ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಬೈಲಹೊಂಗಲ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮಿಣ ಅಭಿವೃದ್ಧಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆಯಲ್ಲಿ ಒಟ್ಟು 15 ಸ್ಥಾನಗಳಲ್ಲಿ 14 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಗೊಂಡು ಬಿನ್ ಸಾಲಗಾರ ಕ್ಷೇತ್ರಕ್ಕೆ ಮಾತ್ರ ಭಾನುವಾರ ಚುನಾವಣೆ ಜರುಗಿತು.ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಬುಡರಕಟ್ಟಿ ವಿಭಾಗದ ಅಕ್ಷರ ಆನಿಕಿವಿ, ನಾಗನೂರ ವಿಭಾಗದ ಉಮೇಶ ಪಾಟೀಲ, ವಕ್ಕುಂದ ವಿಭಾಗದ ಪರ್ವತಗೌಡ ಪಾಟೀಲ, ಸಂಗೊಳ್ಳಿ ವಿಭಾಗದ ಯಲ್ಲಪ್ಪ ಕೌಜಲಗಿ, ಅರವಳ್ಳಿ ವಿಭಾಗದ ರುದ್ರಗೌಡ ಪಾಟೀಲ, ಬೈಲಹೊಂಗಲ ವಿಭಾಗದ ಶಿವಬಸಪ್ಪ ಕುಡಸೋಮಣ್ಣವರ, ಸಂಪಗಾವಿ ವಿಭಾಗದ ಶಂಕರಕುಮಾರ ಚಿಟ್ಟಿ, ದೇಶನೂರ ವಿಭಾಗದ ಶಂಕರಗೌಡ ಪಾಟೀಲ, ಸಾಲಗಾರ ಹಿಂದುಳಿದ ಅ ವರ್ಗದ ನೇಗಿನಹಾಳ ವಿಭಾಗದ ಜಗದೀಶ ಬಜೇರಿ, ಸಾಲಗಾರ ಹಿಂದುಳಿದ ಬ ವರ್ಗದ ಕ್ಷೇತ್ರದ ಮರಿಕಟ್ಟಿ ವಿಭಾಗದ ಶಿವಾನಂದ ಕಲ್ಲೂರ, ಸಾಲಗಾರ ಮಹಿಳಾ ಮಿಸಲು ಕ್ಷೇತ್ರದ ನೇಸರಗಿ, ದೊಡವಾಡ ವಿಭಾಗದ ಮಾಲತಿ ಪಾಟೀಲ, ರತ್ನವ್ವ ಧಾರವಾಡ, ಸಾಲಗಾರ ಪ.ಜಾತಿಯ ಮಿಸಲು ಕ್ಷೇತ್ರದ ಬೆಳವಡಿ ವಿಭಾಗದ ವಿರೇಶ ಎಕ್ಕೇರಿ, ಸಾಲಗಾರ ಪರಿಶಿಷ್ಟ ಪಂಗಡ ಮಿಸಲು ಕ್ಷೇತ್ರ ವಣ್ಣೂರ ವಿಭಾಗದ ಲಕ್ಕಪ್ಪ ಮಾಸ್ತಮರಡಿ ಅವಿರೋಧವಾಗಿ ಆಯ್ಕೆಯಾದವರು.
ಭಾನುವಾರ ನಡೆದ ಬಿನ್ ಸಾಲಗಾರ ವಿಭಾಗದ ಒಟ್ಟು 536 ಅರ್ಹ ಮತದಾರರನ್ನು ಹೊಂದಿದ್ದು, ಚುನಾವಣೆಯಲ್ಲಿ ಶೇ. 92 ಮತದಾನವಾಯಿತು. ಶ್ರೀಶೈಲ ಯಡಳ್ಳಿ 282 ಮತ ಪಡೆದರೆ ಪ್ರತಿಸ್ಫರ್ಧಿ ಗಂಗಾಧರ ಹೊಂಡದ ಅವರು 205 ಮತ ಪಡೆದು ಶ್ರೀಶೈಲ ಶಂಕರೆಪ್ಪ ಯಡಳ್ಳಿ 77 ಮತಗಳಿಂದ ವಿಜಯಶಾಲಿಯಾದರು. ಚುನಾವಣೆ ಅಧಿಕಾರಿಯಾಗಿ ಬೈಲಹೊಂಗಲ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಭಂಧಕ ಶಾಹಿನ್ ಅಖ್ತರ ಕಾರ್ಯನಿರ್ವಹಿಸಿದರು. ಅಭ್ಯರ್ಥಿಯ ಗೆಲುವಿನ ನಗೆ ಬೀರುತ್ತಿದ್ದಂತೆ ತಮ್ಮ ಬೆಂಬಲಿಗರು ಗುಲಾಲು ಎರಚಿ, ಸಿಹಿ ಹಂಚಿ ಸಂಭ್ರಮಿಸಿದರು.ಬೈಲಹೊಂಗಲ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮಿಣ ಅಭಿವೃದ್ದಿ ಬ್ಯಾಂಕಿನ ಷೇರುದಾರರು ತಮ್ಮ ಮೇಲೆ ವಿಶ್ವಾಸವಿಟ್ಟು ಆಡಳಿತ ಮಂಡಳಿ ಚುನಾವಣೆಯಲ್ಲಿ ನಿಮ್ಮನ್ನು ಅವಿರೋಧ ಆಯ್ಕೆ ಮಾಡಿದ್ದು, ಸಹಕಾರ ತತ್ವದ ಅಡಿಯಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ಬ್ಯಾಂಕಿನ ಪ್ರಗತಿಗೆ ಪ್ರಯತ್ನಿಸಬೇಕು.
-ಡಾ.ವಿಶ್ವನಾಥ ಪಾಟೀಲ, ಮಾಜಿ ಶಾಸಕರು.