ಪ್ರಮುಖ ರಸ್ತೆಗಳಲ್ಲಿ ಸಾಗಿದ ವಾಕಾಥಾನ್ ಪುರಭವನ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಯ ಬಳಿ ಅಂತ್ಯವಾಯಿತು.

ಕನ್ನಡಪ್ರಭ ವಾರ್ತೆ ಮೈಸೂರು

ಸಂವಿಧಾನ ಜಾರಿಗೆ ಬಂದು 75 ವರ್ಷಗಳಾದ ವಿಶೇಷವಾಗಿ ಭೀಮ ಬಲ ಬಳಗವು ಭಾನುವಾರ ಸಂವಿಧಾನ ಸಂಭ್ರಮದ ನಡಿಗೆ ಶೀರ್ಷಿಕೆಯಲ್ಲಿ ವಾಕಾಥಾನ್ ಆಯೋಜಿಸಿತ್ತು.

ಮೈಸೂರು ವಿವಿ ಕ್ರಾಫರ್ಡ್ ಭವನ ಮುಂಭಾಗದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಆರಂಭವಾದ ವಾಕಾಥಾನ್ ಗೆ ಮೈಸೂರು ವಿವಿ ವಿದ್ಯಾರ್ಥಿ ಕ್ಷೇಮಪಾಲನ ನಿರ್ದೇಶನಾಲಯ ನಿರ್ದೇಶಕ ಗುರುಸಿದ್ದಯ್ಯ, ಸಿಂಡಿಕೇಟ್ ಮಾಜಿ ಸದಸ್ಯ ಶರತ್ ಸತೀಶ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್ ಅವರು ಚಾಲನೆ ನೀಡಿದರು.

ಪ್ರಮುಖ ರಸ್ತೆಗಳಲ್ಲಿ ಸಾಗಿದ ವಾಕಾಥಾನ್ ಪುರಭವನ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಯ ಬಳಿ ಅಂತ್ಯವಾಯಿತು. ಈ ವೇಳೆ ಸಂವಿಧಾನ ಪೀಠಿಕೆಯನ್ನು ಸಾಮೂಹಿಕವಾಗಿ ಓದುವ ಮೂಲಕ ಸಂವಿಧಾನ 75 ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಭೀಮ ಬಲ ಬಳಗದ ಸಂಚಾಲಕರಾದ ಪರಮಾನಂದ, ನಟರಾಜ್ ಶಿವಣ್ಣ, ವೇದಾವತಿ, ಮಹೇಶ್, ಕಾರ್ತಿಕ್ ಮರಿಯಪ್ಪ, ಸುರೇಶ್ ನಾಡನಹಳ್ಳಿ, ನವೀನ್ ಮೌರ್ಯ, ಅಶ್ವಿನಿ ಶರತ್, ಪ್ರಫುಲ್ಲ ಮಲ್ಲಾಡಿ, ಕಿರಣ್ ಸಂದೇಶ್, ಪುಟ್ಟಮಣಿ, ಪುಷ್ಪಾ ಮೊದಲಾದವರು ಇದ್ದರು.