The court has delivered a verdict sentencing a juvenile in conflict with the law to approximately 20 years of rigorous imprisonment under various sections for sexually assaulting a minor girl.
ಬೀದರ್: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನಿಗೆ ನ್ಯಾಯಾಲಯ ವಿವಿಧ ಕಲಂ ಅಡಿ ಸುಮಾರು 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪಿತ್ತಿದೆ.
2020ರ ಮಾರ್ಚ್ ತಿಂಗಳಿನಲ್ಲಿ ನಡೆದ ಘಟನೆ ಕುರಿತು ಹುಮನಾಬಾದ್ ಸಿಪಿಐ ನ್ಯಾಮೆಗೌಡ ಅವರು ತನಿಖೆ ನಡೆಸಿ ಪೊಕ್ಸೋ ಕಾಯ್ದೆಯಡಿ ದೋಷಾರೋಪಣೆ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ನಂತರ 2ನೇ ಹೆಚ್ಚುವರಿ ಬಸವಕಲ್ಯಾಣ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಧೀಶರಾದ ಯಶವಂತ ಆರ್ ತಾವರೆ ಪ್ರಕರಣದ ವಿಚಾರಣೆ ನಡೆಸಿ ವಿವಿಧ ಭಾರತೀಯ ದಂಡ ಸಂಹಿತೆ ಜೊತೆ ಪೋಕ್ಸೋ ಕಾಯ್ದೆಯಡಿ ಆರೋಪಗಳು ಸಾಬೀತು ಆಗಿರುವ ತೀರ್ಪನ್ನು ನೀಡಿ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ಆಗಸ್ಟ್ 10ರಂದು ತೀರ್ಪು ನೀಡಿ ಸಮಾಜದಲ್ಲಿ ಅಪರಾಧಿಕ ಮನೋಭಾವನೆ ಹೊಂದಿರುವ ಸಮಾಜ ಘಾತಕರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.ಪ್ರಕರಣವನ್ನು ವಿಶೇಷ ಸರ್ಕಾರಿ ಅಭಿಯೋಜಕರಾದ ಸಂತೋಷಕುಮಾರ ಟಿ. ಸಿದ್ದೇಶ್ವರ ಹಾಗೂ ವಿಶೇಷ ಸರ್ಕಾರಿ ಅಭಿಯೋಜಕರಾದ ಬಸವಂತರೆಡ್ಡಿ ಹಾಗೂ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
