19 ರವರೆಗೆ ಸತತವಾಗಿ ಏಳು ದಿನಗಳ ಕಾಲ ಅನ್ನದಾಸೋಹ ಮಾಡುತ್ತಿದೆ.ಪಟ್ಟಣದಿಂದಲೂ ಹಲವಾರು ಪಾದಯಾತ್ರಿಗಳು ಶ್ರೀಶೈಲಕ್ಕೆ ತೆರಳುವ ಸಂದರ್ಭದಲ್ಲಿ ಬಸವೇಶ್ವರ ದೇವಸ್ಥಾನದ ಮೂಲ ಜೀರ್ಣೋದ್ಧಾರಕ ದಿ.ಶಂಕ್ರೆಪ್ಪ ಸಿಂಹಾಸನ ಪ್ರತಿಮೆ ಸಮೀಪ ಶ್ರೀಶೈಲ ಮಲ್ಲಿಕಾರ್ಜುನ ಕಂಬಿಗಳಿಗೆ ಈರಸಂಗಯ್ಯ ಮಠಪತಿ, ಪಂಚಾಕ್ಷರಯ್ಯ ಕಾಳಹಸ್ತೇಶ್ವರಮಠ,ಎ.ಐ.ಮಠಪತಿ ಸೇರಿದಂತೆ ವಿವಿಧ ಗುರುಗಳಿಂದ ಪೂಜೆ ನೆರವೇರಿತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಜನಪದ ಗಾಯಕ ಬಸವರಾಜ ಹಾರಿವಾಳ ಸೇರಿದಂತೆ ಇತರರು ಮಲ್ಲಯ್ಯನ ಕಂಬಿ ಹಾಡುಗಳನ್ನು ಹಾಡಿದರು. ಮಂಗಳಾರತಿ ಆದ ನಂತರ ಕಂಬಿ ಕಟ್ಟೆಗೆ ತೆರಳಿ ಅಲ್ಲಿ ಶ್ರೀಬಸವೇಶ್ವರ ಕಾರ, ಜೀಪ, ಟ್ಯಾಕ್ಸಿ ಮಾಲೀಕರ ಮತ್ತು ಚಾಲಕರ ಸಂಘವು ವ್ಯವಸ್ಥೆ ಮಾಡಲಾಗಿದ್ದ ಉಪಹಾರ ಪ್ರಸಾದ ಜನರು ಸ್ವೀಕರಿಸಿದರು. ಅಲ್ಲಿ ಮತ್ತೆ ಮಂಗಳಾರತಿ ಆದ ನಂತರ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ಜನರು ಪಾದಯಾತ್ರಿಗಳಿಗೆ, ಕಂಬಿಗಳಿಗೆ ಬೀಳ್ಕೊಟ್ಟರು. ಕೆಲವರು ಹೂವಿನಹಿಪ್ಪರಗಿ ಗ್ರಾಮದವರಿಗೂ ತೆರಳಿ ಕಂಬಿಗಳಿಗೆ, ಪಾದಯಾತ್ರಿಗಳಿಗೆ ಬೀಳ್ಕೊಟ್ಟರು. ಪಾದಯಾತ್ರೆ ತೆರಳುವ ಮಾರ್ಗದಲ್ಲಿ ಪಾದಯಾತ್ರಿಗಳಿಗೆ ಅಗತ್ಯವಿರುವ ಕುಡಿಯುವ ನೀರು, ದಾಸೋಹ, ವೈದ್ಯಕೀಯ ವ್ಯವಸ್ಥೆಗಾಗಿ ಸಾಮಗ್ರಿಗಳನ್ನು ಹೊತ್ತ ವಾಹನಗಳು ತೆರಳಿದವು. ಈ ಸಂದರ್ಭದಲ್ಲಿ ಸದಪ್ಪ ಅರಕೇರಿ,ಎ.ಐ.ಮಠಪತಿ, ಶ್ರೀಶೈಲ ಮಠಪತಿ, ಶಿವಲಿಂಗಯ್ಯ ತೆಗ್ಗಿನಮಠ, ಬಸಯ್ಯ ಮಠಪತಿ, ಬಸವರಾಜ ಗೊಳಸಂಗಿ, ಬಾಬು ಕುಂಟೋಜಿ, ಕುಮಾರಗೌಡ ಪಾಟೀಲ, ಗಿರೀಶ ಹಾರಿವಾಳ, ಪವಾಡೆಪ್ಪ ಕೊಂಡಗುಳಿ,ಸಿದ್ದಲಿಂಗಪ್ಪ ಹಾರಿವಾಳ, ಮಹೇಶ ನಿಡಗುಂದಿ, ಶ್ರೀಶೈಲ ಒಣರೊಟ್ಟಿ, ಬಸವಂತ ಅಡಗಿಮನಿ, ಮಹಾತೇಶ ಹಂಜಗಿ, ಜಿ.ಎಸ್.ವಂದಾಲ, ಅಶೋಕ ಗೌರನ್ನವರ, ಆರ್.ಜಿ.ಅಳ್ಳಗಿ, ಸುಭಾಸ ಗಾಯಕವಾಡ, ಸಂಗನಬಸಪ್ಪ ಪೂಜಾರಿ, ಗೋಪಾಲ ಚಿಂಚೋಳಿ, ಬಸಪ್ಪ ಏವೂರ, ರಮೇಶ ಉಕ್ಕಲಿ, ಮಹಾದೇವ ಅಂಗಡಿ, ರಾಜು ನಾಲತವಾಡ, ಕೊಟ್ರೇಶ ಹೆಗ್ಡಾಳ, ಬಸವರಾಜ ಅಂಗಡಿ, ಬಸವರಾಜ ಕುಂಬಾರ, ಮೀರಸಾಬ ಕೊರಬು, ಮುನ್ನಾ ಅಗರವಾಲ, ಪ್ರಕಾಶ ಮಡಿಕೇಶ್ವರ, ಬಸವೇಶ್ವರ ಕಾರು, ಜೀಪ್, ಟ್ಯಾಕ್ಸಿ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಬಸವರಾಜ ಹಿರೇಮಠ, ಸದಸ್ಯರಾದ ಶರಣು ಮನಗೂಳಿ, ಬಸವರಾಜ ಮಾಲಗಾರ, ಹಣಮಂತ ಕಾಮನಕೇರಿ, ಸಂಗನಗೌಡ ಪಾಟೀಲ, ರಮೇಶ ಹಳ್ಳಿ, ಅಂಜನಾ ಭೂಸ್ಥಳಿಮಠ, ಮಲ್ಲಮ್ಮ ಗುಡ್ಡದ, ಕಮಲವ್ವ ಪಡಶೆಟ್ಟಿ, ಬೋರಮ್ಮ ಕೋಟ್ಯಾಳ, ಅಶ್ವಿನಿ ಗಂಗನಹಳ್ಳಿ, ಸರಸ್ವತಿ ಶೀಲವಂತಮಠ, ಪ್ರೀತಿ ಹಾರಿವಾಳ ಸೇರಿದಂತೆ ನೂರಾರು ಪುರುಷರು, ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು. ಪಟ್ಟಣದ ವೀರಭದ್ರೇಶ್ವರ ನಗರದ ಮುಂಭಾಗ, ವಿದ್ಯಾನಗರದ ನಿವಾಸಿಗಳು, ಗುಡ್ಡಾಪುರ ದಾನಮ್ಮದೇವಿ ಯುವಕ ಸಂಘದವರು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ವಿವಿಧೆಡೆ ಶ್ರೀಶೈಲ ಪಾದಯಾತ್ರಿಗಳಿಗೆ ದಾಸೋಹ ವ್ಯವಸ್ಥೆ ಮಾಡಿರುವುದು ಕಂಡುಬಂದಿತ್ತು. ಕಳೆದ 1980 ರಿಂದಲೂ ನಾನು ಶ್ರೀಶೈಲಕ್ಕೆ ಪಾದಯಾತ್ರೆ ಹೋಗುತ್ತಿದ್ದೇನೆ. ನಮ್ಮ ಸ್ವಂತ ಗ್ರಾಮ ನಾಗಠಾಣದಿಂದ 1980 ರಿಂದ 3 ವರ್ಷ ಪಾದಯಾತ್ರೆ ಹೋದೆ. ನಂತರ ನನ್ನ ಪತ್ನಿ ಊರಾದ ಬಸವನಬಾಗೇವಾಡಿಗೆ ಬಂದು ನೆಲೆಸಿದ್ದರಿಂದಾಗಿ ಇಲ್ಲಿಂದ ಪ್ರತಿವರ್ಷ ಶ್ರೀಶೈಲಕ್ಕೆ ಪಾದಯಾತ್ರೆಯಲ್ಲಿ ತೆರಳುತ್ತೇನೆ. ಈ ವರ್ಷ ನನ್ನದು 46ನೇ ವರ್ಷದ ಪಾದಯಾತ್ರೆಯಾಗಿದೆ. ನಾನು ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ (ಬಸವೇಶ್ವರ), ಶ್ರೀಶೈಲಮಲ್ಲಿಕಾರ್ಜುನ ದೇವರನ್ನು ಭಕ್ತಿಯಿಂದ ಪೂಜೆ ಮಾಡಿದ ಫಲದಿಂದ ನಾನು ಆರೋಗ್ಯವಾಗಿ, ಸುಖದಿಂದ ಇದ್ದೇನೆ.
-ಸದಪ್ಪ ಅರಕೇರಿ, 82 ವರ್ಷದ ಹಿರಿಯ ಪಾದಯಾತ್ರಿ.ನಾನು ಕಳೆದ 5 ವರ್ಷದಿಂದ ಶ್ರೀಶೈಲಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಿದ್ದೇನೆ. ಇದು ನನ್ನದು ಆರನೇ ವರ್ಷದ ಪಾದಯಾತ್ರೆಯಾಗಿದೆ. ಇಲ್ಲಿನ ಪಾದಯಾತ್ರೆಯ ಕಮಿಟಿಯವರು ಪಾದಯಾತ್ರಿಗಳಿಗೆ ತುಂಬಾ ಕಾಳಜಿ ಮಾಡಿ ಶ್ರೀಶೈಲಕ್ಕೆ ಕರೆದುಕೊಂಡು ಹೋಗುತ್ತಾರೆ.
-ವಿಠ್ಠಲ ಬೆಣ್ಣೂರ, ಪಾದಯಾತ್ರಿ.ಕಳೆದ 20 ವರ್ಷಗಳಿಂದ ನಾವು ವಾಹನ ವ್ಯವಸ್ಥೆ ಉಚಿತ ಸೇವೆಯನ್ನು ಮಾಡುತ್ತಿದ್ದೇವೆ. ನಾನು ಕಳೆದ 15 ವರ್ಷಗಳಿಂದ ಲಾರಿಯೊಂದಿಗೆ ತೆರಳಿ ಶ್ರೀಶೈಲ ಪಾದಯಾತ್ರಿಗಳಿಗೆ ಸೇವೆ ಸಲ್ಲಿಸುತ್ತಿರುವೆ.
-ಮಹಾದೇವಿ ಅಂಗಡಿ,
ಲಾರಿ ಮಾಲೀಕ.ಪಾದಯಾತ್ರೆಯಲ್ಲಿ ಭಾಗವಹಿಸುವವರಿಗೆ ಸುಕ್ಷೇತ್ರ ಶ್ರೀಶೈಲ ತಲುಪುವವರಿಗೆ ಪ್ರತಿಯೊಂದು ಮುಕ್ಕಾಂಗಳಲ್ಲಿ ಪಾದಯಾತ್ರಾ ಸಮಿತಿಯಿಂದ ಮಧ್ಯಾನ್ಹ, ರಾತ್ರಿ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಇಂದು ಬಸವನಬಾಗೇವಾಡಿಯಿಂದ ಆರಂಭವಾದ ಶ್ರೀಶೈಲ ಪಾದಯಾತ್ರೆಗೆ ಬಸವನಹಟ್ಟಿ, ಸಂಕನಾಳ,ನಂದಿಹಾಳ, ಯರನಾಳ, ಜೈನಾಪೂರ ಸೇರಿದಂತೆ ವಿವಿಧ ಗ್ರಾಮಗಳಿಂದ ಬರುವ ಪಾದಯಾತ್ರಿಗಳು ಸೇರಿಕೊಳ್ಳುತ್ತಾರೆ. ಇಲ್ಲಿಂದ ಆರಂಭವಾದ ಪಾದಯಾತ್ರೆಯು ಬಳಗಾನೂರ, ಕಕ್ಕೇರಿ, ನವಿಲಗುಡ್ಡ, ಗಬ್ಬೂರ, ರಾಯಚೂರ, ಬಳಗೇರಾ, ಶಾಂತಿನಗರ, ನಂದಿ ಕೊಟ್ಕೂರ, ಕಡೆಹಳ್ಳಿಯ ಮಾರ್ಗವಾಗಿ ಮಾ.13 ರಂದು ಶ್ರೀಶೈಲಕ್ಕೆ ತೆರಳುವುದು. -ಸದಪ್ಪ ಅರಕೇರಿ, ಶ್ರೀಶೈಲ ಮಲ್ಲಿಕಾರ್ಜುನ ವಿವಿಧೋದ್ದೇಶಗಳ ಸೇವಾ ಸಂಸ್ಥೆಯ ಅಧ್ಯಕ್ಷರು,-ಬಸವರಾಜ ಹಾರಿವಾಳ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತರು.