ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರಜ. 19 ರಂದು ತಾಲೂಕು ಪಿಎಲ್.ಡಿ ಬ್ಯಾಂಕ್ ನಿರ್ದೇಶಕ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಜೆಡಿಎಸ್ ಬೆಂಬಲಿತರಾಗಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಗೆಲುವಿಗೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಹೇಳಿದರು. ಪಟ್ಟಣದ ಬಸವೇಶ್ವರ ಬಡಾವಣೆಯ ಜೆಡಿಎಸ್ ಕಚೇರಿಯಲ್ಲಿ ನಡೆದ ಸಾಲಿಗ್ರಾಮ ಮತ್ತು ಕೆ.ಆರ್. ನಗರ ತಾಲೂಕು ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರ ಹಾಗೂ ಚುನಾವಣಾ ಪೂರ್ವ ಸಿದ್ದತಾ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷ ಬೆಂಬಲ ನೀಡಿದವರನ್ನು ಎಲ್ಲರೂ ಸ್ವಾಗತಿಸಿ ಬೆಂಬಲಿಸಬೇಕು ಎಂದರು. ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದಿಂದ ಪುರಸಭೆ ಸದಸ್ಯ ಉಮೇಶ್, ಹೆಬ್ಬಾಳು ಕ್ಷೇತ್ರದಿಂದ ಎಚ್.ಆರ್. ದೀಪಕ್, ಅಂಕನಹಳ್ಳಿಯಿಂದ ಎಂ.ಆರ್. ಗಾಯಿತ್ರಮ್ಮ, ಕೆ.ಆರ್. ನಗರದಿಂದ ಎಲ್.ಎಸ್. ಮಹೇಶ್, ಹಾಡ್ಯ ಮಂಜುಳ, ಭೇರ್ಯ ದೊಡ್ಡಯ್ಯ, ತಿಪ್ಪೂರು ಮಹೇಶ್, ಸಾಲಿಗ್ರಾಮದಿಂದ ಎಸ್.ಎಂ. ಸೋಮಣ್ಣ, ಚೀರ್ನಹಳ್ಳಿಯಿಂದ ಮಹದೇವನಾಯಕ, ತಂದ್ರೆ ಕ್ಷೇತ್ರದಿಂದ ಲೋಕೇಶ್ ಅವರಿಗೆ ಪಕ್ಷ ಬೆಂಬಲ ನೀಡಲಿದ್ದು, ಉಳಿದ ಮಿರ್ಲೆ, ಮಳಲಿ, ದೊಡ್ಡಕೊಪ್ಪಲು ಮತ್ತು ಮಂಚನಹಳ್ಳಿ ಕ್ಷೇತ್ರಗಳ ಅಭ್ಯರ್ಥಿಗಳನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು. ರಾಜ್ಯ ಜೆಡಿಎಸ್ ಕಾರ್ಯದರ್ಶಿ ಚಂದ್ರಶೇಖರ್, ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ. ಕುಮಾರ್, ಸಾಲಿಗ್ರಾಮ ತಾಲೂಕು ಅಧ್ಯಕ್ಷ ರಾಜಣ್ಣ, ವಕ್ತಾರ ಕೆ.ಎಲ್. ರಮೇಶ್, ಜಿಲ್ಲಾ ಗ್ರಾಮಾಂತರ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ದಾಕ್ಷಾಯಿಣಿ, ತಾಲೂಕು ಅಧ್ಯಕ್ಷೆ ರಾಜಲಕ್ಷ್ಮಿ, ಜಿಪಂ ಮಾಜಿ ಸದಸ್ಯ ಎಂ.ಟಿ. ಕುಮಾರ್, ಹೊಸೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಆರ್. ಕೃಷ್ಣಮೂರ್ತಿ, ನಿವೃತ್ತ ಶಿಕ್ಷಕ ಎ. ಕುಚೇಲ, ಪಿಎಲ್.ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಸ್.ಎಂ. ಸೋಮಣ್ಣ ಇದ್ದರು.