ಬಿಜೆಪಿ ಎಸ್ಸಿ ಮೋರ್ಚಾ ಘಟಕ ಬಲಿಷ್ಠಗೊಳಿಸಲು ಪಿ.ಎಂ.ರವಿ ಕರೆ

| Published : Mar 22 2024, 01:04 AM IST

ಸಾರಾಂಶ

ಕೊಡಗು ಜಿಲ್ಲಾ ಬಿಜೆಪಿ ಪರಿಶಿಷ್ಟ ಮೋರ್ಚಾದ ಸಭೆ ಜಿಲ್ಲಾಧ್ಯಕ್ಷ ಪಿ.ಎಂ.ರವಿ ಅಧ್ಯಕ್ಷತೆಯಲ್ಲಿಸುಂಟಿಕೊಪ್ಪದಲ್ಲಿ ನಡೆಯಿತು. ಈ ಸಂದರ್ಭ ಮಾತನಾಡಿದ ಪಿ.ಎಂ.ರವಿ, ಜಿಲ್ಲೆಯಲ್ಲಿ ಎಸ್ಸಿ ಮೋರ್ಚದ ಘಟಕವನ್ನು ಬಲಿಷ್ಠಗೊಳಿಸುವ ಮೂಲಕ ಪರಿಶಿಷ್ಟ ಜನಾಂಗದವರು ರಾಜಕೀಯವಾಗಿ ಬೆಳೆಯುವಂತಾಗಬೇಕೆಂದು ಆಶಿಸಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಬಿಜೆಪಿ ಪರಿಶಿಷ್ಟ ಮೋರ್ಚಾದ ಸಭೆ ಜಿಲ್ಲಾಧ್ಯಕ್ಷ ಪಿ.ಎಂ.ರವಿ ಅಧ್ಯಕ್ಷತೆಯಲ್ಲಿ ಇಲ್ಲಿನ ದ್ವಾರಕಾ ಹೊಟೇಲ್‌ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭ ಮಾತನಾಡಿದ ಪಿ.ಎಂ.ರವಿ, ಕೊಡಗು ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯವರು ಒಂದೂವರೆ ಲಕ್ಷಕ್ಕಿಂತಲೂ ಅಧಿಕವಾಗಿದ್ದು ಜಿಲ್ಲೆಯಲ್ಲಿ ಎಸ್ಸಿ ಮೋರ್ಚದ ಘಟಕವನ್ನು ಬಲಿಷ್ಠಗೊಳಿಸುವ ಮೂಲಕ ಪರಿಶಿಷ್ಟ ಜನಾಂಗದವರು ರಾಜಕೀಯವಾಗಿ ಬೆಳೆಯುವಂತಾಗಬೇಕೆಂದು ಆಶಿಸಿದರು.

ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿದವರನ್ನು ಪಕ್ಷವು ಗುರುತಿಸಿ ಉನ್ನತ ಸ್ಥಾನಮಾನ ನೀಡುತ್ತ ಬಂದಿದೆ. ಪಕ್ಷದ ಸಂಘಟನೆಯೊಂದಿಗೆಎಲ್ಲರೂ ಕೈ ಜೋಡಿಸುವಂತಾಗಬೇಕು ಎಂದರು.

ಮುಂದೆ ನಡೆಯಲಿರುವ ಲೋಕಸಭಾಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯ ಪರವಾಗಿ ಹಚ್ಚಿನ ಮತ ತಂದು ಕೊಡುವಲ್ಲಿ ಎಸ್ಸಿ ಮೋರ್ಚದ ಕಾರ್ಯಕರ್ತರು ಶ್ರಮ ವಹಿಸಬೇಕೆಂದರು.

ಬಿಜೆಪಿ ರಾಷ್ಟ್ರಭಕ್ತಿ, ರಾಷ್ಟ್ರೀಯತೆ ಬಗ್ಗೆ ಅಪಾರ ಗೌರವ ನೀಡುವ ಪಕ್ಷವಾಗಿದೆಎಂದರು.ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನೀಲ್‌ಕುಮಾರ್, ಮಾಜಿ ಅಧ್ಯಕ್ಷೆ ಬಿ.ಐ.ಭವಾನಿ, ಸೋಮವಾರಪೇಟೆ ಗ್ರಾಮಾಂತರ ಮಂಡಲ ಎಸ್ಸಿ ಮೋರ್ಚಾ ಅಧ್ಯಕ್ಷ ಜಿ.ಜಗನಾಥ್, ಪಕ್ಷದ ಹಿರಿಯ ಸದಸ್ಯ ಬಿ.ಕೆ.ಮೋಹನ ಮತ್ತಿತರರು ಮಾತನಾಡಿದರು.

ಶಕ್ತಿ ಕೇಂದ್ರದ ಅಧ್ಯಕ್ಷ ಧನು ಕಾವೇರಪ್ಪ, ಪ್ರಧಾನ ಕಾರ್ಯದರ್ಶಿ ವಿ.ರಾಜ, ಕಾರ್ಯದರ್ಶಿ ಪ್ರಶಾಂತ್ (ಕೋಕಾ), ಪಂಚಾಯಿತಿ ಸದಸ್ಯರಾದ ಆನಂದ, ಪ್ರೇಮ ಕೃಷ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಕೆ ಚಂದ್ರು ಮತ್ತಿತರರಿದ್ದರು.

ಜಿಲ್ಲಾ ಉಪಾಧ್ಯಕ್ಷರಾಗಿ ಪಿ.ಬಿ.ಮಂಜು ಹಾಗೂ ಕಾರ್ಯದರ್ಶಿಯಾಗಿ ಜ್ಯೋತಿ ಅವರನ್ನುಆಯ್ಕೆ ಮಾಡಲಾಯಿತು.