ಬಾದಾಮಿ ಬನಶಂಕರಿಗೆ ತರೀಕೆರೆ ಭಕ್ತರಿಂದ ಪೀತಾಂಬರ ಸೀರೆ ಸಮರ್ಪಣೆ

| Published : Jan 17 2025, 12:47 AM IST

ಸಾರಾಂಶ

ತರೀಕೆರೆ, ದೇವಾಂಗ ಸಮಾಜದ ಕುಲದೇವತೆ ಬಾದಾಮಿ ಬನಶಂಕರಿ ದೇವಿಗೆ ಕುಲಕಸುಬು ದ್ಯೋತಕವಾಗಿ ತರೀಕೆರೆಯ ಸಮಾಜ ಬಾಂಧವರು ಕುಲಕಸುಬಿನ ದ್ಯೋತಕವಾಗಿ ಮಡಿಯಿಂದ ನೇಯ್ದ ಪಿತಾಂಬರ ಸೀರೆಯನ್ನು ಹಂಪೆಯ ಶ್ರೀ ಹೆಮಕೂಟದ ಗಾಯತ್ರಿ ದೇವಸ್ಥಾನದಿಂದ ಶ್ರೀ ಪೀಠದ ಜಗದ್ಗುರು ದಯಾನಂದ ಪುರಿ ಸ್ವಾಮೀಜಿ ನೇತೃತ್ವದಲ್ಲಿ ಪಲ್ಲಕ್ಕಿಯಲ್ಲಿ ಹೊತ್ತು ಪಾದಯಾತ್ರೆ ಮೂಲಕ ಬಾದಾಮಿ ಬನಶಂಕರಿದೇವಿಗೆ ಬನದ ಹುಣ್ಣಿಮೆಯ ಹಿಂದಿನ ದಿನ ಸಮರ್ಪಿಸಲಾಯಿತು ಎಂದು ದೇವಾಂಗ ಸಮಾಜದ ಮುಖಂಡ, ಪುರಸಭಾ ಮಾಜಿ ಸದಸ್ಯ ಟಿ.ಆರ್.ಶ್ರೀಧರ್ ತಿಳಿಸಿದ್ದಾರೆ.

ಹಂಪೆಯಿಂದ ಬಾದಾಮಿಗೆ ಪಾದಯಾತ್ರೆ । ಬೆಳ್ಳಿಯ ಪೆಟ್ಟಿಗೆಯಲ್ಲಿಟ್ಟ ಪೀತಾಂಬರ ಪಲ್ಲಕ್ಕಿ

ಕನ್ನಡಪ್ರಭ ವಾರ್ತೆ, ತರೀಕೆರೆ

ದೇವಾಂಗ ಸಮಾಜದ ಕುಲದೇವತೆ ಬಾದಾಮಿ ಬನಶಂಕರಿ ದೇವಿಗೆ ಕುಲಕಸುಬು ದ್ಯೋತಕವಾಗಿ ತರೀಕೆರೆಯ ಸಮಾಜ ಬಾಂಧವರು ಕುಲಕಸುಬಿನ ದ್ಯೋತಕವಾಗಿ ಮಡಿಯಿಂದ ನೇಯ್ದ ಪಿತಾಂಬರ ಸೀರೆಯನ್ನು ಹಂಪೆಯ ಶ್ರೀ ಹೆಮಕೂಟದ ಗಾಯತ್ರಿ ದೇವಸ್ಥಾನದಿಂದ ಶ್ರೀ ಪೀಠದ ಜಗದ್ಗುರು ದಯಾನಂದ ಪುರಿ ಸ್ವಾಮೀಜಿ ನೇತೃತ್ವದಲ್ಲಿ ಪಲ್ಲಕ್ಕಿಯಲ್ಲಿ ಹೊತ್ತು ಪಾದಯಾತ್ರೆ ಮೂಲಕ ಬಾದಾಮಿ ಬನಶಂಕರಿದೇವಿಗೆ ಬನದ ಹುಣ್ಣಿಮೆಯ ಹಿಂದಿನ ದಿನ ಸಮರ್ಪಿಸಲಾಯಿತು ಎಂದು ದೇವಾಂಗ ಸಮಾಜದ ಮುಖಂಡ, ಪುರಸಭಾ ಮಾಜಿ ಸದಸ್ಯ ಟಿ.ಆರ್.ಶ್ರೀಧರ್ ತಿಳಿಸಿದ್ದಾರೆ.ಸಮಾಜದ ಸಂಸ್ಕೃತಿ ಮತ್ತು ಸಂಪ್ರದಾಯದ ಪ್ರತೀಕವಾಗಿ ಈ ಪರಂಪರೆ ನಡೆದುಕೊಂಡುಬರುತ್ತಿದ್ದು, ಅದರಂತೆ ಚಾಲುಕ್ಯರ ನಾಡಿನ ಅಧಿದೇವತೆ ದೇವಾಂಗ ಸಮಾಜದ ಕುಲದೇವತೆ ಬಾದಾಮಿ ಬನಶಂಕರಿ ದೇವಿಗೆ ಶ್ರೀ ಹಂಪೆ ಹೇಮಕೂಟ ಗಾಯತ್ರಿಪೀಠ ಮಹಾಸಂಸ್ಥಾನದಿಂದ ಪೀತಂಬರ ಸಮರ್ಪಣೆ ಸುಸೂತ್ರವಾಗಿ ನೇರವೇರಿತು.ಈ ಬಾರಿ ಅಂದರೆ 2025ರ 7ನೇ ವರ್ಷದ ಪಿತಾಂಬರ ಸೀರೆ ಸಮರ್ಪಣ ಸೇವಾ ಕಾರ್ಯದ ಅವಕಾಶ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಭಕ್ತರಾದ ಟಿ.ಆರ್. ಶ್ರೀಧರ ಮತ್ತು ಶ್ರೀನಿವಾಸ ಕುಟುಂಬದವರಿಗೆ ದೊರೆತಿದ್ದು ಈ ಸೇವೆ 2040ರ ವರೆಗೂ ನಿಗದಿಯಾಗಿದೆ ಎಂದು ತಿಳಿಸಿದ್ದಾರೆ.ಈ ಪಿತಾಂಬರ ಸೀರೆ ಸಮರ್ಪಣ ಕಾರ್ಯ ದೇವಾಂಗ ಸಮಾಜದಿಂದ ಶತಶತಮಾನಗಳಿಂದ ನಡೆಯುತ್ತಿದ್ದು ಕಾರಣಾಂತರ ಗಳಿಂದ ಸ್ಥಗಿತಗೊಂಡಾಗ ಇಳಕಲ್ ನ ದೇವಾಂಗ ನೇಕಾರ ಭಕ್ತರಿಂದ ಪುನರಾರಂಭವಾಗಿತ್ತು. ನಂತರದಲ್ಲಿ ಸಮರ್ಪಣ ಕಾರ್ಯ 2019ರಿಂದ ದೇವಾಂಗ ಸಮಾಜದ ಶ್ರೀ ಗಾಯತ್ರಿ ಪೀಠದಿಂದ ನಡೆದುಕೊಂಡು ಬರುತ್ತಿದೆ. ಈ ಪಿತಾಂಬರ ಸೀರೆಯನ್ನು ರಬಕವಿಯ ಥಶಾಕಂಬರಿ ಕೈಮಗ್ಗ ಸಹಕಾರ ಸಂಘದ ಸದಸ್ಯ ಮಹಿಳಾ ನೇಕಾರರು ತಿಂಗಳುಗಳ ಕಾಲ ಮಡಿಯಿಂದ ನೇಯ್ದು ಬಾದಾಮಿ ಬನಶಂಕರಿದೇವಿ ಜಾತ್ರೆಯ 7 ದಿನಗಳ ಮುಂಚೆ ಘಟ ಸ್ಥಾಪನೆ ದಿನ ಶ್ರೀ ಹಂಪೆ ಹೇಮಕೂಟ ಗಾಯತ್ರಿಪೀಠ ಮಹಾಸಂಸ್ಥಾನದ ಗಾಯತ್ರಿ ದೇವಸ್ಥಾನದಲ್ಲಿ ಹೋಮ-ಹವನ ಪೂಜೆ ಮಾಡಿ ಸೀರೆಯನ್ನು ಬೆಳ್ಳಿ ಪೆಟ್ಟಿಗೆಯಲ್ಲಿರಿಸಿ ಪೆಟ್ಟಿಗೆಯನ್ನು ಪಲ್ಲಕ್ಕಿಯಲ್ಲಿ ಹೊತ್ತು ಮಂಗಳ ವಾದ್ಯದೊಡನೆ ಹಂಪೆಯಿಂದ ಬಾದಾಮಿ ಬನಶಂಕರಿ ದೇಗುಲದ ವರೆಗೆ ಸುಮಾರು 150 ಕಿ.ಮೀ.ದೂರವನ್ನು ಏಳು ದಿವಸಗಳ ಕಾಲ ಪಾದಯಾತ್ರೆಯಲ್ಲಿ ತೆರಳುತ್ತಾರೆ. ದಾರಿಯುದ್ದಕ್ಕೂ ಸಿಗುವ ಊರಿನ ಭಕ್ತರು ಭಕ್ತಿಪೂರ್ವಕವಾಗಿ ಮಂಗಳ ವಾದ್ಯಗಳೊಡನೆ ಬರಮಾಡಿಕೊಂಡು ಅನ್ನ ಪ್ರಸಾದ ವಿತರಿಸಿ ಪಾದಯಾತ್ರೆಯಲ್ಲಿ ಸೇರಿಕೊಂಡು ಬಾದಾಮಿ ತಲುಪಿ ಬನದ ಹುಣ್ಣಿಮೆ ಹಿಂದಿನ ದಿನ ಸಂಜೆ ಬನಶಂಕರಿದೇವಿ ಸನ್ನಿದಿಯಲ್ಲಿ ದೇವಾಸ್ಥಾನದ ಮುಖ್ಯ ಪ್ರಧಾನ ಅರ್ಚಕರಿಗೆ ಸಮರ್ಪಣೆ ಮಾಡಲಾಯಿತು.ಬನದ ಹುಣ್ಣಿಮೆ ದಿನ ಬ್ರಾಹ್ಮಿಕಾಲದಲ್ಲಿ ಅಭಿಷೇಕದ ನಂತರ ಜಗನ್ಮಾತೆ ಬನಶಂಕರಿ ದೇವಿಗೆ ಪ್ರಪ್ರಥಮವಾಗಿ ಈ ಪಿತಾಂಬರ ಸೀರೆ ಉಡಿಸಿ ನಂತರ ಭಕ್ತರು ಅರ್ಪಿಸಿದ ಮಂಗಳ ಕರವಸ್ತು ಮತ್ತು ಸುಗಂಧದ್ರವ್ಯಗಳೊಂದಿಗೆ ಆಭರಣ ಹೂ-ಮಾಲೆ ಗಳೊಂದಿಗೆ ಅಲಂಕೃತಗೊಳಿಸಿ ದೇವಿಯ ಪೂಜೆ ನೆರವೇರಿಸುತ್ತಾರೆ.ಪಾದಯಾತ್ರೆಯಲ್ಲಿ ಭಾಗವಹಿಸಿದ ನೂರಾರು ಮುತ್ತೈದೆ-ಕನ್ಯೆಯರಿಗೆ ಟಿ.ಆರ್. ಶ್ರೀಧರ ಮತ್ತು ಶ್ರೀನಿವಾಸ ಕುಟುಂಬದವರು ಉಡಿ ತುಂಬಿ ಗೌರವಿಸಿದರು.ವರ್ಷದಿಂದ ವರ್ಷಕ್ಕೂ ಈ ಪಿತಾಂಬರ ಸೀರೆ ವಸ್ತ್ರ ಸಮರ್ಪಣ ಪಾದಯಾತ್ರೆಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದ್ದು ಈಗಾಗಲೇ 50 ಲಕ್ಷಕ್ಕೂ ಹೆಚ್ಚಿನ ಹಣ ಭಕ್ತರಿಂದ ಸಂಗ್ರಹವಾಗಿದ್ದು ಇನ್ನೂ ಹೆಚ್ಚಿನ ಹಣ ಸಂಗ್ರಹಿಸುವ ಕೆಲಸ ಪಾದಯಾತ್ರೆ ಸೇವಾ ಸಮಿತಿ ಅಚ್ಚುಕಟ್ಟಾಗಿ ನೆರವೇರಿಸುತ್ತಿದೆ ಎಂದು ತಿಳಿಸಿದ್ದಾರೆ.-16ಕೆಟಿಆರ್..ಕೆ.8. ಪಾದಯಾತ್ರೆ ಮೂಲಕ ಪಲ್ಲಕ್ಕಿಯಲ್ಲಿ ಬನಶಂಕರಿ ದೇವಿಯವರಿಗೆ ಪೀತಾಂಬರ ಸೀರೆ ಸಮರ್ಪಣೆ16ಕೆಟಿಆರ್.ಕೆ.9ಃ ಶ್ರೀ ಬನಶಂಕರಿ ದೇವಿಯವರಿಗೆ ಪೀತಾಂಬರ ಸೀರೆ ಸಮರ್ಪಣಾ ಕಾರ್ಯ