ಇಲ್ಲಿನ ಶಿರ್ವದ ಮೂಲ್ಕಿ ಸುಂದರ ರಾಮ್ ಶೆಟ್ಟಿ ಕಾಲೇಜಿನಲ್ಲಿ ಸಾಹಿತ್ಯ ಸಂಘದ ವತಿಯಿಂದ ಕವನ ರಚನಾ ಕಮ್ಮಟ ಕಾರ್ಯಕ್ರಮ ಶನಿವಾರ ಕಾಲೇಜಿನ ಸಭಾಂಗಣದಲ್ಲಿ ಜರುಗಿತು.
ಕಾಪು : ಇಲ್ಲಿನ ಶಿರ್ವದ ಮೂಲ್ಕಿ ಸುಂದರ ರಾಮ್ ಶೆಟ್ಟಿ ಕಾಲೇಜಿನಲ್ಲಿ ಸಾಹಿತ್ಯ ಸಂಘದ ವತಿಯಿಂದ ಕವನ ರಚನಾ ಕಮ್ಮಟ ಕಾರ್ಯಕ್ರಮ ಶನಿವಾರ ಕಾಲೇಜಿನ ಸಭಾಂಗಣದಲ್ಲಿ ಜರುಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಕವಿಯತ್ರಿ, ರಂಗನಟಿ ಪೂರ್ಣಿಮಾ ಸುರೇಶ್ ಮಾತನಾಡಿ, ಭಾವನೆಗಳ ಹೊಸ ಹುಟ್ಟೇ ಕವನ, ಅದು ಅಕ್ಷರ, ಅಭಿನಯ ಯಾವುದೂ ಇರಬಹುದು. ತನ್ನೊಳಗಿನ ಭಾವನೆಯನ್ನು ಒಣ ಹಾಕುವ ಬದಲು ಅದನ್ನು ಹಸಿಯಾಗಿಸೋಣ, ಅದಕ್ಕೆ ಜೀವ ನೀಡೋಣ, ಮನದೊಳಗಿರುವ ಭಾವನೆಗಳಿಗೆ ಅಕ್ಷರ ರೂಪ ಬಂದಾಗ ಅದುವೇ ಕವನದ ರೂಪ ಪಡೆಯುತ್ತದೆ ಎಂದರು.ನಂತರ ವಿದ್ಯಾರ್ಥಿಗಳಿಗೆ ಕವನ ರಚನಾ ಕಮ್ಮಟದ ಕಾರ್ಯಾಗಾರ ನಡೆಸಿಕೊಟ್ಟರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಮಿಥುನ್ ಚಕ್ರವರ್ತಿ ಮಾತನಾಡಿ, ಉದಯೋನ್ಮುಖ ಕವಿಗಳು ಹುಟ್ಟಿಕೊಳ್ಳಲಿ. ಈ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಬದುಕಿನ ದಾರಿದೀಪವಾಗಲಿ ಎಂದು ಹಾರೈಸಿದರು.ಕನ್ನಡ ಪ್ರಾಧ್ಯಾಪಕಿ ವರಮಹಾಲಕ್ಷ್ಮೀ ಸ್ವಾಗತಿಸಿ, ವಿದ್ಯಾರ್ಥಿನಿ ಧನುಶ್ರೀ ನಿರೂಪಿಸಿ, ವಿದ್ಯಾರ್ಥಿ ಮಿಥುನ್ ವಂದಿಸಿದರು.