ಸಾರಾಂಶ
ಬಾಲ ಪ್ರತಿಭೆಗಳು ಸಮಾಜಕ್ಕೆ ಪರಿಚಯವಾಗಬೇಕಾದರೆ ಸೂಕ್ತ ವೇದಿಕೆ ಮುಖ್ಯವಾಗಿರುತ್ತದೆ. ಹೈದ್ರಬಾದ ಕರ್ನಾಟಕ ನಾಗರಿಕ ವೇದಿಕೆ ಇಂತಹ ಪ್ರತಿಭೆಗಳನ್ನು ಸಮಾಜಕ್ಕೆ ತೋರಿಸುವ ಕೆಲಸ ಮಾಡುತ್ತಿದೆ
ಮಸ್ಕಿ: ಬಾಲ ಪ್ರತಿಭೆಗಳು ಸಮಾಜಕ್ಕೆ ಪರಿಚಯವಾಗಬೇಕಾದರೆ ಸೂಕ್ತ ವೇದಿಕೆ ಮುಖ್ಯವಾಗಿರುತ್ತದೆ. ಹೈದ್ರಬಾದ ಕರ್ನಾಟಕ ನಾಗರಿಕ ವೇದಿಕೆ ಇಂತಹ ಪ್ರತಿಭೆಗಳನ್ನು ಸಮಾಜಕ್ಕೆ ತೋರಿಸುವ ಕೆಲಸ ಮಾಡುತ್ತಿದೆ ಎಂದು ಉಪನ್ಯಾಸಕ ಮಹಾಂತೇಶ ಮಸ್ಕಿ ಹೇಳಿದರು.
ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ ಹೈದ್ರಬಾದ ಕರ್ನಾಟಕ ನಾಗರಿಕ ವೇದಿಕೆ ಕೊಪ್ಪಳ, ಗವಿಸಿದ್ದೇಶ್ವರ ರಥ ಶಿಲ್ಪಕಲಾ ಕೇಂದ್ರ ಕೊಪ್ಪಳ ಮತ್ತು ಮಲ್ಲಿಕಾರ್ಜುನ ದೇವಸ್ಥಾನ ಸಮಿತಿ ಮಸ್ಕಿ ಇವರ ಸಂಯುಕ್ತ ಆಶ್ರಯದಲ್ಲಿ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಜಿಪಂ ಮಾಜಿ ಸದಸ್ಯ ಮಹಾದೇವಪ್ಪಗೌಡ ಪೊಲೀಸ್ ಪಾಟೀಲ್ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.ಗುರು ನಾಟ್ಯಾಂಜಲಿ ನೃತ್ಯ ಮಂದಿರ ಟ್ರಸ್ಟ್ನ ವಿದ್ಯಾರ್ಥಿಗಳು ಅತ್ಯೂತ್ತಮವಾಗಿ ಭರತ ನಾಟ್ಯ ಪ್ರದರ್ಶನ ಪ್ರದರ್ಶಿಸಿದರು. ಹಾಗೂ ಸರಸ್ವತಿ ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ ನೀಡಿದರು.ಗವಿಸಿದ್ದಯ್ಯ ಗದಗ, ಶರಣು ಕರ್ನಾಲ್, ಗಂಗಾಧರ ಪೂಜಾರ, ವೀರಭದ್ರ ಬೆನಕನಾಳ ಕಲಾವಿದರು ತಮ್ಮ ಕಲೆಯ ಪ್ರದರ್ಶನ ನೀಡಿದರು.ರಥಶಿಲ್ಪಿ ಯಲ್ಲಪ್ಪ ಭಾಣಾಪುರ ಮಲ್ಲಿಕಾರ್ಜುನ ದೇವಸ್ಥಾನ ಸಮಿತಿಯವರನ್ನು ಸತ್ಕರಿಸಿದರು. ಮಲ್ಲಪ್ಪ ಕುಡತಿನಿ, ಸಿದ್ದಲಿಂಗಯ್ಯ ಗಚ್ಚಿನಮಠ, ಪ್ರಕಾಶ ಧಾರಿವಾಲ, ಸಿದ್ದರಾಮಯ್ಯ ಗಡ್ಡಿಮಠ ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))