ತೋಟಗಾರಿಕೆ ಇಲಾಖೆ ವತಿಯಿಂದ ಉಡುಪಿಯ ದೊಡ್ಡಣಗುಡ್ಡೆ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರದ ಪುಷ್ಪ ಹರಾಜು ಕೇಂದ್ರ (ರೈತ ಸೇವಾ ಕೇಂದ್ರ)ದ ಆವರಣದಲ್ಲಿ ಸಾರ್ವಜನಿಕರು ಹಾಗೂ ರೈತರಿಗಾಗಿ ಆಯೋಜಿಸಲಾಗಿರುವ ಮೂರು ದಿನಗಳ (ಆ. 14-16) ಸಸ್ಯಸಂತೆಯನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಉದ್ಘಾಟಿಸಿದರು.

ಉಡುಪಿ: ತೋಟಗಾರಿಕೆ ಇಲಾಖೆ ವತಿಯಿಂದ ಉಡುಪಿಯ ದೊಡ್ಡಣಗುಡ್ಡೆ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರದ ಪುಷ್ಪ ಹರಾಜು ಕೇಂದ್ರ (ರೈತ ಸೇವಾ ಕೇಂದ್ರ)ದ ಆವರಣದಲ್ಲಿ ಸಾರ್ವಜನಿಕರು ಹಾಗೂ ರೈತರಿಗಾಗಿ ಆಯೋಜಿಸಲಾಗಿರುವ ಮೂರು ದಿನಗಳ (ಆ. 14-16) ಸಸ್ಯಸಂತೆಯನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ಮಳೆಗಾಲದಲ್ಲಿ ತೊಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿರುವ ಸಸ್ಯಸಂತೆ ಸಮಯೋಚಿತವಾಗಿದ್ದು, ತೋಟಗಾರಿಕೆ ಗಿಡಗಳು, ಹೂವು, ಹಣ್ಣಿನ ಗಿಡಗಳನ್ನು ಬೆಳೆದವರ ಮಾರಾಟಕ್ಕೆ ಮತ್ತು ಅವುಗಳ ಅವಶ್ಯಕತೆ ಇರುವರಿಗೆ ಕೊಳ್ಳುವುದಕ್ಕೆ ಅನುಕೂಲವಾಗುತ್ತದೆ ಎಂದರು. ಸಸ್ಯಗಳು ನಮ್ಮೆಲ್ಲರ ಜೀವನಾಡಿಯಾಗುವುದರ ಜೊತೆಗೆ ನಮ್ಮ ಸುತ್ತಮುತ್ತಲಿನ ಉತ್ತಮ ಪರಿಸರವನ್ನು ಸೃಷ್ಠಿಸಿ, ಜನಸಾಮಾನ್ಯರು ಉತ್ತಮ ಆರೋಗ್ಯ ಜೊತೆಗೆ ಹಣ್ಣು- ಹಂಪಲುಗಳನ್ನು ಸಹ ನೀಡುತ್ತವೆ. ಇವು ಮಾನವನಲ್ಲದೇ ಪ್ರಾಣಿ, ಪಕ್ಷಿಗಳಿಗೂ ಸಹ ಆಹಾರ ಒದಗಿಸುತ್ತದೆ. ಆದ್ದರಿಂದ ಹೆಚ್ಚೆತ್ತು ಹೂವು ಹಣ್ಣಿನ ಗಿಡಗಳನ್ನು ಬೆಳೆಸಬೇಕು ಎಂದರು.

ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ ಮಾತನಾಡಿ, ಸಸ್ಯಸಂತೆಯಲ್ಲಿ ಲಭ್ಯವಿರುವ ಗಿಡಗಳಿಂದ ನಗರ ಪ್ರದೇಶಗಳಲ್ಲಿ ಮನೆಯ ಸುತ್ತಮುತ್ತಲೂ ಕೈತೋಟಗಳನ್ನು ಬೆಳೆಸಲು ಸಹಕಾರಿಯಾಗುತ್ತದೆ. ರೈತರಿಗೂ ಸಹ ತೋಟಗಾರಿಕೆ ಕೃಷಿಯನ್ನು ಕೈಗೊಳ್ಳಲು ಸಸಿಗಳು, ಗೊಬ್ಬರ ಸಾಮಗ್ರಿಗಳು, ತೋಟಗಾರಿಕೆ ಸಲಕರಣೆಗಳು ಒಂದೇ ಕಡೆ ಲಭ್ಯವಿವೆ ಎಂದರು. ಈ ಸಂದರ್ಭ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಹೇಮಂತ್ ಕುಮಾರ್ ಎಲ್., ವಾರ್ತಾಧಿಕಾರಿ ಮಂಜುನಾಥ್ ಬಿ., ಸಹಾಯಕ ತೋಟಗಾರಿಕೆ ನಿರ್ದೇಶಕ ಸುನಿಲ್ ಕುಮಾರ್ ವೈ.ಎಚ್., ಅಧಿಕಾರಿಗಳಾಗ ವರುಣ ಕೆ.ಜೆ., ನಿಧೀಶ ಕೆ.ಜೆ., ರೈತರು, ಸಾರ್ವಜನಿಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಒಂದೇ ಸೂರಿನಡಿ ವೈವಿಧ್ಯ: ಸಸ್ಯಸಂತೆಯಲ್ಲಿ ಚಿಯಾ ಸೀಡ್ಸ್, ರಾಗಿ ಖಾದ್ಯ, ಮಿಲೇಟ್ಸ್ ಪೌರ್ಸ್‌, ಮಡಿಕೇರಿ ಬಟರ್ ಪ್ರೂಟ್ಸ್, ವಿವಿಧ ತಳೆಯ ಹಲಸಿನ ಹಾಗೂ ಮಾವು ಹಣ್ಣಿನ ಮಳಿಗೆಗಳನ್ನು ತೆರೆಯಲಾಗಿದ್ದು, ಜೊತೆಗೆ ತರಕಾರಿ ಗಿಡಗಳು, ಹೂವಿನ ಗಿಡಗಳು, ಔಷಧೀಯ ಗಿಡಗಳು, ಅಲಂಕಾರಿಕ ಗಿಡಗಳು, ತೋಟಗಾರಿಕೆ ಸಲಕರಣೆಗಳು, ಗೊಬ್ಬರ ಇತ್ಯಾದಿ ಸಾಮಗ್ರಿಗಳು ಒಂದೇ ಸೂರಿನಡಿ ಲಭ್ಯವಿವೆ.