ಜಂಗಮ ಸಮಾಜ ಮುನ್ನಡೆಸಲು ಸಹಕಾರ ನೀಡಿ: ಲೋಕೇಶ್

| Published : May 11 2025, 01:26 AM IST

ಸಾರಾಂಶ

ಕಡೂರು, ಜಂಗಮ ಸಮಾಜದ ಅನೇಕ ಹಿರಿಯರು ಕಳೆದ ಐದು ದಶಕಗಳಿಂದ ಈ ಬೇಡ ಜಂಗಮ ಸಮಾಜವನ್ನು ಕಟ್ಟಿ ನಡೆಸಿಕೊಂಡು ಬಂದಿದ್ದು ಅವರೆಲ್ಲರ ಆಶೀರ್ವಾದದಿಂದ ಜಂಗಮ ಸಮಾಜವನ್ನು ಮುನ್ನಡೆಸಿಕೊಂಡು ಹೋಗಲಿರುವ ನೂತನ ಅಧ್ಯಕ್ಷ ಪ್ರಕಾಶ್‍ಮೂರ್ತಿ ಅವರಿಗೆ ಸಹಕಾರ ನೀಡಿ ಎಂದು ಸಮಾಜದ ಹಿರಿಯರಾದ ಎಚ್.ಎಂ.ಲೋಕೇಶ್ ತಿಳಿಸಿದರು.

ಬೇಡಜಂಗಮ ಸಮಾಜದ ನೂತನ ಅಧ್ಯಕ್ಷರಾಗಿ ಎಂ.ಎಚ್. ಪ್ರಕಾಶಮೂರ್ತಿ ಆಯ್ಕೆ

ಕನ್ನಡಪ್ರಭ ವಾರ್ತೆ, ಕಡೂರು

ಜಂಗಮ ಸಮಾಜದ ಅನೇಕ ಹಿರಿಯರು ಕಳೆದ ಐದು ದಶಕಗಳಿಂದ ಈ ಬೇಡ ಜಂಗಮ ಸಮಾಜವನ್ನು ಕಟ್ಟಿ ನಡೆಸಿಕೊಂಡು ಬಂದಿದ್ದು ಅವರೆಲ್ಲರ ಆಶೀರ್ವಾದದಿಂದ ಜಂಗಮ ಸಮಾಜವನ್ನು ಮುನ್ನಡೆಸಿಕೊಂಡು ಹೋಗಲಿರುವ ನೂತನ ಅಧ್ಯಕ್ಷ ಪ್ರಕಾಶ್‍ಮೂರ್ತಿ ಅವರಿಗೆ ಸಹಕಾರ ನೀಡಿ ಎಂದು ಸಮಾಜದ ಹಿರಿಯರಾದ ಎಚ್.ಎಂ.ಲೋಕೇಶ್ ತಿಳಿಸಿದರು.

ಪಟ್ಟಣದ ನಿವೃತ್ತ ನೌಕರ ಭವನದಲ್ಲಿ ಶನಿವಾರ ನಡೆದ ಜಂಗಮರ ಸಭೆಯಲ್ಲಿ ಮಾತನಾಡಿದ ಅವರು ತಾವು ಅಖಿಲ ಭಾರ ವೀರಶೈವ-ಲಿಂಗಾಯತ ಸಮಾಜದ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಸಮಾಜದ ಸಂಘಟನೆಗೆ ಎಲ್ಲರು ಒಗ್ಗೂಡಿ ಎಂದರು.

ವೀರಶೈವ-ಲಿಂಗಾಯತ ಸಮಾಜದ ತಾಲೂಕು ಅಧ್ಯಕ್ಷ ಎಸ್.ಪಿ. ರೇಣುಕಾರಾಧ್ಯ ಮಾತನಾಡಿ ಬೇಡಜಂಗಮ ಸಮಾಜಕ್ಕೆ ಎಂ.ಎಚ್.ಪ್ರಕಾಶಮೂರ್ತಿ ಅವರ ಆಯ್ಕೆ ಉತ್ತಮವಾಗಿದೆ. ಸಮಾಜದ ಸಂಘಟನೆಗೆ ಶ್ರಮಿಸಲಿದ್ದಾರೆ. ತಾವು ಈ ಸಮಾಜಕ್ಕೆ ಸಹಕಾರ ನೀಡಲು ಸಿದ್ದನಿದ್ದೇನೆ ಎಂದರು.

ನೂತನ ಅಧ್ಯಕ್ಷ ಎಂ.ಎಚ್.ಪ್ರಕಾಶಮೂರ್ತಿ ಮಾತನಾಡಿ ನಮ್ಮ ಹಿರಿಯರು ಕಟ್ಟಿ ಹೋಗಿರುವ ಈ ಸಮಾಜವನ್ನು ಸಂಘಟನೆ ಮಾಡುವ ಮೂಲಕ ಒಂದು ಉತ್ತಮ ಸಮಾಜವನ್ನಾಗಿ ಮಾಡಲು ಶ್ರಮಿಸುತ್ತೇನೆ. ಹಿರಿಯರ ಸಲಹೆ, ಯುವಕರ ಸಂಘಟನೆ ಯನ್ನು ಪರಿಗಣಿಸಿ ಮುಂದೆ ಆಗಬೇಕಾಗಿರುವ ಕೆಲಸಗಳಿಗೆ ಒತ್ತು ನೀಡುತ್ತೇನೆ. ಇದೇ ಮೇ 24 ರಂದು ಪ್ರತಿಭಾ ಪುರಸ್ಕಾರ, ಸಮಾಜದ ನಿವೃತ್ತ ನೌಕರರಿಗೆ ಸನ್ಮಾನ ಹಾಗೂ ಹೊಬಳಿ ಮಟ್ಟದ ಅಧ್ಯಕ್ಷರು, ಪದಾಧಿಕಾರಿಗಳ ಆಯ್ಕೆಗೆ ಸಭೆ ಕರೆಯ ಲಾಗಿದ್ದು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿ ಎಂದರು.ತಾಲೂಕು ಬೇಡ ಜಂಗಮ ಸಮಾಜದ ನೂತನ ಅಧ್ಯಕ್ಷರಾಗಿ ನಿವೃತ್ತ ಸಮಾಜ ಕಲ್ಯಾಣಧಿಕಾರಿ ಎಂ.ಎಚ್. ಪ್ರಕಾಶಮೂರ್ತಿ ಅವರನ್ನು ಸಮಾಜದ ಹಿರಿಯರಾದ ಎಚ್.ಎಂ. ಲೋಕೇಶ್, ಸಾಣೆಹಳ್ಳಿ ರೇಣುಕಾರಾಧ್ಯ, ಬೀರೂರು ಪಾಲಾಕ್ಷಪ್ಪ, ಶಿವಣ್ಣ ಅವರ ನೇತೃತ್ವದಲ್ಲಿ ಅವಿರೋಧ ಆಯ್ಕೆ ಘೊಷಿಸಿದರು. ಸಭೆಯಲ್ಲಿ ತಾಲೂಕಿನ 8 ಹೋಬಳಿಯ ಜಂಗಮ ಸಮಾಜದ ಬಂಧುಗಳು ಸೇರಿದ್ದು ನೂತನ ಅಧ್ಯಕ್ಷರಿಗೆ ಅಭಿನಂದಿಸಿದರು.

ಸಭೆಯಲ್ಲಿ ಯಳ್ಳಂಬಳಸೆ ರುದ್ರಯ್ಯ,ಬೀರೂರು ಕುಮಾರಸ್ವಾಮಿ, ಸಿಂಗಟಗೆರೆ ಗಿರೀಶಾರಾಧ್ಯ, ಯತೀಶ್ ಮಾಸ್ಟರ್, ಪಿ.ಆರ್. ಪ್ರೇಮ್‍ಕುಮಾರ್, ನಂಜುಂಡಾರಾಧ್ಯರು ಸೇರಿದಂತೆ ಮತ್ತಿತರರು ಇದ್ದರು.

-- ಬಾಕ್ಸ್ ಸುದ್ದಿ --

ನೂತನ ಪದಾಧಿಕಾರಿಗಳ ಪಟ್ಟಿ:

ಅಧ್ಯಕ್ಷ ಎಂ.ಎಚ್.ಪ್ರಕಾಶಮೂರ್ತಿ, ಗೌ.ಅಧ್ಯಕ್ಷ ಕೆ.ಹೊಸಹಳ್ಳಿ ಎಚ್.ಎಂ.ಲೋಕೇಶ್, ಸಾಣೆಹಳ್ಳಿ ಎಸ್.ಪಿ.ರೇಣುಕಾರಾಧ್ಯ, ಪಂಚನಹಳ್ಳಿ ಪಿ.ಒ. ಚಂದ್ರಶೇಖರ ಮೂರ್ತಿ(ಬಾಬಣ್ಣ), ಉಪಾಧ್ಯಕ್ಷ ದೊಡ್ಡಪಟ್ಟಣಗೆರೆ ಪಿ.ಆರ್.ಪ್ರೇಮ್‍ಕುಮಾರ್,ಬೀರೂರು ಮರುಳಸಿದ್ಧಾರಾಧ್ಯ,ಹೊಗರೇಹಳ್ಳಿ ಎಚ್.ಎಸ್.ಚಂದ್ರಶೇಖರಯ್ಯ, ಪ್ರಧಾನ ಕಾರ್ಯದರ್ಶಿ ಕುಪ್ಪಾಳು ಪಿ.ನಂಜುಂಡಾರಾಧ್ಯ, ಕಡೂರು ವೈ.ಎಂ.ಯತೀಶ್, ಚಟ್ನಹಳ್ಳಿ ಓಂಕಾರಮೂರ್ತಿ, ಸಹ ಕಾರ್ಯದರ್ಶಿ ಕಡೂರು ಪತ್ರಕರ್ತ ಎ.ಜೆ. ಪ್ರಕಾಶಮೂರ್ತಿ, ಆಡಿಟರ್ ಬಾನುಪ್ರಕಾಶ್, ರಾಜಶೇಖರಯ್ಯ ನಿವೃತ್ತ ಅಬಕಾರಿ ಅಧಿಕಾರಿ, ಸಂಘಟನಾ ಕಾರ್ಯದರ್ಶಿ ಬೀರೂರು ಪಾಲಾಕ್ಷ, ಯಗಟಿ ವೈ.ಜೆ.ಶಿವಲಿಂಗಸ್ವಾಮಿ, ಹೊಗರೆಹಳ್ಳಿ ಎಚ್.ಎಸ್.ಸಂತೋಷ್, ಕಡೂರು ಕಲ್ಲು ವ್ಯಾಪಾರಿ ಮಂಜಣ್ಣ, ಖಜಾಂಚಿ ಗಿರಿಯಾಪುರದ ಜಿ.ಎಸ್.ಶ್ರೀಕಂಠಯ್ಯ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

10ಕೆಕೆಡಿಯು1ಕಡೂರು ತಾಲೂಕು ಬೇಡ ಜಂಗಮ ಸಮಾಜದ ನೂತನ ಅಧ್ಯಕ್ಷರಾಗಿ ಎಂ.ಎಚ್.ಪ್ರಕಾಶಮೂರ್ತಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಜಂಗಮ ಸಮಾಜದ ಎಚ್.ಎಂ.ಲೋಕೇಶ್, ಎಸ್.ಪಿ.ರೇಣುಕಾರಾಧ್ಯ, ನಂಜುಂಡಾರಾಧ್ಯ, ಪಾಲಾಕ್ಷ, ಪ್ರೇಮ್‍ಕುಮಾರ್ ಮತ್ತಿತರರು ಇದ್ದರು.