ಕನ್ನಡದ ಪ್ರತಿ ಶಬ್ದ ಉಳಿಸಿದರೆ ಬಹುತ್ವ ಕಾಪಾಡಬಹುದು: ಪ್ರೊ. ರಹಮತ್ ತರೀಕೆರೆ

| Published : Aug 31 2025, 01:07 AM IST

ಕನ್ನಡದ ಪ್ರತಿ ಶಬ್ದ ಉಳಿಸಿದರೆ ಬಹುತ್ವ ಕಾಪಾಡಬಹುದು: ಪ್ರೊ. ರಹಮತ್ ತರೀಕೆರೆ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಕನ್ನಡ ಪ್ರತಿ ಶಬ್ದವನ್ನು ಉಳಿಸಿಕೊಂಡರೆ ಬಹುತ್ವ ಉಳಿಸಿಕೊಳ್ಳಬಹುದಾಗಿದೆ ಎಂದು ಸಂಸ್ಕೃತಿ ಚಿಂತಕರು ಪ್ರೊ.ರಹಮತ್ ತರೀಕೆರೆ ಹೇಳಿದ್ದಾರೆ.

ರಂಗೇನಹಳ್ಳಿಯಲ್ಲಿ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ ತರೀಕೆರೆ

ಕನ್ನಡ ಪ್ರತಿ ಶಬ್ದವನ್ನು ಉಳಿಸಿಕೊಂಡರೆ ಬಹುತ್ವ ಉಳಿಸಿಕೊಳ್ಳಬಹುದಾಗಿದೆ ಎಂದು ಸಂಸ್ಕೃತಿ ಚಿಂತಕರು ಪ್ರೊ.ರಹಮತ್ ತರೀಕೆರೆ ಹೇಳಿದ್ದಾರೆ.

ಶನಿವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ತರೀಕೆರೆಯ ಸದ್ಗುರು ಜನಸೇವಾ ಫೌಂಡೇಶನ್, ಅರಿವು ವೇದಿಕೆ ಜಿಲ್ಲಾ ಕಸಾಪ, ತರೀಕೆರೆ ಕಸಾಪ ಸಹಯೋಗದಲ್ಲಿ ಸಮೀಪದ ರಂಗೇನಹಳ್ಳಿ ಶ್ರೀ ಅಂಭಾ ಭವಾನಿ ಸಮುದಾಯ ಭವನದಲ್ಲಿ ನಡೆದ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿ ಕಾರ್ಯಾಗಾರದಲ್ಲಿ "ನಡೆದಾಡುವ ಕನ್ನಡ " ವಿಷಯ ಕುರಿತು ಮಾತನಾಡಿದರು.

ಭಾಷೆ ನಮ್ಮದಲ್ಲ ಅನ್ನುವ ಕಾರಣಕ್ಕೆ ಅನ್ಯ ಭಾಷೆಯನ್ನು ಗೇಲಿ ಮಾಡುವುದು ಅಸಹನೆ ತೋರಿಸುತ್ತದೆ. ಕನ್ನಡದ ಒಳನುಡಿಗಳನ್ನು ಉಳಿಸಿ ಸಂಭ್ರಮಿಸೋಣ. ಕನ್ನಡ ಏಕವಚನವಾಗಿದ್ದು ಕನ್ನಡಗಳು ನಾವು ಬಳಸುವ ಪದಗಳಾಗಬೇಕು. ಮಾದ್ಯಮಗಳು ಹಾಗೂ ಆಕಾಶವಾಣಿ ಕನ್ನಡಕ್ಕೆ ಅನ್ಯಾಯ ಮಾಡಿದೆ. ಮೇಲು ಎಂಬುದು ಅಡಳಿತಕ್ಕೆ ಇರಬೇಕೆ ಹೊರತು ಸಾಹಿತ್ಯಕ್ಕೆ ಇರಬಾರದು. ಪ್ರತಿ ಹತ್ತು ಕಿಲೋಮೀಟರ್‌ಗೆ ಬದಲಾಗುವ ಭಾಷೆಯ ಭಿನ್ನತೆಯನ್ನು ನಾವು ಗೌರವಿಸಬೇಕು. ಕನ್ನಡದ ನಿಘಂಟು ಗಳು ಒಳಗನ್ನಡ ಸೇರಿಸಿಕೊಳ್ಳಲಿಲ್ಲ ಎಂದು ಹೇಳಿದರು.ಹಿಂದಿ ಕಲಿಕೆಗೆ ವಿರೋಧ ಬೇಡ ಅದರೆ ಹಿಂದಿ ಕಡ್ಡಾಯಕ್ಕೆ ವಿರೋಧವಿರಲಿ ಎಂದರು.ಸಂಸ್ಕೃತಿ ಚಿಂತಕರು, ರಂಗಕರ್ಮಿ, ಶಿಬಿರದ ನಿರ್ದೇಶಕ ಪ್ರೊ.ರಾಜಪ್ಪ ದಳವಾಯಿ ಮಾತನಾಡಿ ಸಂಸ್ಕೃತಿ ಚಿಂತಕ ಪ್ರೊ.ರಹಮತ್ ತರೀಕೆರೆ ಅವರು ಕನ್ನಡ ಸಂಶೋಧನಾ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ನಾಡಿನಾದ್ಯಂತ ಪ್ರವಾಸ ಮಾಡಿ ಕನ್ನಡ ಸಂಶೋಧನೆಗೆ ಹೊಸ ಶಕ್ತಿ ನೀಡಿದ್ದಾರೆ.

ನಾಥಪಂಥ, ಆರೂಡಪಂಥ, ಶಾಕ್ತ ಪಂಥ, ಸೂಫಿ ಪಂಥ ಇವುಗಳ ತಳಸ್ಪರ್ಷಿ ಸಂಶೋಧನೆ ಮಾಡಿ ದ್ದಾರೆ. ನಾಡು, ದೇಶ, ಅಂತಾರಾಷ್ಟ್ರೀಯ ಪ್ರವಾಸ ಮಾಡುತ್ತ ಜಗತ್ತಿನ ಎಲ್ಲ ಜ್ಞಾನವನ್ನು ಕನ್ನಡದಲ್ಲಿ ಪುನರ್ ವ್ಯಾಖ್ಯಾನಿಸಿದ್ದಾರೆ ಎಂದು ವಿವರಿಸಿದರು.

ಬೆಂಗಳೂರು ಹಿರಿಯ ಚಂತಕ ಅಗ್ರಹಾರ ಕೃಷ್ಣಮೂರ್ತಿ, ಪುರಸಭಾ ಸದಸ್ಯ, ಕವಿ ಟಿ.ದಾದಾಪೀರ್, ಶಿಬಿರದ ನಿರ್ದೇಶಕ ಡಾ.ರವಿಕುಮಾರ್ ನೀಹ, ತಾಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಮಿಲ್ಟ್ರಿ ಶ್ರೀನಿವಾಸ್, ಡಾ.ಸಬಿತಾ ಬನ್ನಾಡಿ, ಶಿಕ್ಷಕ ನಾಗೇಶ್ ಮತ್ತಿತರರು ಸಂವಾದದಲ್ಲಿ ಭಾಗವಹಿಸಿದ್ದರು.ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ, ಸದ್ಗುರು ಜನಸೇವಾ ಫೌಂಡೇಶನ್ ಅಧ್ಯಕ್ಷ ಟಿ.ಎನ್. ಜಗದೀಶ್, ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಕಿರಣ್, ಉಮಾ ಪ್ರಕಾಶ್, ಡಾ.ಎಚ್.ಎಂ.ಮರಳುಸಿದ್ದಯ್ಯ ಪಟೇಲ್, ಅರಿವು ವೇದಿಕೆ ಅಧ್ಯಕ್ಷ ಕೆ.ಎಸ್.ಶಿವಣ್ಣ, ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ನವೀನ್ ಪೆನ್ನಯ್ಯ, ಡಾ.ದೇವರಾಜ್, ಎಚ್.ಬಿ.ಶ್ರೀಕಂಠಮೂರ್ತಿ, ಶಂಕರಪ್ಪ ಚಕ್ರವರ್ತಿ ಮತ್ತಿತರರು ಭಾಗವಹಿಸಿದ್ದರು.

30ಕೆಟಿಆರ್.ಕೆ.4ಃ

ತರೀಕೆರೆ ಸಮೀಪದ ರಂಗೇನಹಳ್ಳಿಯಲ್ಲಿ ನಡೆದ ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿ ಕಾರ್ಯಾಗಾರದಲ್ಲಿ ಸಂಸ್ಕೃತಿ ಚಿಂತಕ ಪ್ರೊ.ರಹಮತ್ ತರೀಕೆರೆ ಮಾತನಾಡಿದರು.