ದಾಬಸ್‍ಪೇಟೆ: ಮಾಜಿ ಸಂಸದ ಡಿ.ಕೆ.ಸುರೇಶ್ ಅಧ್ಯಕ್ಷರಾದ ಮೇಲೆ ನಷ್ಟದಲ್ಲಿದ್ದ ಬಮೂಲ್ ಸಂಸ್ಥೆ ಲಾಭದತ್ತ ಹೆಜ್ಜೆ ಹಾಕಿದೆ. ಪ್ರಸ್ತುತ 60 ಕೋಟಿ ಲಾಭ ಗಳಿಸಿದ್ದು, ಅವರ ನೇತೃತ್ವದಲ್ಲಿ ಉತ್ತಮ ಸಾಧನೆ ಮಾಡುತ್ತಿದೆ. ಲಾಭದಿಂದ ಪ್ರತಿ ಲೀಟರ್‌ಗೆ 1 ರು. ಪ್ರೋತ್ಸಾಹ ಧನ ನೀಡಲಾಗುತ್ತದೆ. ಅದಲ್ಲದೆ ಬಮೂಲ್‌ನಿಂದಲೇ ಪಶು ಆಹಾರ ಕಾರ್ಖಾನೆ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಬಮೂಲ್ ನಿರ್ದೇಶಕ ನಾಗರಾಜು ತಿಳಿಸಿದರು
ದಾಬಸ್‍ಪೇಟೆ: ಮಾಜಿ ಸಂಸದ ಡಿ.ಕೆ.ಸುರೇಶ್ ಅಧ್ಯಕ್ಷರಾದ ಮೇಲೆ ನಷ್ಟದಲ್ಲಿದ್ದ ಬಮೂಲ್ ಸಂಸ್ಥೆ ಲಾಭದತ್ತ ಹೆಜ್ಜೆ ಹಾಕಿದೆ. ಪ್ರಸ್ತುತ 60 ಕೋಟಿ ಲಾಭ ಗಳಿಸಿದ್ದು, ಅವರ ನೇತೃತ್ವದಲ್ಲಿ ಉತ್ತಮ ಸಾಧನೆ ಮಾಡುತ್ತಿದೆ. ಲಾಭದಿಂದ ಪ್ರತಿ ಲೀಟರ್‌ಗೆ 1 ರು. ಪ್ರೋತ್ಸಾಹ ಧನ ನೀಡಲಾಗುತ್ತದೆ. ಅದಲ್ಲದೆ ಬಮೂಲ್‌ನಿಂದಲೇ ಪಶು ಆಹಾರ ಕಾರ್ಖಾನೆ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಬಮೂಲ್ ನಿರ್ದೇಶಕ ನಾಗರಾಜು ತಿಳಿಸಿದರು.
ತ್ಯಾಮಗೊಂಡ್ಲು ಹೋಬಳಿಯ ಮುದ್ದಲಿಂಗನಹಳ್ಳಿ ಡೇರಿಯ ರಜತ ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಅಧಿಕ ಹಾಲು ಕರೆಯುವ ಸ್ಪರ್ಧೆ, ಬರಡು ರಾಸುಗಳ ಚಿಕಿತ್ಸೆ, ವಿಶ್ರ ತಳಿ ಕರುಗಳ ಪ್ರದರ್ಶನ, ಹೈನುಗಾರರಿಗೆ ಬೆಳ್ಳಿ ನಾಣ್ಯ ವಿತರಣೆ, ರಾಸುಗಳಿಗೆ ಔಷಧೋಪಚಾರ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಹೆಬ್ಬಾಳ ಪಶುಪಾಲನಾ ಕೇಂದ್ರದ ಪಶು ವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ.ರವೀಂದ್ರನಾಥ್ ಮಲ್ಲಪ್ಪ ಮಾತನಾಡಿ, ಸುಮಾರು 16 ಬರಡು ರಾಸುಗಳಿಗೆ ಚಿಕಿತ್ಸೆ ನೀಡಲಾಗಿದೆ. ನೆಲಮಂಗಲ ತಾಲೂಕಿನ ವೈದ್ಯರ ತಂಡ ರೈತರಿಗೆ ಅಗತ್ಯ ಮಾಹಿತಿ ನೀಡಿ, ಗೋವುಗಳಲ್ಲಿ ಬರಡು ತನ ಕಡಿಮೆ ಮಾಡಿದ್ದಾರೆ. ಸಮತೋಲನ ಆಹಾರ ನೀಡುವುದರಿಂದ ರಾಸುಗಳಲ್ಲಿ ಬಂಜೆತನ ಕಡಿಮೆ ಮಾಡಬಹುದು. ಶಿಬಿರದಲ್ಲಿ ಅಗತ್ಯ ಔಷಧೋಪಚಾರ ಮತ್ತು ಲಸಿಕೆ ಸಹ ನೀಡಿದ್ದೇವೆ ಎಂದರು.
ನೆಲಮಂಗಲ ಬಮೂಲ್ ನಿರ್ದೇಶಕ ಭವಾನಿ ಶಂಕರ್ ಬೈರೇಗೌಡ ಮಾತನಾಡಿ, ನಾನು ನೆಲಮಂಗಲ ತಾಲೂಕು ವ್ಯಾಪ್ತಿಯ ನಿರ್ದೇಶಕನಾಗಿ ಆಯ್ಕೆಯಾದ ಮೇಲೆ ತಾಲೂಕಿನಲ್ಲಿ ಡೇರಿಗಳ ಸ್ಥಾಪನೆ, ಹೈಮಾಸ್ಟ್ ದೀಪ, ಕುಡಿಯುವ ನೀರಿನ ಘಟಕ ಸೇರಿದಂತೆ ಹೈನುಗಾರಿಕೆಗೆ ಮೂಲ ಸೌಲಭ್ಯ ಅಭಿವೃದ್ಧಿಗೆ ಒತ್ತು ನೀಡಿದ್ದು ಇಂದು ಬೆಳ್ಳಿಹಬ್ಬಆಚರಿಸುತ್ತಿದ್ದೇವೆ ಎಂದರು.ಕಾರ್ಯಕ್ರಮದಲ್ಲಿ ಸುಮಾರು 29 ಹಸುಗಳು ಅಧಿಕ ಹಾಲು ಕರೆಯುವ ಸ್ಪರ್ಧೆ, 46 ಕರುಗಳ ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನ, ಸುಮಾರು 16 ಬರಡು ರಾಸುಗಳಿಗೆ ತಜ್ಞ ವೈದ್ಯರು ಚಿಕಿತ್ಸೆ ನಡೆಸಿದರು, ಇದೇ ವೇಳೆ ಹೈನುಗಾರರಿಗೆ ಚೆಕ್ ವಿತರಣೆ, ಬೆಳ್ಳಿ ನಾಣ್ಯ ಹಂಚಿಕೆ, ನಗದು ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎ.ಡಿ.ಶಿವರಾಮು, ಬಮೂಲ್ ನಿರ್ದೇಶಕರಾದ ಬೈರೇಗೌಡ, ಮುನಿರಾಜು, ಪಿ.ನಾಗರಾಜು, ಡಾ.ಶಿವರಾಮ್, ಡೇರಿ ಮಾಜಿ ಸಿಇಒ ಗಂಗಾಧರ್, ಡೇರಿ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷ ಜನಾರ್ದನ್, ನರಸಿಂಹಮೂರ್ತಿ, ದೇವರಾಜು, ಗಂಗಾಧರಯ್ಯ, ಚಂದ್ರಶೇಖರ್, ಲಕ್ಷ್ಮಿಕಾಂತ್, ಗೋಪಾಲ್, ರಿಯಾಜ್ ಪಾಷಾ, ಗೌರಮ್ಮ, ನೂಸರತ್ ಜರೀನಾ, ಸತೀಶ್, ಚಿಕ್ಕತಿಮ್ಮಯ್ಯ, ಸಿಇಒ ತಿಮ್ಮೇಗೌಡ, ಎಪಿಎಂಸಿ ಮಾಜಿ ನಿರ್ದೇಶಕ ಗಂಗಣ್ಣ, ಪಿಎಲ್ ಡಿ ಬ್ಯಾಂಕ್ ನಿರ್ದೇಶಕರಾದ ಗುರುಪ್ರಕಾಶ್, ನಾಗಭೂಷಣ್, ತಾಪಂ ಮಾಜಿ ಅಧ್ಯಕ್ಷ ಪುಟ್ಟಗಂಗಯ್ಯ, ವಕೀಲ ಅನ್ನದಾನಯ್ಯ, ಜಗದೀಶ್, ಬಮೂಲ್ ರಮೇಶ್ ಉಪಸ್ಥಿತರಿದ್ದರು.ಪೋಟೋ 5 : ತ್ಯಾಮಗೊಂಡ್ಲು ಹೋಬಳಿಯ ಮುದ್ದಲಿಂಗನಹಳ್ಳಿ ಡೇರಿಯ ರಜತ ಮಹೋತ್ಸವವನ್ನು ಬಮೂಲ್ ನಿರ್ದೇಶಕರಾದ ನಾಗರಾಜು, ಭವಾನಿ ಶಂಕರ್ ಬೈರೇಗೌಡ ಉದ್ಘಾಟಿಸಿದರು.