ಸಾರಾಂಶ
ಸುಲ್ತಾನಿಪುರದಲ್ಲಿ 33 ಲಕ್ಷ ರು.ವೆಚ್ಚದ ನೂತನ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪ ಭೂಮಿಪೂಜೆ ನೆರವೇರಿಸಿದರು.
ಕನ್ನಡಪ್ರಭ ವಾರ್ತೆ ಸಿರಿಗೆರೆ
ಪ್ರಧಾನಿ ನರೇಂದ್ರ ಮೋದಿಯವರು ದೇಶದ ಚುಕ್ಕಾಣಿ ಹಿಡಿದ ನಂತರ ಮುಸ್ಲಿಂ ಸಮುದಾಯಕ್ಕೆ ಅನ್ಯಾಯವಾಗಿಲ್ಲ. ಅವರು ಎಲ್ಲರನ್ನೂ ಒಂದೇ ಭಾವದಿಂದ ಮುನ್ನಡೆಸುತ್ತಿದ್ದಾರೆ ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.ಭರಮಸಾಗರ ಸಮೀಪದ ಸುಲ್ತಾನಿಪುರ ಗ್ರಾಮದಲ್ಲಿ 33 ಲಕ್ಷ ರು.ವೆಚ್ಚದಲ್ಲಿ ನೂತನ ಸಿಸಿ ರಸ್ತೆ ಕಾಮಗಾರಿಗೆ ಸೋಮವಾರ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು. ಮೋದಿಯವರು ಮೂರನೆಯ ಬಾರಿದೆ ದೇಶದ ಪ್ರಧಾನಿಯಾಗಿದ್ದಾರೆ. ಅವರು ಎಲ್ಲ ಸಮಾಜದ ಬಾಂಧವರನ್ನು ಒಂದೇ ರೀತಿ ನಡೆಸಿಕೊಂಡಿದ್ದು, ಎಲ್ಲ ಸಮುದಾಯಗಳಿಗೂ ಅಗತ್ಯವಾದ ಸೌಲಭ್ಯಗಳನ್ನು ಒದಗಿಸಿಕೊಡುವ ಬಹಳ ದೊಡ್ಡ ಕೆಲಸ ಮಾಡುತ್ತಿದ್ದಾರೆ ಎಂದರು.
ಮೋದಿಯವರ ಬಗ್ಗೆ ಇಲ್ಲಸಲ್ಲದ್ದನ್ನು ಹೇಳಿ ತಲೆ ಕೆಡಿಸುವ ಜನರೂ ಇದ್ದಾರೆ. ಅವರ ಮಾತುಗಳನ್ನು ನಂಬದೆ, ನಿಯತ್ತಿನಿಂದ ಬದುಕು ಸಾಗಿಸಿ ಎಂದರು.ಶಾಸಕನಾಗಿ ನಾನೂ ಕೂಡ ಕ್ಷೇತ್ರದ ಎಲ್ಲ ಜನರ ಆಶೋತ್ತರಗಳನ್ನು ಈಡೇರಿಸುವ ಕೆಲಸ ಮಾಡುತ್ತಿರುವೆ. ಎಲ್ಲ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸವನ್ನು ಸದ್ಭಾವನೆಯಿಂದ ಮಾಡುತ್ತಿರುವೆ. ಅಧಿಕಾರ ಶಾಶ್ವತವಲ್ಲವೆಂಬ ಸತ್ಯ ನನಗೆ ತಿಳಿದಿದೆ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸ ಕಲ್ಪಿಸಿಕೊಳ್ಳೂವ ಕೆಲಸವನ್ನು ಮಾಡುತ್ತಿದ್ದೇನೆ ಎಂದರು.
ಗ್ರಾಮೀಣರ ಏಳಿಗೆಗೆ ಸರ್ಕಾರವು ಗಂಗಾಕಲ್ಯಾಣ ಯೋಜನೆಯಂತಹ ಮಹತ್ವರ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು. ಭರಮಸಾಗರ ಬಿಜೆಪಿ. ಮಂಡಲ ಮಾಜಿ ಅಧ್ಯಕ್ಷ ಶೈಲೇಶ್, ನಾಗರಾಜ್, ಬುಡನ್, ಸಿದ್ದಲಿಂಗಣ್ಣ, ಹುಸೇನ್‍ಸಾಬ್ ಹಾಗೂ ಗ್ರಾಮದ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.;Resize=(128,128))
;Resize=(128,128))