ಸಾರಾಂಶ
ಬೆಳಗಾವಿ ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣಗಳ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಿ ಮೋದಿ ನಾಡಿದ್ದು ಚಾಲನೆ ನೀಡಲಿದ್ದಾರೆ.
ನವದೆಹಲಿ: ಬೆಳಗಾವಿ ವಿಮಾನ ನಿಲ್ದಾಣ ವಿಸ್ತರಿತ ಟರ್ಮಿನಲ್ ಉದ್ಘಾಟನೆ ಹಾಗೂ ಹುಬ್ಬಳ್ಳಿ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಶಂಕುಸ್ಥಾಪನೆಯೂ ಸೇರಿದಂತೆ ದೇಶಾದ್ಯಂತ 12 ಸಾವಿರ ಕೋಟಿ ರು. ಮೌಲ್ಯದ 16 ವಿಮಾನ ನಿಲ್ದಾಣಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಮಾ.10ರಂದು ಏಕಕಾಲದಲ್ಲಿ ಉತ್ತರ ಪ್ರದೇಶದ ಅಜಂಗಢದಿಂದ ಚಾಲನೆ ನೀಡಲಿದ್ದಾರೆ.ಪ್ರಮುಖವಾಗಿ ಪುಣೆ, ಗ್ವಾಲಿಯರ್, ಲಖನೌ, ದೆಹಲಿ, ಕೊಲ್ಹಾಪುರ, ಜಬಲ್ಪುರ, ಅಲಿಗಢ, ಅಜಂಗಢ, ಚಿತ್ರಕೂಟ, ಮೊರಾದಾಬಾದ್, ಶ್ರಾವಸ್ತಿ, ಆಡಂಪುರ, ವಾರಾಣಸಿ ಮತ್ತು ಬೆಳಗಾವಿಯಲ್ಲಿ ಟರ್ಮಿನಲ್ ಉದ್ಘಾಟನೆ ಹಾಗೂ ಹುಬ್ಬಳ್ಳಿ ಮತ್ತು ಕಡಪ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಲಿದೆ.