ಸಾರಾಂಶ
ರೈತರ ಹಾಗೂ ಮಧ್ಯಮ ವರ್ಗದ ಜನರ ಆರ್ಥಿಕ ಪ್ರಗತಿಗೆ ಪಿಕೆಪಿಎಸ್ ಸಂಘಗಳು ಸಾಕಷ್ಟು ನೆರವು ನೀಡುತ್ತಿವೆ. ರೈತರು ಸಂಘದಿಂದ ಸಾಲದ ಸದುಪಯೋಗ ಪಡಿಸಿಕೊಳ್ಳಬೇಕು. ಆರ್ಥಿಕವಾಗಿ ಬಲಿಷ್ಠರಾಗಬೇಕೆಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ರೈತರ ಹಾಗೂ ಮಧ್ಯಮ ವರ್ಗದ ಜನರ ಆರ್ಥಿಕ ಪ್ರಗತಿಗೆ ಪಿಕೆಪಿಎಸ್ ಸಂಘಗಳು ಸಾಕಷ್ಟು ನೆರವು ನೀಡುತ್ತಿವೆ. ರೈತರು ಸಂಘದಿಂದ ಸಾಲದ ಸದುಪಯೋಗ ಪಡಿಸಿಕೊಳ್ಳಬೇಕು. ಆರ್ಥಿಕವಾಗಿ ಬಲಿಷ್ಠರಾಗಬೇಕೆಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.ಅವರು ಸಮೀಪದ ಹಳದೂರು ಗ್ರಾಮದಲ್ಲಿ ನವೀಕರಣಗೊಂಡ ಪಿಕೆಪಿಎಸ್ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿ, ರೈತರ ಕಾಳಜಿ ಹೊಂದಿದ ಸಿಎಂ ಸಿದ್ದರಾಮಯ್ಯ ರೈತರ ಸಾಲ, ಬಡ್ಡಿ ಮನ್ನಾ ಮಾಡಿ ರೈತರ ಹಿತ ಕಾಪಾಡಿದ್ದಾರೆ. ರೈತರು ಕೂಡಾ ಕೈಗಡವಾಗಿ ಹೆಚ್ಚಿನ ಬಡ್ಡಿ ಸಾಲ ಪಡೆದು ಕಷ್ಟ ಅನುಭವಿಸಬೇಡಿ. ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಕಡಿಮೆ ಬಡ್ಡಿಯಲ್ಲಿ ಸಾಲ ಪಡೆದು ಆರ್ಥಿಕವಾಗಿ ಚೇತರಿಸಿಕೊಳ್ಳಬೇಕೆಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ರೈತರ ಏಳಿಗೆಯಲ್ಲಿ ಪಿಕೆಪಿಎಸ್ ಮಹತ್ವದ ಪಾತ್ರ ವಹಿಸುತ್ತದೆ. ರೈತರು ಸಾಲ ಪಡೆದು ಉತ್ತಮ ಬೆಳೆ ಬೆಳೆದು ಸಕಾಲದಲ್ಲಿ ಸಾಲ ಮರುಪಾವತಿಸಬೇಕೆಂದರು.ಮಾಜಿ ಶಾಸಕ ರಾಜಶೇಖರ ಶೀಲವಂತ, ಮೈಲಾರಲಿಂಗೇಶ್ವರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಮಹೇಶ ಹೊಸಗೌಡರ, ಎಸ್.ಎಸ್.ಮಠ ಮಾತನಾಡಿದರು. ಪಿಕೆಪಿಎಸ್ ಸಂಘದ ಅಧ್ಯಕ್ಷ ತಿಪ್ಪಣ್ಣ ಗೌಡರ ಅಧ್ಯಕ್ಷತೆ ವಹಿಸಿದ್ದರು. ಅಭಿನವ ಒಪ್ಪತ್ತೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಮುತ್ತವ್ವ ಕೊಳಮಲಿ, ಉಪಾಧ್ಯಕ್ಷ ಬಸವನಗೌಡ ಗೌಡರ, ಕಮಲಕಿಶೋರ ಮಾಲಪಾಣಿ, ವೆಂಕನಗೌಡ ಪಾಟೀಲ, ಸಂಘದ ಉಪಾಧ್ಯಕ್ಷ ಬೈಲಪ್ಪ ಗಾಬಿನ, ಯೋಗಪ್ಪ ಕೊಟ್ನಳ್ಳಿ, ಲಕ್ಷ್ಮಪ್ಪ ರಡ್ಡೆರ, ಶ್ರೀಕಾಂತ ವಾಲಿಕಾರ, ರಾಮನಗೌಡ ಗೌಡರ, ಪಾರ್ವತೆವ್ವ ಬನ್ನಟ್ಟಿ, ಹನಮವ್ವ ಕುರಿ ಸೇರಿದಂತೆ ಇತತರು ಇದ್ದರು.