ಸಾರಾಂಶ
ಗದಗ: ಪ್ರಯಾಗ್‌ರಾಜ್‌ನಲ್ಲಿ ನಡೆದಿರುವ ಕುಂಭಮೇಳ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಸಮ್ಮಿಲನವಾಗಿದೆ. ಕುಂಭಮೇಳದಲ್ಲಿ ಪಾಲ್ಗೋಳ್ಳುವದು, ಪುಣ್ಯಸ್ನಾನ ಮಾಡುವುದು ಮನುಷ್ಯನನ್ನು ಸನ್ಮಾರ್ಗದೆಡೆಗೆ ಮುನ್ನಡೆಸುವ ಪುಣ್ಯಪ್ರಾಪ್ತಿಯ ಕಾರ್ಯವಾಗಿದೆ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಹುಬ್ಬಳ್ಳಿ ಅಧ್ಯಕ್ಷ ಪಿ.ಎಸ್. ಸಂಶಿಮಠ ಹೇಳಿದರು.
ಅವರು ಮಂಗಳವಾರ ಗದುಗಿನಿಂದ ಪ್ರಯಾಗ್‌ರಾಜ್ ಕುಂಭಮೇಳಕ್ಕೆ ಗದುಗಿನಿಂದ ತೆರಳುತ್ತಿರುವ ಯಾತ್ರಾರ್ಥಿಗಳಿಗೆ ಭೋಜನಕೂಟ ಏರ್ಪಡಿಸಿ ಸನ್ಮಾನಿಸಿ ಬಿಳ್ಳೋಡುವ ಸಮಾರಂಭದಲ್ಲಿ ಮಾತನಾಡಿದರು.ನಾವಿಂದು ವ್ಯಾಪಾರ, ವಹೀವಾಟುಗಳ ಮಧ್ಯದಲ್ಲಿ ಒತ್ತಡದ ಜೀವನ ನಡೆಸುವಂತಾಗಿದೆ. ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯದಲ್ಲಿ ಪಾಲ್ಗೋಂಡು ಒತ್ತಡ ನಿಗ್ರಹಿಸಿಕೊಳ್ಳುವ ಕಾರ್ಯಕ್ಕೆ ಮುಂದಾಗಬೇಕು ಎಂದರು.
ಗದಗ ಎಪಿಎಂಸಿ ಮಾರುಕಟ್ಟೆಯ ವ್ಯಾಪಾರಸ್ಥರು, ವಾಯು ವಿಹಾರ ಸಂಘದವರು, ಸಮಾನ ಮನಸ್ಕರರು ಒಂದುಗೂಡಿಕೊಂಡು ಜ.13 ರಿಂದ ಫೆ.28 ರವರೆಗೆ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಕುಂಭಮೇಳ ಧಾರ್ಮಿಕ, ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಲು ಗಣ್ಯ ವ್ಯಾಪಾರಸ್ಥ ಸದಾಶಿವಯ್ಯ ಮದರಿಮಠ ನೇತೃತ್ವದಲ್ಲಿ ಕೈಗೊಂಡಿರುವ ಯಾತ್ರೆಗೆ ಶುಭ ಕೋರಿದರು.ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ ಚಂದ್ರು ಬಾಳಿಹಳ್ಳಿಮಠ ಮಾತನಾಡಿ, ಈ ಮಹಾ ಕುಂಭಮೇಳವು 144 ವರ್ಷಗಳಿಗೊಮ್ಮೆ ಬರುವ ಮಹಾ ಕುಂಭಮೇಳವು ಗಂಗಾ, ಯಮುನಾ, ಸರಸ್ವತಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವ ಸಂಕಲ್ಪವಿದ್ದು, ದೇಶ ನೋಡು ಕೋಶ ಓದು ಎನ್ನುವಂತೆ ಧಾರ್ಮಿಕ ಪ್ರವಾಸ ಕೈಗೊಂಡಿರುವ ಈ ಯಾತ್ರಾರ್ಥಿಗಳು ಇನ್ನಷ್ಟು ಧಾರ್ಮಿಕ ಆಚಾರ ವಿಚಾರ, ಸಂಸ್ಕೃತಿ ವೃದ್ಧಿಸಿಕೊಂಡು ಬರಲಿ ತನ್ಮೂಲಕ ಗದಗ ಪರಿಸರಕ್ಕೆ ಇನ್ನಷ್ಟು ಒಳಿತಾಗಲಿ ಎಂದರು.
ಸದಾಶಿವಯ್ಯ ಮದರಿಮಠ, ಗುರುಬಸವಲಿಂಗ ತಡಸದ, ವಿನೋದ ಭಾಂಡಗೆ, ವಿನಾಯಕ ಪಾಟೀಲ, ಸಂತೋಷ ಭಾಂಡಗೆ, ಬಸವರಾಜ ಹಿರೇಮಠ, ಕಿರಣ ಭಾಂಡಗೆ, ಮೋತಿಲಾಲ ಭಾಂಡಗೆ, ಮುರುಘರಾಜೇಂದ್ರ ಬಡ್ನಿ, ಪರಶುರಾಮ ಖಟವಟೆ, ಮಂಜುನಾಥಗೌಡ ಬೆಂತೂರ, ಗಂಗಾಧರ ಗೊಡಚಿ, ಮಹೇಶ ತೇಲಿ, ಚಂದ್ರಗೌಡ ಪರ್ವತಗೌಡ್ರ, ವಿ.ಕೆ. ಗುರುಮಠ, ವಿಕಾಸ ಚವ್ಹಾಣ, ಶರಣಬಸಪ್ಪ ಗುಡಿಮನಿ, ಚಂದ್ರಶೇಖರ ತಡಸದ, ರಾಜು ಕುರುಡಗಿ, ದೇವಣ್ಣ ಡಾವಣಗೇರಿ, ಮಲ್ಲಿಕಾರ್ಜುನ ಚಂದಪ್ಪನವರ, ಅನಿಲ್ ತೆಂಬದಮನಿ, ಸುನೀಲ ತೆಂಬದಮನಿ, ಸಂತೋಷ ಮೇಲಗಿರಿ, ಸಮೀರ ಕುಲಕರ್ಣಿ, ಗಂಗಾಧರ ನವಲಗುಂದ, ಮಹಾದೇವ ಕಲಬುರ್ಗಿ, ಮಂಜುನಾಥ ಬೇಲೇರಿ, ವಿಶ್ವನಾಥ ಶೆಟ್ಟಿ, ದತ್ತುಸಾ ಬೇವಿನಕಟ್ಟಿ, ಲಿಂಗರಾಜ ಚಂದಪ್ಪನವರ, ಬಸವರಾಜ ಹಡಪದ, ಪರಶುರಾಮ ನಾಯ್ಕರ, ಶ್ರೀಕಾಂತಯ್ಯ ಉಣ್ಣಿಮಠ, ಕೆ.ವಿ.ಪಾಟೀಲ, ರಾಜು ಕಂಟಿಗೊಣ್ಣನವರ, ಹೇಮಂತ ಕುಲಕರ್ಣಿ, ಮಲ್ಲೇಶ ಅಣ್ಣಿಗೇರಿ, ವಿನಾಯಕ ಓಲೇಕಾರ, ಕಿರಣ ಛಲವಾದಿ, ವೀರೇಶ ಕೂಗು, ಅಂಬಾಸಾ ಭಾಂಡಗೆ, ರಾಮನಗೌಡ ದಾನಪ್ಪಗೌಡ್ರ, ಶರಣಪ್ಪ ಗೋಗೇರಿ, ಕೊಟ್ರೇಶ್ವರ ವಿಭೂತಿ, ಚಂದ್ರಕಾಂತ ಹಾನಗಲ್, ಪ್ರಕಾಶ ಬದಿ, ರಾಘವೇಂದ್ರ, ಅಂಬಾಸಾ ಖಟವಟೆ, ಮಾಧುಸಾ ಬದಿ ಮುಂತಾದವರು ಖಾಸಗಿ ವಾಹನದಲ್ಲಿ ಹಾಗೂ ರೈಲ್ವೇ ಮೂಲಕ ಪ್ರವಾಸ ಆರಂಭಿಸಿ ವಿಮಾನದ ಮೂಲಕ ಕಾಶಿ, ಪ್ರಯಾಗ್‌ರಾಜ್ ತಲುಪುವರು.