ಹೋರಾಟಗಾರರ ತ್ಯಾಗ-ಬಲಿದಾನದ ಪ್ರತಿಫಲವಾಗಿ ಸ್ವಾತಂತ್ರ್ಯ ದೊರಕಿದೆ. ಆರೋಗ್ಯಕರ ದೇಶ ನಿರ್ಮಾಣ ಮಾಡುವ ಮೂಲಕ ಸ್ವಾತಂತ್ರ್ಯ ನೀಡಿರುವ ಮಹನೀಯರಿಗೆ ಗೌರವ ನೀಡಬೇಕಾಗಿದ್ದು, ಹೀಗಾಗಿ ವ್ಯಸನ ಮುಕ್ತ ದೇಶ ನಿರ್ಮಾಣ ಎಲ್ಲರ ಸಂಕಲ್ಪವಾಗಬೇಕೆಂದು ಶಾಸಕಿ ಕರೆಮ್ಮ ಜಿ. ನಾಯಕ ತಿಳಿಸಿದರು.

-ಸ್ವಾತಂತ್ರ್ಯೋತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ । ಕ್ರೀಡಾಪಟುಗಳಿಗೆ ಪ್ರಶಸ್ತಿ ಪ್ರದಾನ

-------

ಕನ್ನಡಪ್ರಭ ವಾರ್ತೆ ದೇವದುರ್ಗ

ಹೋರಾಟಗಾರರ ತ್ಯಾಗ-ಬಲಿದಾನದ ಪ್ರತಿಫಲವಾಗಿ ಸ್ವಾತಂತ್ರ್ಯ ದೊರಕಿದೆ. ಆರೋಗ್ಯಕರ ದೇಶ ನಿರ್ಮಾಣ ಮಾಡುವ ಮೂಲಕ ಸ್ವಾತಂತ್ರ್ಯ ನೀಡಿರುವ ಮಹನೀಯರಿಗೆ ಗೌರವ ನೀಡಬೇಕಾಗಿದ್ದು, ಹೀಗಾಗಿ ವ್ಯಸನ ಮುಕ್ತ ದೇಶ ನಿರ್ಮಾಣ ಎಲ್ಲರ ಸಂಕಲ್ಪವಾಗಬೇಕೆಂದು ಶಾಸಕಿ ಕರೆಮ್ಮ ಜಿ. ನಾಯಕ ತಿಳಿಸಿದರು.

ಪಟ್ಟಣದ ಸಾರ್ವಜನಿಕ ಕ್ಲಬ್ಬಿನಲ್ಲಿ ತಾಲೂಕು ಆಡಳಿತ ಶನಿವಾರ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಪರಿಣಾಮಕಾರಿ ಶಿಕ್ಷಣ ನೀಡುವ ವಾತಾವರಣ ನಿರ್ಮಿಸಲು ಎಲ್ಲರ ಸಹಕಾರ ಅಗತ್ಯ. ಹಾಗಾದಾಗ ಮಾತ್ರ ಶಿಕ್ಷಣ ಕ್ಷೇತ್ರದಲ್ಲಿ ಹೊಸ ದಾಖಲೆ ನಿರ್ಮಾಣಗೊಳ್ಳಲಿದೆ ಎಂದರು.

ತಹಸೀಲ್ದಾರ್ ನಾಗಮ್ಮ ಎಂ.ಕಟ್ಟೀಮನಿ, ತಾಲೂಕು ಗ್ಯಾರಂಟಿ ಯೋಜನೆ ಅಧ್ಯಕ್ಷ ಲಕ್ಷ್ಮಣ ಜ್ಯೋತಿ, ಬಿಇಒ ರಾಧಾದೇವಿ ಮಾತನಾಡಿದರು. ಉಪನ್ಯಾಸಕ ಶಿವಲಿಂಗಪ್ಪ ನಾಯಕ ದಿನಾಚರಣೆ ಕುರಿತು ಉಪನ್ಯಾಸ ನೀಡಿದರು.

ತಾಪಂ ಇಒ ರಾಜೇಂದ್ರಕುಮಾರ, ಪಿಕಾರ್ಡ್‌ ಬ್ಯಾಂಕ್ ಅಧ್ಯಕ್ಷ ಶರಣಗೌಡ ಹಂಚಿನಾಳ, ತಾಲೂಕು ನೌಕರರ ಸಂಘದ ಅಧ್ಯಕ್ಷ ಹನುಮಂತ್ರಾಯ ಶಾಖೆ, ಸ್ವಾತಂತ್ರ್ಯ ಹೋರಾಟಗಾರ ಆದಿ ರಾಜಶೇಖರಪ್ಪ ಆದಿಯವರ ಪತ್ನಿ ಆದಿ ಕಮಲಮ್ಮ, ಪುರಸಭೆ ಮುಖ್ಯಧಿಕಾರಿ ಹಂಪಯ್ಯ ಕೆ., ಲೋಕೋಪಯೋಗಿ ಇಲಾಖೆ ಎಇಇ ಟಿ.ಶ್ರೀನಿವಾಸ, ಕೃಷಿ ಸಹಾಯಕ ನಿರ್ದೇಶಕ ಶ್ರೀನಿವಾಸ ನಾಯಕ, ಬಿಸಿಎಂ ಅಧಿಕಾರಿ ಬಾಬು ಹಾಗೂ ಇತರ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರದಾನ: ತಾಲೂಕಿನ ಪ್ರತಿಭಾವಂತ ಕ್ರೀಡಾಪಟುಗಳಾದ ಭವಾನಿ ಶರಣಪ್ಪ, ಅನುಷಾ ಶಿವರಾಜ ಪಾಣಿ, ಜ್ಯೋತಿ ಜಿಂದಪ್ಪರಿಗೆ ತಾಲೂಕು ಕಸಾಪ ಅಧ್ಯಕ್ಷ ಎಚ್.ಶಿವರಾಜ ಪ್ರಶಸ್ತಿ ಪ್ರದಾನಿಸಿದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ಸಂಸ್ಥೆಯಿಂದ ವ್ಯಸನ ಮುಕ್ತ ದೇಶ ನಿರ್ಮಾಣದ ಕುರಿತು ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ತಾಲೂಕಿ ಸಮಾಜ ಕಲ್ಯಾಣಧಿಕಾರಿ ರಾಜಕುಮಾರ ಡೋಣಿ, ಬಿಆರ್‌ಸಿ ಶಿವರಾಜ ಪೂಜಾರಿ, ದೈಹಿಕ ಶಿಕ್ಷಣಧಿಕಾರಿ ಬಾಲಪ್ಪ ಬಾವಿಮನಿ, ಶಿಕ್ಷಕರಾದ ರಂಗನಾಥ ಸಿ., ಮಮತಾ ಆದಿ, ರೇವಣಸಿದ್ದಪ್ಪ ನಿರೂಪಿಸಿದರು. ವಿವಿಧ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.

------ಬಾಕ್ಸ್-----

ವಿವಿಧೆಡೆ ಸ್ವಾತಂತ್ರ್ಯೋತ್ಸವ

ಟಿಎಪಿಸಿಎಂಎಸ್ ಕಚೇರಿಯಲ್ಲಿ: ದೇವದುರ್ಗ ಪಟ್ಟಣದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಮಿತಿ ಕಚೇರಿಯಲ್ಲಿ 80ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಸಂಘದ ಅಧ್ಯಕ್ಷ ಶರಣಗೌಡ ಪಿ.ಮಾಲಿ ಪಾಟೀಲ್ ಮದರಕಲ್ ನೆರವೇರಿಸಿದರು. ಆರ್.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಎ.ರಾಜಶೇಖರ ನಾಯಕ, ಸಂಘದ ನಿರ್ದೇಶಕರಾದ ಪರ್ವತರೆಡ್ಡಿ ಪಾಟೀಲ್ ಶಾವಂತಗೇರಾ, ಶರಣಪ್ಪ ಸಾಹು ಪರತಾಪೂರ, ವ್ಯವಸ್ಥಾಪಕಿ ಸರಸ್ವತಿ ಮತ್ತಿತರರು ಭಾಗವಹಿಸಿದ್ದರು.

ಬಾಲಕಿಯರ ಪ್ರೌಢಶಾಲೆ: ದೇವದುರ್ಗ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ವೆಂಕಟೇಶ ನಾಯಕ ಸೋಮಕರ ಮತ್ತು ಮುಖ್ಯಶಿಕ್ಷಕಿ ವಿಜಯಲಕ್ಷ್ಮೀ ಅವರು ಜಂಟಿಯಾಗಿ ಧ್ವಜಾರೋಹಣವ ನೆರವೇರಿಸಿದರು.

ಮುಖಂಡರಾದ ಬಸವರಾಜ ನಾಯಕ ಗೋಸಲ್, ದುರುಗಮ್ಮ, ಶರಣಯ್ಯಸ್ವಾಮಿ ಮುಂಡರಗಿ, ಬಸವರಾಜ ಬ್ಯಾಗವಾಟ, ಶಿವರಾಜ ರುದ್ರಾಕ್ಷಿ, ದೈಹಿಕ ಶಿಕ್ಷಣ ಶಿಕ್ಷಕಿ ಮಮತಾ ಆದಿ, ಸೇರಿ ಶಿಕ್ಷಕರು ಮತ್ತು ಅತಿಥಿ ಶಿಕ್ಷಕರು ಭಾಗವಹಿಸಿದ್ದರು.

--------ಫೋಟೊ-----------

15ಕೆಪಿಡಿವಿಡಿ01:

ದೇವದುರ್ಗ ಪಟ್ಟಣದ ಸಾರ್ವಜನಿಕ ಕ್ಲಬ್‌ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕಿ ಕರೆಮ್ಮ ಜಿ.ನಾಯಕ ಮಾತನಾಡಿದರು. ತಹಸೀಲ್ದಾರ ನಾಗಮ್ಮ ಎಂ.ಕಟ್ಟೀಮನಿ, ಲಕ್ಷ್ಮಣ ಜ್ಯೋತಿ, ಬಿಇಒ ರಾಧಾದೇವಿ ಮತ್ತಿತರರು ಇದ್ದರು.