ಸಾರಾಂಶ
ಗಂಗಾವತಿ ನಗರದ ಶ್ರೀ ಕೊಲ್ಲಿ ನಾಗೇಶ್ವರ ರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದಿಂದ ಹಮ್ಮಿಕೊಂಡಿದ್ದ ವಾರದ ಓದು ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಡಾ. ಎಸ್.ಜಿ. ಗುರಿಕಾರ ಮಾತನಾಡಿದರು.
ಗಂಗಾವತಿ: ಭಾವನಾತ್ಮಕ ಸಂವೇದನೆಗಳ ಅಭಿವ್ಯಕ್ತಿಯೇ ಕಾವ್ಯ ಎಂದು ಪ್ರಾಧ್ಯಾಪಕ ಡಾ. ಎಸ್.ಜಿ. ಗುರಿಕಾರ ಹೇಳಿದರು.
ನಗರದ ಶ್ರೀ ಕೊಲ್ಲಿ ನಾಗೇಶ್ವರ ರಾವ್ ಗಂಗಯ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗದಿಂದ ಹಮ್ಮಿಕೊಂಡಿದ್ದ ವಾರದ ಓದು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮನುಷ್ಯನಿಗೆ ಅತಿ ದುಃಖವಾದಾಗ, ಸಂತೋಷವಾದಾಗ ಭಾವನೆಗಳು ಉಕ್ಕಿ ಬರುತ್ತವೆ. ಆ ಅನುಭವಗಳನ್ನು ಪದಗಳಲ್ಲಿ ಹಿಡಿದಿಡುವುದು ಸವಾಲಿನ ಕೆಲಸ. ಕಾವ್ಯ ನಮ್ಮೆಲ್ಲ ಭಾವನೆಗಳಿಗೆ ಕನ್ನಡಿ. ನಾನು ವಿಜ್ಞಾನದ ಪ್ರಾಧ್ಯಾಪಕನಾದರೂ ಕನ್ನಡ ನನ್ನ ಪ್ರಿಯವಾದ ಭಾಷೆ. ಬೇರೆ ಬೇರೆ ಭಾಗದಲ್ಲಿ ಬೆಳೆದು ಭಿನ್ನ ಪರಿಸರದ ಅನುಭವ ಪಡೆದು ಬೇರೆ ಬೇರೆ ಭಾಷೆಗಳ ತಿಳಿವಳಿಕೆಯಿಂದ ಸಾಹಿತ್ಯದ ರಚನೆ ಕೈಗೊಳ್ಳಲು ಕಾರಣವಾಯಿತು. ದೇವರೆಲ್ಲಿದ್ದಾನೆ ಹುಡುಕಿ ಕೊಡಿ ಸಂಕಲನದ ಮೂಲಕ ನನ್ನ ಭಾವನೆಗಳನ್ನು ಹೊರಹಾಕಿರುವೆ. ನನ್ನ ಕೃತಿಯ ಕುರಿತು ಚರ್ಚೆ ಮಾಡುತ್ತಿರುವುದು ನನಗೆ ಸಂತಸ ತಂದಿದೆ ಎಂದರು.ಪ್ರಾಚಾರ್ಯ ಡಾ. ಮುಮ್ತಾಜ್ ಬೇಗಂ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ. ಜಗದೇವಿ ಕಲಶೆಟ್ಟಿ, ಗುಂಡೂರು ಪವನಕುಮಾರ, ಡಾ. ಪಾಗುಂಡಪ್ಪ, ಡಾ. ಜೆ.ಎಂ. ಶಿಲ್ಪಾ ಉಪಸ್ಥಿತರಿದ್ದರು.
ವಾರದ ಓದು ಸಂಚಾಲಕ ಡಾ. ಬಸವರಾಜ ಗೌಡನಬಾವಿ ಪ್ರಾಸ್ತಾವಿಕ ಮಾತನಾಡಿದರು. ಐಶ್ವರ್ಯಾ ಸ್ವಾಗತಿಸಿದರು. ಶ್ರೀನಿವಾಸ ಪ್ರಾರ್ಥಿಸಿದರು. ನೀಲಮ್ಮ ವಂದಿಸಿದರು.