ತಮ್ಮ 70ನೇ ವಯಸ್ಸಿನಲ್ಲೂ ಬೆಂಗಳೂರಿನಿಂದ ಸುಮಾರು 655 ಕಿ.ಮೀ. ದೂರದ ಕನ್ಯಾಕುಮಾರಿಗೆ ಸೈಕಲ್ ಯಾತ್ರೆ ನಡೆಸಿದ್ದಕ್ಕಾಗಿ ಮಾಜಿ ಸಚಿವ, ಬಿಜೆಪಿ ಶಾಸಕ ಎಸ್.ಸುರೇಶ್‌ಕುಮಾರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
- ಫೋನ್ ಮಾಡಿ ಅನುಭವ ಕೇಳಿ ತಿಳಿದುಕೊಂಡ ಪ್ರಧಾನಿ- 70ನೇ ವಯಸ್ಸಲ್ಲಿ 655 ಕಿ.ಮೀ. ಯಾತ್ರೆ ನಡೆಸಿದ್ದ ಶಾಸಕ
-----
ಕನ್ಯಾಕುಮಾರಿಗೆ ಸೈಕಲ್ ಯಾತ್ರೆ ನಡೆಸಿದ ಶಾಸಕ ಸುರೇಶ್ ಕುಮಾರ್ ಬಗ್ಗೆ ‘ಕನ್ಯಾಕುಮಾರಿಗೆ ಸುರೇಶ್ ಕುಮಾರ’ ಹೆಸರಲ್ಲಿ ಕನ್ನಡಪ್ರಭ ಡಿ.31ರಂದು ವರದಿ ಮಾಡಿತ್ತು.--
ಕನ್ನಡಪ್ರಭ ವಾರ್ತೆ ಬೆಂಗಳೂರುತಮ್ಮ 70ನೇ ವಯಸ್ಸಿನಲ್ಲೂ ಬೆಂಗಳೂರಿನಿಂದ ಸುಮಾರು 655 ಕಿ.ಮೀ. ದೂರದ ಕನ್ಯಾಕುಮಾರಿಗೆ ಸೈಕಲ್ ಯಾತ್ರೆ ನಡೆಸಿದ್ದಕ್ಕಾಗಿ ಮಾಜಿ ಸಚಿವ, ಬಿಜೆಪಿ ಶಾಸಕ ಎಸ್.ಸುರೇಶ್‌ಕುಮಾರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಗುರುವಾರ ದೂರವಾಣಿ ಮೂಲಕ ಸುರೇಶ್‌ಕುಮಾರ್ ಅವರನ್ನು ಸಂಪರ್ಕಿಸಿದ ಪ್ರಧಾನಿ ಮೋದಿ ಅವರು ಸೈಕಲ್ ಯಾತ್ರೆಯ ಅನುಭವ ಪಡೆದುಕೊಂಡು ಪ್ರಶಂಸೆ ವ್ಯಕ್ತಪಡಿಸಿದರು.ಈ ಬಗ್ಗೆ ಖುದ್ದು ಸುರೇಶ್‌ಕುಮಾರ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ‘ಅತ್ಯಂತ ಸಂತಸದ ಸಂಗತಿ. ಪ್ರಧಾನಿ ಮೋದಿ ಅವರು ನನಗೆ ಖುದ್ದು ಫೋನ್ ಮಾಡಿ ನಾನು ಕನ್ಯಾಕುಮಾರಿಗೆ ಸೈಕಲ್ ಯಾತ್ರೆ ಮಾಡಿದ್ದಕ್ಕೆ ಅಭಿನಂದಿಸಿ ಸ್ಪೂರ್ತಿ ನೀಡಿದರು’ ಎಂದು ತಿಳಿಸಿದ್ದಾರೆ.
‘51 ವರ್ಷಗಳ ನಂತರ ಮತ್ತೊಮ್ಮೆ ವಿವೇಕಾನಂದ ಶಿಲಾ ಸ್ಮಾರಕಕ್ಕೆ ನನ್ನ ಸ್ನೇಹಿತರ ಜೊತೆ ಸೈಕಲ್ ಸವಾರಿ ಮಾಡಿರುವುದು ವಿಶೇಷ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. 2025ರಲ್ಲಿ ನಮ್ಮ ತಂಡ 8,000 ಕಿ.ಮೀ. ದೂರದಷ್ಟು ಸೈಕ್ಲಿಂಗ್ ಮಾಡಿರುವ ಮಾಹಿತಿ ಪಡೆದು ಅಚ್ಚರಿ ಮತ್ತು ಸಂತಸ ಎರಡನ್ನೂ ವ್ಯಕ್ತಪಡಿಸಿದರು. ಅದರಲ್ಲೂ ತೀವ್ರ ಅನಾರೋಗ್ಯದ ನಂತರ ನಾನು ಈ ಕಾರ್ಯ ಕೈಗೊಂಡ ಬಗ್ಗೆ ಪ್ರಧಾನಿಗಳು ನನ್ನ ಬೆನ್ನು ತಟ್ಟಿದ್ದು ನನ್ನ ಸುಕೃತ’ ಎಂದು ಅವರು ಹೇಳಿದ್ದಾರೆ.