ಇಲ್ಲಿ ಮಹಾಲಕ್ಷ್ಮೀ ದೇವಾಲಯದ ಆವರಣದಲ್ಲಿ ನಡೆಯುತ್ತಿರುವ ಕರಾವಳಿಯ. ವೈಭವದ ಉಡುಪಿ ಉಚ್ಚಿಲ ದಸರಾದ 7ನೇ ದಿನವಾದ ಶನಿವಾರ ಉಡುಪಿಯ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕಿನ ಪ್ರಾಯೋಜಕತ್ವದಲ್ಲಿ ಅಮೋಘವಾದ ‘ಕಿನ್ನಿ ಪಿಲಿ ನಲಿಕೆ’ ಮತ್ತು ಮತ್ತು ಬೆರಗಿನ ‘ಪೊಣ್ಣು ಪಿಲಿ ನಲಿಕೆ’ ಸ್ಪರ್ಧೆಗಳು ನಡೆದವು.
ಉಚ್ಚಿಲ ; ಇಲ್ಲಿ ಮಹಾಲಕ್ಷ್ಮೀ ದೇವಾಲಯದ ಆವರಣದಲ್ಲಿ ನಡೆಯುತ್ತಿರುವ ಕರಾವಳಿಯ. ವೈಭವದ ಉಡುಪಿ ಉಚ್ಚಿಲ ದಸರಾದ 7ನೇ ದಿನವಾದ ಶನಿವಾರ ಉಡುಪಿಯ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕಿನ ಪ್ರಾಯೋಜಕತ್ವದಲ್ಲಿ ಅಮೋಘವಾದ ‘ಕಿನ್ನಿ ಪಿಲಿ ನಲಿಕೆ’ ಮತ್ತು ಮತ್ತು ಬೆರಗಿನ ‘ಪೊಣ್ಣು ಪಿಲಿ ನಲಿಕೆ’ ಸ್ಪರ್ಧೆಗಳು ನಡೆದವು.
ಈ ಸ್ಪರ್ಧೆಯನ್ನು ಉದ್ಘಾಟಿಸಿದ ಉಚ್ಚಿಲ ದಸರಾ ರೂವಾರಿ ನಾಡೋಜ ಡಾ. ಜಿ. ಶಂಕರ್, ದಸರೆ ಎಂದರೇ ಮಹಿಳೆಯರ ಹಬ್ಬ, ಅದರಂತೆ ಉಡುಪಿ ಉಚ್ಚಿಲ ದಸರಾದಲ್ಲಿ ಮಹಿಳೆಯರ ಪ್ರತಿಭಾ ಪ್ರದರ್ಶನಕ್ಕೆ ‘ಪೊಣ್ಣು ಪಿಲಿ ನಲಿಕೆ’ ಸ್ಪರ್ಧೆ ನಡೆಸಲಾಗುತ್ತಿದೆ. ಇದಕ್ಕೆ ಕಾರಣಕರ್ತರಾದ ಮಹಾಲಕ್ಷ್ಮೀ ಬ್ಯಾಂಕಿನ ಅಧ್ಯಕ್ಷ ಯಶ್ಪಾಲ್ ಸುವರ್ಣ ಈ ಸ್ಪರ್ಧೆಯ ಮೂಲಕ ಉಚ್ಚಿಲ ದಸರೆಗೆ ಇನ್ನಷ್ಟು ಮೆರುಗು ತುಂಬಿದ್ದಾರೆ ಎಂದು ಅಭಿನಂದಿಸಿದರು. ಕಾರ್ಯಕ್ರಮದ ಅಧ್ಯಕ್ಣತೆ ವಹಿಸಿದ್ದ ಉಡುಪಿ ಶಾಸಕ, ಮಹಾಲಕ್ಷ್ಮೀ ಕೋ. ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಯಶಪಾಲ್ ಸುವರ್ಣ ಈ ಹಿಂದಿನ ವರ್ಷಗಳಲ್ಲಿ ‘ಪೊಣ್ಣು ಪಿಲಿ ನಲಿಕೆ’ ಸ್ಪರ್ಧೆಯನ್ನು ನಡೆಸಲಾಗಿತ್ತು, ಈ ಬಾರಿ ಬಾಲ್ಯದಲ್ಲಿಯೇ ಮಕ್ಕಳಿಗೆ ತುಳುನಾಡಿನ ಎಲ್ಲಾ ಉತ್ಸಾವಾದಿಗಳ ಅವಿಭಾಜ್ಯ ಅಂಗವಾಗಿರುವ ಹುಲಿ ವೇಷದ ಪರಿಚಯ ಮಾಡಿಸಲು ಮತ್ತು ಅವರಲ್ಲಿ ನಮ್ಮ ಸಂಸ್ಕೃತಿಯ ಜಾಗೃತಿ ಮೂಡಿಸುವುದಕ್ಕಾಗಿ ‘ಕಿನ್ನಿ ಪಿಲಿ ನಲಿಕೆ’ ಸ್ಪರ್ಧೆಯನ್ನು ನಡೆಸಲಾಗುತ್ತಿದೆ ಎಂದು ಶುಭ ಹಾರೈಸಿದರು.ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ದ.ಕ. ಮೊಗವೀರ ಮಹಾಜನ ಸಂಘದ ಮುಂಬೈ ಶಾಖೆಯ ಗೌರವಾಧ್ಯಕ್ಷ ವೇದಪ್ರಕಾಶ್ ಶ್ರೀಯಾನ್, ಶಾಲಿನಿ ಜಿ. ಶಂಕರ್, ಶಾಮಿಲಿ ನವೀನ್, ಮಹಾಜನ ಸಂಘದ ಅಧ್ಯಕ್ಷ ಜಯ ಕೋಟ್ಯಾನ್, ಗಣ್ಯರಾದ ಶೇಖರ್ ಸಾಲ್ಯಾನ್, ಖುಷಿ ಶೆಟ್ಟಿ, ಸುಷ್ಮಾ ಬಂಟ್ವಾಳ, ಲಕ್ಷ್ಮೀ ಶೆಣೈ, ಶಿಲ್ಪಾ ಜಿ. ಸುವರ್ಣ, ವಿನಯ್ ಕರ್ಕೇರ, ವಾಸುದೇವ ಸಾಲ್ಯಾನ್, ಗುಂಡು ಅಮೀನ್, ಯುವರಾಜ್ ಸಾಲ್ಯಾನ್ ಮಸ್ಕತ್, ಸುಗುಣ ಕರ್ಕೇರ, ಶಶಿಕಾಂತ್ ಪಡುಬಿದ್ರಿ, ಶರಣ್ ಕುಮಾರ್ ಮಟ್ಟು, ಯಜ್ಞೇಶ್ ಕರ್ಕೇರ, ದಿನೇಶ್ ಎರ್ಮಾಳು, ಲೀಲಾಧರ ಮಸ್ಕತ್ ಮೊದಲಾದವರು ಉಪಸ್ಥಿತರಿದ್ದರು.ಬಹುಮಾನ ವಿವರಗಳು
ಪೊಣ್ಣು ಪಿಲಿ ನಲಿಕೆ - ತಂಡಪ್ರಥಮ : ದರ್ಪಣ ಉಡುಪಿ, ದ್ವಿತೀಯ : ಡಿಡಿ ಗ್ರೂಪ್ ನಿಟ್ಟೂರು, ತೃತೀಯ : ಕಿಡ್ಸ್ ಟೀಂ ಮಲ್ಪೆ, ಚತುರ್ಥ : ಫ್ರೆಂಡ್ಸ್ ಟೀಂ ಮಲ್ಪೆ
ವೈಯಕ್ತಿಕ ಪ್ರಥಮ : ಪೂರ್ವಿ ರಾಜೇಶ್ ಮಲ್ಪೆ, ದ್ವಿತೀಯ : ಸೌಮ್ಯ ಸುರೇಂದ್ರ ಸುರತ್ಕಲ್, ತೃತೀಯ : ರಮ್ಯಾ ರೂಪೇಶ್ ನಿಟ್ಟೂರು, ಚತುರ್ಥ : ನಿಮಿತ್ತಕಿನ್ನಿಪಿಲಿ ನಲಿಕೆ, 0-2 ವರ್ಷ ವಿಭಾಗ ಪ್ರಥಮ : ವಿಹ ಪಿ. ಸುವರ್ಣ, ದ್ವಿತೀಯ : ಸುಶನ್ಯ ಎಸ್. ಕಟಪಾಡಿ, ತೃತೀಯ : ಪಾರ್ಥವ್ ಸುವರ್ಣ ಎಸ್.2-4 ವರ್ಷ ವಿಭಾಗ ಪ್ರಥಮ : ಚಕಿತ್ ವಿ. ಎಕ್ಕಾರ್, ದ್ವಿತೀಯ : ಶಿವಿನ್ ನಿಖಿಲ್, ತೃತೀಯ : ಆದಿತ್ಯಕೃಷ್ಣ ಉಪಾಧ್ಯ
4-6 ವರ್ಷ ವಿಭಾಗ ಪ್ರಥಮ : ನಮಿಷ್, ದ್ವಿತೀಯ : ಅದ್ವೈತ್ ಕೋಟ್ಯಾನ್, ತೃತೀಯ : ಪ್ರಿಯಾಂಶ್6-8 ವರ್ಷ ವಿಭಾಗ ಪ್ರಥಮ : ಶ್ರೀಶೈಲ, ದ್ವಿತೀಯ : ಶಾಸ್ತ್ರ ಜಿ. ಸಾಲ್ಯಾನ್, ತೃತೀಯ : ಶ್ರಿಹಾನ್ ಕೆ. ಬಂಗೇರ ಮತ್ತು ದೇಶನ್ವಿ ಕೆ. ಸಾಲ್ಯಾನ್