ಸಾರಾಂಶ
ಹಳೆ ತಾಲೂಕಿನ ಬೊಪ್ಪಂಡ ಕಾಶಿ ನಂಜಪ್ಪ ಗದ್ದೆಯಲ್ಲಿ ನಾಟಿ ಓಟದ ಕಾರ್ಯಕ್ರಮ ಶುಕ್ರವಾರ ನಡೆಯಿತು.ಮಡಿಕೇರಿ ತಾಲೂಕಿನ ನಾಲ್ಕು ನಾಡಿನಲ್ಲಿ ಪ್ರತಿ ಕುಟುಂಬದವರಿಗೂ ನಾಟಿ ಓಟದ ಗದ್ದೆ ಇದೆ. ಈಗ ಅದರಲ್ಲಿ ಯಾರೂ ನಾಟಿ ಮಾಡದೆ ಹಡಿಲು (ಬಂಜಾರ) ಬಿಟ್ಟಿರುವ ಸಂದರ್ಭ ಬೊಪ್ಪಂಡ ಕಾಶಿ ನಂಜಪ್ಪ ಹಳೆ ತಾಲೂಕಿನ ತಮ್ಮ ಗದ್ದೆಯಲ್ಲಿ ಪ್ರತಿ ವರ್ಷ ತಮ್ಮ ಗದ್ದೆಯಲ್ಲಿ ಪೂರ್ವ ಪದ್ಧತಿಯಂತೆ ನಾಟಿ ಓಟದ ಕಾರ್ಯಕ್ರಮ ನಡೆಸುತ್ತಾರೆ.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಇಲ್ಲಿಗೆ ಸಮೀಪದ ಹಳೆ ತಾಲೂಕಿನ ಬೊಪ್ಪಂಡ ಕಾಶಿ ನಂಜಪ್ಪ ಗದ್ದೆಯಲ್ಲಿ ನಾಟಿ ಓಟದ ಕಾರ್ಯಕ್ರಮ ಶುಕ್ರವಾರ ನಡೆಯಿತು.ಮಡಿಕೇರಿ ತಾಲೂಕಿನ ನಾಲ್ಕು ನಾಡಿನಲ್ಲಿ ಪ್ರತಿ ಕುಟುಂಬದವರಿಗೂ ನಾಟಿ ಓಟದ ಗದ್ದೆ ಇದೆ. ಈಗ ಅದರಲ್ಲಿ ಯಾರೂ ನಾಟಿ ಮಾಡದೆ ಹಡಿಲು (ಬಂಜಾರ) ಬಿಟ್ಟಿರುವ ಸಂದರ್ಭ ಬೊಪ್ಪಂಡ ಕಾಶಿ ನಂಜಪ್ಪ ಹಳೆ ತಾಲೂಕಿನ ತಮ್ಮ ಗದ್ದೆಯಲ್ಲಿ ಪ್ರತಿ ವರ್ಷ ತಮ್ಮ ಗದ್ದೆಯಲ್ಲಿ ಪೂರ್ವ ಪದ್ಧತಿಯಂತೆ ನಾಟಿ ಓಟದ ಕಾರ್ಯಕ್ರಮ ನಡೆಸುತ್ತಾರೆ.ಕೊಡಗಿನಲ್ಲಿ ಪ್ರಸ್ತುತ ಶೇ.30ರಷ್ಟು ಮಂದಿ ಮಾತ್ರ ಗದ್ದೆ ನಾಟಿ ಮಾಡುತ್ತಿದ್ದಾರೆ. ಇತರ ಶೇ.70 ಮಂದಿ ಗದ್ದೆ ಹಡಿಲು ಬಿಟ್ಟಿದ್ದರೆ ಕೆಲವರು ಕಾಫಿ ತೋಟ, ಅಡಿಕೆ, ತೆಂಗು ತೋಟಗಳಾಗಿ ಪರಿವರ್ತಿಸಿದ್ದಾರೆ.
ಕಾಶಿ ನಂಜಪ್ಪ ಹೇಳುವಂತೆ, ಕೊಡಗು ಹಿಂದೆ ಭತ್ತದ ಖಣಜವಾಗಿತ್ತು ಪ್ರತಿ ಕುಟುಂಬದವರು ತಮಗೆ ಸೇರಿದ ಗದ್ದೆ ಉತ್ತು, ಬಿತ್ತಿ, ನಾಟಿ ಮಾಡಿ ಜೀವನ ನಡೆಸುತ್ತಿದ್ದರು. ಆದರೆ ಇಂದು ಗದ್ದೆ ನಾಟಿ ಮಾಡದೆ ಮೋಜು ಮಸ್ತಿಗಾಗಿ ಮನೆ ದಳವಾಗಿ ಮಾಡಿ ಭೂಮಿ ತಾಯಿಗೆ ಅನ್ಯಾಯ, ಮಾಡುತ್ತಿದ್ದಾರೆ.ಹಳೆಯ ಕಾಲದಲ್ಲಿ ಒಂದು ವರ್ಷದ ಊಟದ ಭತ್ತವನ್ನು ಪ್ರತಿ ಕುಟುಂಬದವರು ಶೇಖರಿಸಿ ಇಟ್ಟು ಉತ್ತಮವಾಗಿ ಜೀವನ ನಡೆಸುತ್ತಿದ್ದರು ಹಾಗೇಯೇ ಅವರು ಗಟ್ಟಿಮುಟ್ಟಾಗಿ 100 ವರ್ಷಗಳ ಕಾಲ ಬಾಳಿ ಬದುಕುತ್ತಿದ್ದರು. ಗದ್ದೆಯನ್ನು ನೆಡುವುದರಲ್ಲಿ ಲಾಭಂಶ ಕಡಿಮೆ ಇದ್ದರು ಇದರಿಂದ ಅಂತರ್ಜಲ ವೃದ್ದಿಸಿ ಸರಿಯಾದ ಸಮಯಕ್ಕೆ ಮಳೆಗಾಲ ಬರುತ್ತಿತ್ತು ಆದರೆ ಇಂದು ಮಳೆಗಾಲವನ್ನು ನೋಡಿದರೆ ಭಯವಾಗುತ್ತದೆ ಎಂದು ಹೇಳುತ್ತಾರೆ.
ಹಿಂದಿನ ಕಾಲದಲ್ಲಿ ಕೂಡು ನಾಟಿ (ಸಹಕಾರ ) ಪದ್ಧತಿಯಲ್ಲಿ ಗದ್ದೆ ನಾಟಿ ಮಾಡುತ್ತಿದ್ದುದು ಸಾಮಾನ್ಯವಾಗಿತ್ತು. ಊರಿನ ನೆರೆಕೆರೆಯ ಜನರೆಲ್ಲರೂ ಒಟ್ಟು ಸೇರಿ ಜಾನುವಾರುಗಳಲ್ಲಿ ಗದ್ದೆ ಹೂಡಿ ನಾಟಿ ಮಾಡುತ್ತಿದ್ದರು. ಈ ಸಂದರ್ಭ ಹಾಡು, ತಮಾಷೆ, ಹರಟೆ, ಕ್ರೀಡೆ, ವಿಶೇಷ ಭೋಜನ ಇರುತ್ತಿತ್ತು. ಗದ್ದೆ ಪೂರ್ಣ ನಾಟಿಯಾದ ಮೇಲೆ ಕೊನೆಯಲ್ಲಿ ಕ್ರೀಡೆಯ ಒಂದು ಅಂಗವಾಗಿ ನಾಟಿ ಮಾಡಿದ ಗದ್ದೆಯ ಮಧ್ಯದಲ್ಲಿ ಓಡುವುದೇ ನಾಟಿ ಓಟವಾಗಿದೆ.ಹಿರಿಯರ ಕಾಲದಲ್ಲಿ ನಾಟಿ ಓಟದಲ್ಲಿ ವಿಜೇತಗೆ ಎಲೆ ಅಡಿಕೆ, ತೆಂಗಿನಕಾಯಿ, ಬಾಳೆಗೊನೆ, ನಾಣ್ಯ , ಫಲ ವಸ್ತುಗಳನ್ನು ಕೊಡುವ ಪದ್ಧತಿ ಇತ್ತು. ಆದರೆ ಈಗ ಹಣದ ರೂಪದಲ್ಲಿ ಬಹುಮಾನ ಕೊಟ್ಟು ಪ್ರೋತ್ಸಾಹಿಸಲಾಗುತ್ತಿದೆ.
;Resize=(128,128))
;Resize=(128,128))
;Resize=(128,128))
;Resize=(128,128))