ಕನ್ನಡಪ್ರಭ ವಾರ್ತೆ ಇಂಡಿ ಜಲಧಾರೆ ಪೈಪ್‌ಲೈನ್ ಕಾಮಗಾರಿಗಾಗಿ ನಗರ ಭಾಗದ ರಸ್ತೆಗಳನ್ನು ಅಗೆದು ಹಾಗೆಯೇ ಬಿಟ್ಟಿರುವುದು ಸಾರ್ವಜನಿಕರು, ವಾಹನ ಸವಾರರಿಗೆ ದೊಡ್ಡ ಕಿರಿಕಿರಿಯಾಗಿದೆ. ಗುತ್ತಿಗೆದಾರರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರಸ್ತೆಗಳು ಸಂಪೂರ್ಣವಾಗಿ ಹಾಳಾಗುತ್ತಿದ್ದು, ವಾಹನ ಸಂಚಾರ ಮತ್ತು ಪಾದಚಾರಿಗಳ ಓಡಾಟಕ್ಕೆ ಆಪತ್ತು ತಂದೊಡ್ಡುತ್ತಿವೆ.
ಖಾಜು ಸಿಂಗೆಗೋಳ
ಕನ್ನಡಪ್ರಭ ವಾರ್ತೆ ಇಂಡಿಜಲಧಾರೆ ಪೈಪ್‌ಲೈನ್ ಕಾಮಗಾರಿಗಾಗಿ ನಗರ ಭಾಗದ ರಸ್ತೆಗಳನ್ನು ಅಗೆದು ಹಾಗೆಯೇ ಬಿಟ್ಟಿರುವುದು ಸಾರ್ವಜನಿಕರು, ವಾಹನ ಸವಾರರಿಗೆ ದೊಡ್ಡ ಕಿರಿಕಿರಿಯಾಗಿದೆ. ಗುತ್ತಿಗೆದಾರರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರಸ್ತೆಗಳು ಸಂಪೂರ್ಣವಾಗಿ ಹಾಳಾಗುತ್ತಿದ್ದು, ವಾಹನ ಸಂಚಾರ ಮತ್ತು ಪಾದಚಾರಿಗಳ ಓಡಾಟಕ್ಕೆ ಆಪತ್ತು ತಂದೊಡ್ಡುತ್ತಿವೆ.
ವಾಹನದ ಚಕ್ರಕ್ಕೆ ಸಿಲುಕಿ ಖಡಿಕಲ್ಲು ಸಿಡಿದು ಪಾದಚಾರಿಗಳಿಗೆ ಅಪಾಯ ಮಾಡುತ್ತಿದೆ. ಹೀಗಾಗಿ ಬಸವೇಶ್ವರ ವೃತ್ತದಲ್ಲಿ ವಾಹನಗಳು ಬಂದರೆ ಕಲ್ಲು ಸಿಡಿದು ಬಡಿಯಬಹುದು ಎಂಬ ಭಯದಲ್ಲಿ ಸಾರ್ವಜನಿಕರದ್ದಾಗಿದೆ.ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸಲು ಆಲಮಟ್ಟಿ ಬಳಿ ಕೃಷ್ಣಾ ನದಿಯಿಂದ ಪೈಪಲೈನ್ ಮೂಲಕ ಒದಗಿಸಲು ಜಾರಿಗೆ ತಂದಿರುವ ಜನಪರ ಯೋಜನೆಯ ಕಾಮಗಾರಿಗೆ ನಗರದ ರಸ್ತೆಗಳು ಹಾಳಾಗಿವೆ. ಪೈಪ್‌ಲೈನ್ ಅಳವಡಿಸಲು ಕಾಂಕ್ರೀಟ್ ರಸ್ತೆಗಳನ್ನು ಅಗೆದು, ಅದನ್ನು ಪುನರ್ ನಿರ್ಮಾಣ ಮಾಡದೆ ಹಾಗೇ ಬಿಡಲಾಗುತ್ತಿದ್ದು, ಇದರಿಂದ ಜನ ಓಡಾಡುವುದೇ ಕಷ್ಟವಾಗಿದೆ.ಅಧಿಕಾರಿಗಳು ಮೌನ: ನಿವಾಸಿಗಳ ಆಕ್ರೋಶಇಂಡಿ ನಗರದ ಮುಖ್ಯರಸ್ತೆಯಲ್ಲಿ ಕೈಗೊಂಡಿರುವ ಜಲಧಾರೆ ಕಾಮಗಾರಿ ಇದಕ್ಕೂ ಮುನ್ನ ಕೋಟ್ಯಂತರ ರೂಪಾಯಿ ವ್ಯಯಿಸಿ ನಿರ್ಮಿಸಿರುವ ಕಾಂಕ್ರೀಟ್ ರಸ್ತೆಗಳನ್ನು ಅಗೆದು ಹದಗೆಡಿಸಲಾಗಿದೆ. ಬೃಹತ್ ಕಟ್ಟಡ ನಿರ್ಮಾಣ ಯಂತ್ರಗಳಿಂದ ಅಗೆದು, ಮುಚ್ಚುತ್ತಿರುವುದರಿಂದ ದೀರ್ಘಕಾಲ ಬಾಳಿಕ ಬರಬೇಕಾದ ರಸ್ತೆಗಳು ವರ್ಷ ತುಂಬುವ ಮುನ್ನ ಸಂಚಾರದ ಯೋಗ್ಯತೆ ಕಳೆದುಕೊಳ್ಳುತ್ತಿವೆ. ಜಲಧಾರೆ ಪೈಪ್‌ಲೈನ್ ಅಳವಡಿಸುವಾಗ ನಿಯಮ ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ಗುತ್ತಿಗೆದಾರರು ಅನುಸರಿಸುತ್ತಿಲ್ಲ. ಇದು ತಿಳಿದಿದ್ದರೂ ಅಧಿಕಾರಿಗಳು ಮೌನ ವಹಿಸಿರುವುದು ಇಲಾಖೆಯ ಮೇಲೆ ಅನುಮಾನ ಹುಟ್ಟಿಸಿದ್ದು, ನಗರದ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.ಕಾಂಕ್ರೀಟ್ ರಸ್ತೆಯ ಒಂದು ಬದಿಯನ್ನು ಯಂತ್ರದಿಂದ ಕತ್ತರಿಸಿ, ಪೈಪ್‌ಲೈನ್ ಅಳವಡಿಸಿದ ಬಳಿಕ ಸುರಕ್ಷಿತವಾಗಿ ಕಾಂಕ್ರೀಟ್‌ನಿಂದ ರಸ್ತೆಯನ್ನು ಸರಿಪಡಿಸಬೇಕು. ಆದರೆ, ಕಾಮಗಾರಿಯ ಗುತ್ತಿಗೆದಾರರು ಬೃಹತ್ ಕಟ್ಟಡ ನಿರ್ಮಾಣ ಯಂತ್ರಗಳಿಂದ ಅಗೆದಿದ್ದರಿಂದ ಸಂಪೂರ್ಣ ರಸ್ತೆಯೇ ಹಾಳಾಗಿವೆ. ಅಲ್ಲದೆ ಕೆಲಕಡೆ ಆ ಗುಂಡಿ ಮುಚ್ಚಲು ಕೇವಲ ಸಿಮೆಂಟ್ ಮಿಶ್ರಿತ ಕಲ್ಲು ಬಳಸಿದ್ದಾರೆ. ಮಳೆ ಬಂದಾಗ ಕೊಚ್ಚಿಕೊಂಡು ಹೋಗಿ ರಸ್ತೆಯ ಮೇಲೆ ನೀರು ನಿಂತು ಚರಂಡಿ ಶೇಖರಣೆಯಾಗಿ, ಕೊಳಚೆ ನೀರು ಸರಾಗವಾಗಿ ಹರಿಯುತ್ತಿಲ್ಲ ಎಂಬುವುದು ಸ್ಥಳೀಯರ ಆರೋಪ. ಕೋಟ್ಯಂತರ ವೆಚ್ಚದ ಕಾಮಗಾರಿಯನ್ನು ಈ ರೀತಿ ಅವೈಜ್ಞಾನಿಕವಾಗಿ ನಡೆಸುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ರಸ್ತೆ ದುಸ್ಥಿತಿಯಲ್ಲಿದ್ದರೂ ಅಧಿಕಾರಿಗಳು ತಲೆ ಕೆಡಿಸಿಕೊಳ್ಳದಿರುವುದು ಇತ್ತ ವಾಹನ ಸವಾರರಿಗೆ, ಸ್ಥಳೀಯ ನಿವಾಸಿಗಳಿಗೆ ಅಸಮಾಧಾನವುಂಟು ಮಾಡಿದೆ.ಪೌರಾಯುಕ್ತರ ಮಾತು ಕೇಳದ ಜಲಧಾರೆ ಅಧಿಕಾರಿಗಳು:
ನಗರದ ವಿಜಯಪುರ ರಸ್ತೆಯಿಂದ ಬಸವೇಶ್ವರ ವೃತ್ತದವರೆಗಿನ ರಸ್ತೆ ಅಗೆದು ಹಾಳು ಮಾಡಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಜಲಧಾರೆ ಅಧಿಕಾರಿ, ಗುತ್ತಿಗೆದಾರರಿಗೆ ನಗರಸಭೆ ಪೌರಾಯುಕ್ತರು ಹಲವು ಬಾರಿ ಕರೆ ಮಾಡಿ ತಿಳಿಸಿದರೂ ಜಲಧಾರೆ ಗುತ್ತಿಗೆದಾರ,ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ. ನಗರಸಭೆ ಪೌರಾಯುಕ್ತರು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.ನಗರದಲ್ಲಿ ಕೈಗೊಳ್ಳುವ ಕಾಮಗಾರಿಗೆ ನಗರಸಭೆಯಿಂದ ಅನುಮತಿ ಪಡೆದು, ಹಾಳಾಗುವ ರಸ್ತೆ ಪುನಃ ದುರಸ್ತಿಗೊಳಿಸುವ ಕರಾರುಪತ್ರ ನೀಡಿದರೂ ಜಲಧಾರೆ ಅಧಿಕಾರಿ, ಗುತ್ತಿಗೆದಾರರು ಇದ್ಯಾವುದು ನಮಗೆ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ವಾಹನಗಳ ಚಕ್ರದಿಂದ ಖಡಿಕಲ್ಲು ಸಿಡಿದು ಸಾರ್ವಜನಿಕರ ಜೀವಕ್ಕೆ ಹಾನಿಯಾದರೇ ಜಲಧಾರೆ ಅಧಿಕಾರಿ,ಗುತ್ತಿಗೆದಾರರೇ ಹೊಣೆಯಾಗಬೇಕಾಗುತ್ತದೆ ಎಂದು ಸಾರ್ವಜನಿಕರ ಎಚ್ಚರಿಕೆ.--------------
ಕೋಟ್...ಜಲಧಾರೆ ಯೋಜನೆಯ ಕಾಮಗಾರಿ ಕೈಗೊಂಡಿದ್ದರಿಂದ ನಗರದ ವಿಜಯಪುರ ರಸ್ತೆ,ಬಸವೇಶ್ವರ ವೃತ್ತದಲ್ಲಿ ರಸ್ತೆ ಹಾಳಾಗಿದೆ. ರಸ್ತೆ ದುರಸ್ತಿಗೊಳಿಸಲು ಜಲಧಾರೆ ಪ್ರೊಜೆಕ್ಟ್ ಮ್ಯಾನೇಜರ್ ಅವರಿಗೆ ಸಾಕಷ್ಟು ಬಾರಿ ಹೇಳಿದ್ದೇವೆ. ಸ್ಪಂದಿಸುತ್ತಿಲ್ಲ.
-ಶಿವಾನಂದ ಪೂಜಾರಿ, ಪೌರಾಯುಕ್ತರು, ನಗರಸಭೆ, ಇಂಡಿ.ನಗರದ ಬಸವೇಶ್ವರ ವೃತ್ತದಲ್ಲಿ ನಿತ್ಯ ಭಾರೀ ಗಾತ್ರದ ವಾಹನಗಳು ಸೇರಿದಂತೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ಜಲಧಾರೆ ಯೋಜನೆ ಕಾಮಗಾರಿಯಿಂದ ರಸ್ತೆ ಸಂಪೂರ್ಣ ಹಾಳಾಗಿದೆ.ಕಲ್ಲುಗಳು ಮೇಲೆ ಬಂದು ವಾಹನಗಳ ಚಕ್ರಕ್ಕೆ ಸಿಲುಕಿ ಸಿಡಿಯುತ್ತಿವೆ. ಇದು ಜನರಿಗೆ ಅಪಾಯ ಆಗುವ ಸಾಧ್ಯತೆ ಇದೆ. ಬೇಗ ರಸ್ತೆ ದುರಸ್ತಿಗೊಳಿಸಿ,ಅಪಾಯ ತಪ್ಪಿಸಬೇಕು.-ಮಹೇಶ ಕುಂಬಾರ, ಇಂಡಿ ನಗರ ನಿವಾಸಿ.