ಪಿಎಲ್‌ಡಿ ಬ್ಯಾಂಕ್ ಚುನಾವಣೆ: ಜೆಡಿಎಸ್ ಬೆಂಬಲಿತ ಚಲುವೇಗೌಡ ಅಧ್ಯಕ್ಷರಾಗಿ ಆಯ್ಕೆ

| Published : Apr 10 2025, 01:02 AM IST

ಪಿಎಲ್‌ಡಿ ಬ್ಯಾಂಕ್ ಚುನಾವಣೆ: ಜೆಡಿಎಸ್ ಬೆಂಬಲಿತ ಚಲುವೇಗೌಡ ಅಧ್ಯಕ್ಷರಾಗಿ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಪಾಂಡವಪುರ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಎಲ್‌ಡಿ ಬ್ಯಾಂಕ್)ನ ನೂತನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಚಲುವೇಗೌಡ (ಬಕೋಡಿ) ಅಧ್ಯಕ್ಷರಾಗಿ ಹಾಗೂ ಸುನಂದ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಎಲ್‌ಡಿ ಬ್ಯಾಂಕ್)ನ ನೂತನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಚಲುವೇಗೌಡ (ಬಕೋಡಿ) ಅಧ್ಯಕ್ಷರಾಗಿ ಹಾಗೂ ಸುನಂದ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಪಿಎಲ್‌ಡಿ ಬ್ಯಾಂಕ್‌ನ 14 ನಿರ್ದೇಶಕರು ಹಾಗೂ 1 ಸರ್ಕಾರಿ ನಾಮಿನಿ ನಿರ್ದೇಶಕರಿದ್ದು, ಜೆಡಿಎಸ್- 8 ಹಾಗೂ ಕಾಂಗ್ರೆಸ್-ರೈತ ಸಂಘದ- 6, ಸರ್ಕಾರಿ ನಾಮಿನಿ ಸೇರಿ 7 ಮಂದಿ ಇದ್ದರು. ಬುಧವಾರ ನಡೆದ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲಿತ ಚಲುವೇಗೌಡ (ಬಕೋಡಿ) ಹಾಗೂ ಕಾಂಗ್ರೆಸ್-ರೈತಸಂಘ ಬೆಂಬಲಿತ ಎಚ್.ಎನ್.ದಯಾನಂದ್ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನಿಂದ ಸುನಂದ ಹಾಗೂ ಕಾಂಗ್ರೆಸ್-ರೈತಸಂಘದಿಂದ ಡಿ.ನರೇಂದ್ರಬಾಬು ನಾಮಪತ್ರ ಸಲ್ಲಿಸಿದರು. ನಂತರ ಚುನಾವಣಾಧಿಕಾರಿಯೂ ಆದ ತಾಪಂ ಇಒ ಲೋಕೇಶ್‌ಮೂರ್ತಿ ಅವರು ಗುಪ್ತಮತದಾನ ನಡೆಸುವ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಿದರು.

ಅಂತಿಮವಾಗಿ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಚಲುವೇಗೌಡ(ಬಕೋಡಿ)-9 ಹಾಗೂ ಕಾಂಗ್ರೆಸ್-ರೈತಸಂಘದ ಬೆಂಬಲಿತ ಎಚ್.ಎನ್.ದಯಾನಂದ್-6 ಪಡೆದರು. 3 ಮತಗಳ ಅಂತದರಿಂದ ಚಲುವೇಗೌಡ(ಬಕೋಡಿ) ಗೆಲುವು ಸಾಧಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು.

ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಸುನಂದ-8 ಹಾಗೂ ಕಾಂಗ್ರೆಸ್-ರೈತಸಂಘ ಬೆಂಬಲಿತ ಡಿ.ನರೇಂದ್ರಬಾಬು-7 ಮತಗಳನ್ನು ಪಡೆದರು. 1 ಅಂತದಿಂದ ಗೆಲುವು ಸಾಧಿಸುವ ಮೂಲಕ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಪಿಎಲ್‌ಡಿ ಬ್ಯಾಂಕ್‌ನ ಅಧ್ಯಕ್ಷರಾಗಿ ಚಲುವೇಗೌಡ(ಬಕೋಡಿ), ಉಪಾಧ್ಯಕ್ಷರಾಗಿ ಸುನಂದ ಅವರು ಆಯ್ಕೆಯಾಗುತ್ತಿದ್ದಂತೆಯೇ ಹೊರಗಡೆ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿಹಂಚಿ ಸಂಭ್ರಮಿಸಿದರು.

ಮಾಜಿ ಸಚಿವ ಸಿಎಸ್‌ಪಿ ಅಭಿನಂದನೆ:

ಪಿಎಲ್‌ಡಿ ಬ್ಯಾಂಕ್ ನೂತನ ಅಧ್ಯಕ್ಷ ಚಲುವೇಗೌಡ(ಬಕೋಡಿ), ಉಪಾಧ್ಯಕ್ಷೆ ಸುನಂದ ಹಾಗೂ ಎಲ್ಲಾ ನಿರ್ದೇಶಕರನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಭಿನಂಧಿಸಿದರು. ಬಳಿಕ ಮಾತನಾಡಿ ಚುನಾವಣೆಯಲ್ಲಿ ಹಿರೇಮರಳಿ ಚಲುವೇಗೌಡ(ಬಕೋಡಿ) ಅಧ್ಯಕ್ಷರಾಗಿ, ಸುನಂದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಳೆದೊಂದು ದಶಕಗಳಿಂದ ಪಿಎಲ್‌ಡಿ ಬ್ಯಾಂಕ್‌ನಲ್ಲಿ ಜೆಡಿಎಸ್ ಬೆಂಬಲಿತರು ಅಧಿಕಾರಹಿಡಿದಿದ್ದಾರೆ. ಮತದಾರರು ಮೂರನೇಬಾರಿಗೂ ಬಹುಮತಕೊಟ್ಟಿದ್ದಾರೆ ಎಂದರು.

ಈ ಕ್ಷೇತ್ರದಲ್ಲಿ ಜೆಡಿಎಸ್ ಪರ ಅಲೆಸೃಷ್ಠಿಯಾಗಿದೆ ಮುಂದಿನ ದಿನಗಳಲ್ಲಿ ನಡೆಯುವ ಸ್ಥಳೀಯ ಸಂಸ್ಥೆ, ತಾಪಂ, ಜಿಪಂ ಚುನಾವಣೆಗಳಲ್ಲೂ ಜೆಡಿಎಸ್ ಮೇಲುಗೈಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ನಿರ್ದೇಶಕರಾದ ಮಲ್ಲಿಗೆರೆ ಎಂ.ಸಿ.ಯಶವಂತ್‌ಕುಮಾರ್, ನಾಗಶೆಟ್ಟಿ, ಶಿವಣ್ಣ, ಎನ್.ಮುರುಳಿ, ಸಿ.ಡಿ.ನಂಜೇಗೌಡ(ವಾಸು), ಕೆ.ಕುಮಾರ್, ಕಾರ್‍ಯದರ್ಶಿ ಸಂಪತ್‌ಕುಮಾರ್, ಪುನೀತ್‌ ಕುಮಾರ್, ರಂಜನ, ಅರ್ಪಿತ, ಮುಖಂಡರಾದ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಚಲುವರಾಜು, ಗುರುಸ್ವಾಮಿ, ವಿ.ಎಸ್.ನಿಂಗೇಗೌಡ, ಟಿಎಪಿಸಿಎಂಎಸ್ ನಿರ್ದೇಶಕ ರಾಮಕೃಷ್ಣೇಗೌಡ, ರಾಧಾಕೃಷ್ಣ, ಎಚ್‌ಎಸ್‌ವಿ ಸ್ವಾಮೀಗೌಡ, ವಿಶ್ವನಾಥ್ ಸೇರಿದಂತೆ ಹಲವು ಮುಖಂಡರು ಕಾರ್‍ಯಕರ್ತರು ಭಾಗವಹಿಸಿದ್ದರು.

ಕೆ.ಆರ್.ಸುರೇಶ್,ಎಚ್.ಎಂ.ಆಶಾಲತಾ, ಸಿ.ಚಂದ್ರಶೇಖರ್, ನಾಮಿನಿ ನಿರ್ದೇಶಕ ನಾಗೇಗೌಡ ಅವರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.