ಕೊಪ್ಪ ಆಟೋ ಚಾಲಕರ ಹಾಗೂ ಮಾಲೀಕರ ಸಂಘದಿಂದ ಬಾನುವಾರ ಪಟ್ಟಣದ ಲಾಲ್ ಬಹದ್ದೂರು ಶಾಸ್ತ್ರಿ ಕ್ರೀಡಾಂಗಣದಲ್ಲಿ ಅಯೋಜನೆಗೊಂಡ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ಕೊಪ್ಪ

ಕೊಪ್ಪ ಆಟೋ ಚಾಲಕರ ಹಾಗೂ ಮಾಲೀಕರ ಸಂಘದಿಂದ ಬಾನುವಾರ ಪಟ್ಟಣದ ಲಾಲ್ ಬಹದ್ದೂರು ಶಾಸ್ತ್ರಿ ಕ್ರೀಡಾಂಗಣದಲ್ಲಿ ಅಯೋಜನೆಗೊಂಡ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ಶಿಸ್ತುಬದ್ಧವಾಗಿ ಸರಿಯಾದ ಸಮಯಕ್ಕೆ ಆರಂಭಗೊಂಡ ಕಾರ್ಯಕ್ರಮವನ್ನು ಸಹಸ್ರಾರು ಜನ ಒಂದೊಂದು ನೃತ್ಯ ಪ್ರಕಾರವು ಮೈಜುಮ್ ಎನ್ನುವ ಹಾಗಿತ್ತು. ಮಲ್ಲಕಂಬ ಹಾಗೂ ರೋಪ್ ಕಸರತ್ತು ಬಹಳ ಸುಂದರವಾಗಿ ಮೂಡಿಬಂದಿತ್ತು ಹಾಗೂ ಗುಜರಾತಿ ಗಾರ್ಬ್ ಮತ್ತು ದಾಂಡಿಯ. ಆಂಧ್ರದ ಜನಪದ ಬಂಜಾರ ನೃತ್ಯ ಶಾಸ್ತ್ರೀಯ ನೃತ್ಯ, ಕಥಕ್ ನೃತ್ಯ, ಪುರುಲಿಯ. ಸಿಂಹ ನೃತ್ಯ ಸೇರಿದಂತೆ ಎಲ್ಲಾ ನೃತ್ಯ ಪ್ರಕಾರಗಳು ಮನಮೋಹಕವಾಗಿದ್ದವು.

ಜನಮನ ರಂಜಿಸುವಲ್ಲಿ ಯಶಸ್ವಿಯಾದವು. ಹಾಸ್ಯದಿಂದ ಕೂಡಿದ ಬೊಂಬೆ ವಿನೋದಾವಳಿ ಕಲಾಪ್ರಕಾರವು ಎಲ್ಲರನ್ನು ನಗೆಕಡಲಲ್ಲಿ ತೇಲಿಸುವಂತೆ ಮಾಡಿತು. ತಾಲೂಕಿನಲ್ಲಿ ಇಂತಹ ಕಾರ್ಯಕ್ರಮಗಳು ಅತಿ ಹೆಚ್ಚು ಆಗುತ್ತಿರಬೇಕು. ಈಗಿನ ಜನರ ಒತ್ತಡದ ಕೆಲಸದ ನಡುವೆ ಇಂತಹ ಕಾರ್ಯಕ್ರಮಗಳು ಬೇಕು ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.

ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ಮುಖ್ಯಸ್ಥ ಮೋಹನ್ ಅಳ್ವ ಕಾರ್ಯಕ್ರಮ ಕುರಿತು ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ಸಮಯ ಎನ್ನುವುದು ಅತ್ಯಮೂಲ್ಯವಾಗಿದೆ. ಅದಕ್ಕಾಗಿ ನಮ್ಮ ಕಾಲೇಜಿನ ಕಾರ್ಯಕ್ರಮ ಎಲ್ಲಿಯೇ ನಡೆದರೂ ಸಮಯಕ್ಕೆ ಮೊದಲ ಅದ್ಯತೆ ನಿಡುತ್ತೇವೆ. ನಮ್ಮ ಸಂಸ್ಥೆಯಿಂದ ಕೇವಲ ಪ್ರಚಾರಕ್ಕಾಗಿ ಕಾರ್ಯಕ್ರಮ ಅಯೋಜನೆ ಮಾಡದೆ ನಮ್ಮ ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತದೆ ಎಂದರು.

ಅಟೋ ಚಾಲಕರು ಮತ್ತು ಮಾಲಕರ ಸಂಘದ ಅಧ್ಯಕ್ಷ ಯು.ಪಿ.ವಿಜಯ ಕುಮಾರ್ ಮಾತನಾಡಿ, ಸತತವಾಗಿ ಎಂಟು ವರ್ಷಗಳಿಂದ ನಮ್ಮಸಂಘದ ವತಿಯಿಂದ ಇಂತಹ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನಷ್ಟು ಉತ್ತಮ ಹಾಗೂ ಜನಪರ ಕಾರ್ಯಕ್ರಮಗಳನ್ನು ನಿಡುವ ಉದ್ದೆಶ ನಮ್ಮದು ಎನ್ನುವ ಆಶಯವನ್ನು ವ್ಯಕ್ತಪಡಿಸಿದರು.

ಅಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಮೋಹನ್ ಆಳ್ವಾ ಅಟೋ ಚಾಲಕರ ಹಾಗೂ ಮಾಲೀಕರ ಸಂಘದ ಗೌರವಾಧ್ಯಕ್ಷ ಎಚ್.ಆರ್.ಜಗದೀಶ್, ರಾಮಸ್ವಾಮಿ ಶೆಟ್ಟಿಗದ್ದೆ, ತಾಲೂಕಿನ ಆಟೋ ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷ ನಾರಾಯಣಸ್ವಾಮಿ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಸುಧಾಕರ್, ಅನ್ನಪೂರ್ಣ ಟೈಲ್ಸ್ ಮಾಲೀಕ ಸುರೇಶ್ ಕಣಗಲ್, ಅನ್ನಪೂರ್ಣ ಸೇಲ್ಸ್ ಅಂಡ್ ಸರ್ವಿಸ್ ಮಾಲೀಕ ನವೀನ ಕುಮಾರ್, ಆಟೋ ಚಾಲಕರ ಮಾಲಕರ ಸಂಘದ ಅಧ್ಯಕ್ಷ ವಿಜಯಕುಮಾರ್, ಮೊಹಮದ್ ಗೌಸ್, ಆಟೋ ಸಂಘದ ಎಲ್ಲ ಪದಾಧಿಕಾರಿಗಳು, ಎಲ್ಲಾ ಆಟೋ ಮಾಲೀಕರು ಹಾಗೂ ಚಾಲಕರು ಭಾಗಿಯಾಗಿದ್ದರು.