ಇಂದು ತಡರಾತ್ರಿ ಬಳಿಕ ಪಿಲಿಕುಳದಲ್ಲಿ ಚಂದ್ರಗ್ರಹಣ ವೀಕ್ಷಣೆ ಅವಕಾಶ
1 Min read
KannadaprabhaNewsNetwork
Published : Oct 28 2023, 01:15 AM IST
Share this Article
FB
TW
Linkdin
Whatsapp
ಶಾಸಕರು ಅಧಿಕಾರಿಗಳೊಂದಿಗೆ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದ ಸಂದರ್ಭ | Kannada Prabha
Image Credit: KP
ಇಂದು ತಡ ರಾತ್ರಿ ಪಿಲಿಕುಳದಲ್ಲಿ ಚಂದ್ರಗ್ರಹಣ ವೀಕ್ಷಣೆಗೆ ಅವಕಾಶ
ಮಂಗಳೂರು: ಗ್ರಹಣಾಸಕ್ತರಿಗೆ ವೀಕ್ಷಣೆಗೆ ಅಕ್ಟೋಬರ್ 28 ಮತ್ತು 29ರ ನಡುವಿನ ರಾತ್ರಿಯಲ್ಲಿ ಸುಮಾರು 1.05 ಗಂಟೆಯಿಂದ 2.20 ಗಂಟೆಯವರೆಗೆ ಭಾಗಶಃ ಪಾರ್ಶ್ವ ಚಂದ್ರಗ್ರಹಣ ಸಂಭವಿಸುವುದು. ಇದು ಮಂಗಳೂರು ಸೇರಿದಂತೆ ರಾಜ್ಯದೆಲ್ಲಡೆಯೂ ಗೋಚರಿಸಲಿದೆ. ಇದನ್ನು ವೀಕ್ಷಿಸಲು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ರಾತ್ರಿ 7.30ರಿಂದ ಆಕಾಶ ವೀಕ್ಷಣಾ ಕಾರ್ಯಕ್ರಮ ಆಯೋಜಿಸಲಾಗಿದೆ. ದೂರದರ್ಶಕದ ಮೂಲಕ ಗುರು ಗ್ರಹ, ಶನಿ ಗ್ರಹ ಮತ್ತು ಚಂದ್ರನನ್ನು ಕಣ್ತುಂಬಿಕೊಳ್ಳಬಹುದು. ಇದೇ ಸಮಯದಲ್ಲಿ ಕಾಣಸಿಗುವ ನಕ್ಷತ್ರಗಳು ಮತ್ತು ನಕ್ಷತ್ರ ಪುಂಜಗಳನ್ನು ಗುರುತಿಸುವುದು ಮತ್ತು ಗ್ರಹಣಗಳ ಬಗ್ಗೆ ಮಾಹಿತಿಯನ್ನು ಕೇಂದ್ರದ ಸಿಬ್ಬಂದಿ ನೀಡಲಿದ್ದಾರೆ. ಆಸಕ್ತರಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದೆ. ಗ್ರಹಣ ವೀಕ್ಷಿಸಲು ಸಹ ಅನುವು ಮಾಡಿಕೊಡಲಾಗುವುದು. ಕಾರ್ಯಕ್ರಮದಲ್ಲಿ ಭಾಗವಹಿಸಲಾಗದ ಸಾರ್ವಜನಿಕರು ಈ ಗ್ರಹಣವನ್ನು ತಮ್ಮ ಮನೆಯಲ್ಲಿಯೇ ವೀಕ್ಷಿಸಲು ಪ್ರಶಸ್ತ್ಯ ಸ್ಥಳವನ್ನು ಆಯ್ಕೆ ಮಾಡಿಕೊಂಡು ಬರಿಗಣ್ಣಿನಿಂದ ನೋಡಬಹುದು. ಬೈನಾಕ್ಯುಲರ್ ಅಥವಾ ಟೆಲಿಸ್ಕೋಪ್ ಇದ್ದರೆ ಉಪಯೋಗಿಸಿ. ಯಾವ ವಿಶೇಷ ತರಹದ ಮುಂಜಾಗ್ರತೆ ಅಗತ್ಯವಿಲ್ಲ. ಮೋಡಗಳಿಲ್ಲದ ಶುಭ್ರ ವಾತಾವಾರಣ ಈ ವಿದ್ಯಾಮಾನವನ್ನು ವೀಕ್ಷಿಸಲು ಅನುಕೂಲಕರ ಎಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. -------------
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.