ಪಿಲ್ಯ ವಾರ್ಷಿಕ ಜಾತ್ರೆ: ಗಾಡ್ಗೀಳ್‌ ಕಲಾ ವೇದಿಕೆ ಉದ್ಘಾಟನೆ

| Published : Apr 12 2025, 12:45 AM IST

ಪಿಲ್ಯ ವಾರ್ಷಿಕ ಜಾತ್ರೆ: ಗಾಡ್ಗೀಳ್‌ ಕಲಾ ವೇದಿಕೆ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಪಿಲ್ಯ ಗ್ರಾಮ ಶ್ರೀಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕ ಜಾತ್ರೆಯ ಸಂದರ್ಭಕ್ಕಾಗಿ ರಥಬೀದಿಯಲ್ಲಿ ನಿರ್ಮಿಸಲಾಗಿರುವ ಗಾಡ್ಗೀಳ್ ಕಲಾ ವೇದಿಕೆಯ ಉದ್ಘಾಟನೆ ಇತ್ತೀಚೆಗೆ ನೆರವೇರಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವವರು ಸದಾ ನೆಮ್ಮದಿಯ, ಆರೋಗ್ಯಪೂರ್ಣ ಜೀವನ ನಡೆಸುತ್ತಾರೆಂಬುದು ಅಧ್ಯಯನದಿಂದ ನಿರೂಪಿಸಲ್ಪಟ್ಟಿದೆ. ದಾನ ಮನೋಭಾವ ಪ್ರತಿಯೊಬ್ಬರಲ್ಲೂ ಬರಬೇಕು ಎಂದು ರಾಮಕುಂಜ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ, ರಾಷ್ಟ್ರಮಟ್ಟದ ಶೈಕ್ಷಣಿಕ ತರಬೇತುದಾರ ಸತೀಶ್ ಮರಾಠೆ ಹೇಳಿದ್ದಾರೆ.

ಪಿಲ್ಯ ಗ್ರಾಮ ಶ್ರೀಗೋಪಾಲಕೃಷ್ಣ ದೇವಸ್ಥಾನದ ವಾರ್ಷಿಕ ಜಾತ್ರೆಯ ಸಂದರ್ಭಕ್ಕಾಗಿ ರಥಬೀದಿಯಲ್ಲಿ ನಿರ್ಮಿಸಲಾಗಿರುವ ಗಾಡ್ಗೀಳ್ ಕಲಾ ವೇದಿಕೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಳದಂಗಡಿಯ ವೈದ್ಯ ಡಾ. ಎನ್.ಎಂ. ತುಳಪುಳೆ ವೇದಿಕೆಯನ್ನು ಉದ್ಘಾಟಿಸಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

ವೇದಿಕೆಯಲ್ಲಿ ದೇವಳದ ತಂತ್ರಿ ಸಂತೋಷ್ ಕೇಳ್ಕರ್, ಆಡಳಿತೆ ಮೊಕ್ತೇಸರ ಸದಾನಂದ ಸಹಸ್ರಬುದ್ಧೆ ಉಪಸ್ಥಿತರಿದ್ದರು. ದೇವಸ್ಥಾನಕ್ಕೆ ವಿವಿಧ ಸಂದರ್ಭಗಳಲ್ಲಿ ಆರ್ಥಿಕ ನೆರವು ನೀಡಿದ ಪಾಕತಜ್ಞರಾದ ದಿನೇಶ್ ಅಭ್ಯಂಕರ್ ಫಂಡಿಜೆ ಹಾಗೂ ದಿನೇಶ್ ಫಾಟಕ್ ಫಂಡಿಜೆ, ಇಂಜಿನಿಯರ್ ಪ್ರಜ್ವಲ್ ಮೆಹೆಂದಳೆ ಬೆಂಗಳೂರು, ಸಾಮಾಜಿಕ ಅರಣ್ಯ ನಿವೃತ್ತ ಅಧಿಕಾರಿ ಗಜಾನನ ನಾತು ಸವಣಾಲು, ನಿವೃತ್ತ ಅಧ್ಯಾಪಕರಾದ ಗೋವಿಂದ ದಾಮಲೆ ಪೆರಡೇಲು ಹಾಗೂ ಸುರೇಶ್ ಹೆಬ್ಬಾರ್ ಫಂಡಿಜೆ, ಮಾರ್ಗದರ್ಶಕರಾದ ಮುರಲೀಧರ ಗೋಖಲೆ ಸೂಳಬೆಟ್ಟು ಇವರನ್ನು ಸಮ್ಮಾನಿಸಲಾಯಿತು.

ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಮಕ್ಕಳಿಂದ ನೃತ್ಯ, ಪಿಂಗಾರ ಕಲಾವಿದರಿಂದ ನಾಟಕ ಪ್ರದರ್ಶನ ನೂತನ ವೇದಿಕೆಯಲ್ಲಿ ನಡೆಯಿತು.

ಮಹೇಶ್ ಗೋಖಲೆ ವೇದಘೋಷ ಮಾಡಿದರು. ಪ್ರವೀಣಚಂದ್ರ ಮೆಹೆಂದಳೆ ಸ್ವಾಗತಿಸಿದರು. ಸಹಮೊಕ್ತೇಸರ ಚಂದ್ರಕಾಂತ ಗೋರೆ ಪ್ರಸ್ತಾವಿಸಿದರು. ದೀಪಕ ಆಠವಳೆ ವಂದಿಸಿದರು. ಶಿಕ್ಷಕ ಗಣರಾಜ ಶೆಂಡ್ಯೆ ಕಾರ್ಯಕ್ರಮ ನಿರ್ವಹಿಸಿದರು.