ಕಾವ್ಯವು ಜೀವನ ಪ್ರೀತಿ ಬಿಂಬಿಸುವಂತಿರಲಿ: ಸಾಹಿತಿ ವನರಾಗ ಶರ್ಮಾ

| Published : Feb 25 2025, 12:45 AM IST

ಸಾರಾಂಶ

ಕಾವ್ಯವು ಜೀವನ ಪ್ರೀತಿಯನ್ನು ಬಿಂಬಿಸುವಂತಿರಬೇಕು

ಯಲ್ಲಾಪುರ: ಕಾವ್ಯವು ಜೀವನ ಪ್ರೀತಿಯನ್ನು ಬಿಂಬಿಸುವಂತಿರಬೇಕು ಎಂದು ಸಾಹಿತಿ ವನರಾಗ ಶರ್ಮಾ ಹೇಳಿದರು.ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು, ಜಿಲ್ಲೆ ಮತ್ತು ತಾಲೂಕು ಘಟಕಗಳ ಆಶ್ರಯದಲ್ಲಿ ಪಟ್ಟಣದ ಅಡಿಕೆ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಅಖಿಲ ಕರ್ನಾಟಕ ಪ್ರಥಮ ಶಿಶು ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ಕಾವ್ಯದ ಆತ್ಮ ಮಾನವೀಯತೆಯ ತಳಹದಿಯ ಜೀವನ ಮೌಲ್ಯಗಳು. ಕಾವ್ಯ ಸಿದ್ದಿಸಿಕೊಂಡು ಬರೆಯುತ್ತ ಮುನ್ನೆಡೆಯಬೇಕು. ವಾಸ್ತವಿಕ ತಳಹದಿಯಲ್ಲಿ ಕವಿತೆ ಜೀವನಪ್ರೀತಿ ಬೆಳೆಸಿಕೊಳ್ಳುವ ಪ್ರಯುಕ್ತವಾಗಬೇಕು ಎಂದರು.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ವಾಸು ಸಮುದ್ರವಳ್ಳಿ "ಶಿಶು ಸಾಹಿತ್ಯದಲ್ಲಿ ನಾಟಕ ಮತ್ತು ಸಾಂಸ್ಕೃತಿಕ ಮೌಲ್ಯ " ಕುರಿತು ಉಪನ್ಯಾಸ ನೀಡಿದರು. ಕಾವ್ಯಾವಲೋಕನ ಕವಿಗೋಷ್ಠಿಯಲ್ಲಿ ಸುಬ್ರಾಯ ಬಿದ್ರೇಮನೆ,ಭವ್ಯಾ ಹಳೆಯೂರು, ಸುವರ್ಣಾ ಭಟ್ಟ, ರಮೇಶ ಇಂಗಳಗಿ, ವೈಶಾಲಿ ಶ್ರೀನಿವಾಸ, ಅನುಪಮಾ ಡಿ, ಸುನಂದಾ ಪುರಾಣಿಕ, ಅಮೃತ ಸಂದೀಪ, ಮಂಜುನಾಥ ದುರಮಳಾ, ಅವ್ವಕ್ಕಾ ಪೆಟ್ನೇಕರ್, ಮಂಗಲಾ ಉಪಾಧ್ಯಾಯ, ಶಂಕರ ಕಿಲ್ಲೇಕರ್, ಆನಂದ ಜಿ.ಎನ್, ಯಮುನಾ ನಾಯ್ಕ, ಪಾತ್ರಾಮ ಡಿ ಸ್ವರಚಿತ ಕವಿತೆ ವಾಚಿಸಿದರು.

ಸಮ್ಮೇಳನದ ಸರ್ವಾಧ್ಯಕ್ಷ ತಮ್ಮಣ್ಣ ಬೀಗಾರ ಅಧ್ಯಕ್ಷತೆ ವಹಿಸಿದ್ದರು. ಧಾರವಾಡ ಜಿಲ್ಲಾಧ್ಯಕ್ಷ ಎ.ಎ ದರ್ಗಾ, ಗಮಕ ಪರಿಷತ್ತಿನ ಜಿಲ್ಲಾಧ್ಯಕ್ಷೆ ಮುಕ್ತಾ ಶಂಕರ, ವಿಶ್ರಾಂತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ, ಮಲೆನಾಡು ಸೊಸೈಟಿ ಅಧ್ಯಕ್ಷ ಎಂ.ಆರ್. ಹೆಗಡೆ, ಪತ್ರಿಕಾ ಸಂಘದ ಅಧ್ಯಕ್ಷ ಕೆ.ಎಸ್. ಭಟ್ಟ, ಸಾಹಿತಿ ಸಾತುಗೌಡ ಅಂಕೋಲಾ, ಶಿಕ್ಷಕ ಸುಧಾಕರ ನಾಯಕ, ಚೇತನಾ ಪೌಂಡೇಶನ್ ಧಾರವಾಡದ ಸಂಸ್ಥಾಪಕ ಚಂದ್ರಶೇಖರ ಮಾಡಲಗೇರಿ, ಕೇಂದ್ರ ವೇದಿಕೆಯ ಪ್ರಮುಖ ನಮೀಬಸಾಬ್ ಕುಷ್ಠಗಿ, ಹವ್ಯಕ ಸಂಘದ ಅಧ್ಯಕ್ಷ ಡಿ ಶಂಕರ ಭಟ್ಟ, ಕೇಂದ್ರ ಸಾಹಿತ್ಯ ವೇದಿಕೆಯ ತಾಲೂಕಾಧ್ಯಕ್ಷೆ ಆಶಾ ಶೆಟ್ಟಿ, ಶಿರಸಿ ಘಟಕಾಧ್ಯಕ್ಷ ಕೃಷ್ಣ ಪದಕಿ, ಜಿಲ್ಲಾಧ್ಯಕ್ಷೆ ಶಿವಲೀಲಾ ಹುಣಸಗಿ, ವಿವಿಧ ತಾಲೂಕುಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ ಉಪ್ಪಾರ ಹಾಗೂ ಸಂಘಟನೆಯ ಪ್ರಮುಖರನ್ನು, ಗಣ್ಯರನ್ನು ಗೌರವಿಸಲಾಯಿತು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ತಾಲೂಕಾ ಸಂಘಟನಾ ಕಾರ್ಯದರ್ಶಿ ಸತೀಶ ಶೆಟ್ಟಿ ನಿರ್ವಹಿಸಿದರು.