ಸಾರಾಂಶ
ಕನ್ನಡಪ್ರಭ ವಾರ್ತೆ ಜಮಖಂಡಿ ಪರಿಸರ ರಕ್ಷಣೆ ಪ್ರತಿಯೊಬ್ಬ ನಾಗರಿಕರ ಹೊಣೆಯಾಗಿದ್ದು, ಉತ್ತಮ ಪರಿಸರದಿಂದ ಸಕಾಲಕ್ಕೆ ಮಳೆ ಬೆಳೆಯಾಗಿ ಜನ ಜೀವನ ಸುಗಮವಾಗಿರುತ್ತದೆ. ಪ್ರತಿಯೊಬ್ಬರೂ ಪರಿಸರದ ಬಗ್ಗೆ ಕಾಳಜಿ ವಹಿಸಬೇಕಾದ ಅವಶ್ಯಕತೆ ಇದೆ ಎಂದು ಡಿಎಸ್‌ಪಿ ಶಾಂತವೀರ ತಿಳಿಸಿದರು.
ಕನ್ನಡಪ್ರಭ ವಾರ್ತೆ ಜಮಖಂಡಿ
ಪರಿಸರ ರಕ್ಷಣೆ ಪ್ರತಿಯೊಬ್ಬ ನಾಗರಿಕರ ಹೊಣೆಯಾಗಿದ್ದು, ಉತ್ತಮ ಪರಿಸರದಿಂದ ಸಕಾಲಕ್ಕೆ ಮಳೆ ಬೆಳೆಯಾಗಿ ಜನ ಜೀವನ ಸುಗಮವಾಗಿರುತ್ತದೆ. ಪ್ರತಿಯೊಬ್ಬರೂ ಪರಿಸರದ ಬಗ್ಗೆ ಕಾಳಜಿ ವಹಿಸಬೇಕಾದ ಅವಶ್ಯಕತೆ ಇದೆ ಎಂದು ಡಿಎಸ್‌ಪಿ ಶಾಂತವೀರ ತಿಳಿಸಿದರು.ಗ್ರಾಮೀಣ ಠಾಣೆಯ ಆವರಣದಲ್ಲಿ ಜಮಖಂಡಿ ನಗರಾಭಿವೃದ್ಧಿ ಸಂಘ ಮತ್ತು ಪೊಲೀಸ್ ಇಲಾಖೆ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದರು.
ಪ್ರಶಂಸಾ ಪತ್ರ: ನಾಗರಿಕರು ತಮ್ಮ ತಮ್ಮ ಹುಟ್ಟು ಹಬ್ಬದ ದಿನ ಸಸಿಗಳನ್ನು ನೆಟ್ಟು ಪೋಟೋ ಕಳಿಸಿದರೆ ಅವರಿಗೆ ಇಲಾಖೆಯ ವತಿಯಿಂದ ಪ್ರಶಂಸಾ ಪತ್ರ ಮತ್ತು ಕಾಣಿಕೆ ನೀಡುವುದಾಗಿ ತಿಳಿಸಿದರು. ಜನ್ಮದಿನದಂದು ಸಸಿಗಳನ್ನು ನೆಟ್ಟು ವಿನೂತನವಾಗಿ ಹುಟ್ಟು ಹಬ್ಬ ಆಚರಿಸಿ ಕೊಳ್ಳುವ ನಾಗರಿಕರು-9480803821 ವಾಟ್ಸಪ್ ಸಂಖ್ಯೆಗೆ ತಮ್ಮ ಭಾವಚಿತ್ರಗಳನ್ನು ಕಳುಹಿಸುವಂತೆ ತಿಳಿಸಿದರು.ನಗರದ ಗ್ರಾಮೀಣ ಪೊಲೀಸ್ ಠಾಣೆಯ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನ ಆಚಿರಸಲಾಯಿತು. ಸಿಪಿಐ ಮಲ್ಲಪ್ಪ ಮಡ್ಡಿ, ಪಿಎಸ್‌ಐ ಚೆನ್ನಕೇಶವ ಚಲುವಾದಿ, ಪಿಎಸ್‌ಐ ಸುರೇಶ ನಾಯಕ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.