ತುರುವೇಕೆರೆಯಲ್ಲಿ ಉಳ್ಳವರ ಪರ ವಕಾಲತ್ತು ವಹಿಸುವ ಪೋಲಿಸರು. ಡಿಎಸ್‌ಎಸ್ ಮುಖಂಡರ ದೂರು

| Published : Dec 15 2024, 02:02 AM IST

ತುರುವೇಕೆರೆಯಲ್ಲಿ ಉಳ್ಳವರ ಪರ ವಕಾಲತ್ತು ವಹಿಸುವ ಪೋಲಿಸರು. ಡಿಎಸ್‌ಎಸ್ ಮುಖಂಡರ ದೂರು
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನಲ್ಲಿ ದಲಿತರೂ ಸೇರಿದಂತೆ ಇನ್ನಿತರ ಸಮುದಾಯದ ಬಡವರು ನೀಡುವ ದೂರಿಗೆ ತಾಲೂಕಿನ ಪೊಲೀಸ್ ಇಲಾಖೆಯಲ್ಲಿ ನ್ಯಾಯ ದೊರೆಯುತ್ತಿಲ್ಲ ಎಂದು ತಾಲೂಕು ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ಸಂಚಾಲಕ ಕೃಷ್ಣ ಮಾದಿಗ ಆರೋಪಿಸಿದ್ದಾರೆ. ತುರುವೇಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನಲ್ಲಿ ದಲಿತರೂ ಸೇರಿದಂತೆ ಇನ್ನಿತರ ಸಮುದಾಯದ ಬಡವರು ನೀಡುವ ದೂರಿಗೆ ತಾಲೂಕಿನ ಪೊಲೀಸ್ ಇಲಾಖೆಯಲ್ಲಿ ನ್ಯಾಯ ದೊರೆಯುತ್ತಿಲ್ಲ ಎಂದು ತಾಲೂಕು ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ಸಂಚಾಲಕ ಕೃಷ್ಣ ಮಾದಿಗ ಆರೋಪಿಸಿದ್ದಾರೆ.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಬಡವ ಮತ್ತು ಶ್ರೀಮಂತರ ನಡುವೆ ನಡೆಯುವ ಜಗಳದಲ್ಲಿ ಅಮಾಯಕರಾದ ಬಡವರಿಗೆ ನ್ಯಾಯ ದೊರೆಯುತ್ತಿಲ್ಲ. ಬಡವರು ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ದೂರು ಸಲ್ಲಿಸಿದ ಸಂಧರ್ಭದಲ್ಲಿ ಪೊಲೀಸರೇ ಪ್ರತಿಸ್ಪರ್ಧಿಗೆ ದೂರುದಾರರ ವಿರುದ್ಧ ಪ್ರತಿದೂರು ಸಲ್ಲಿಸುವಂತೆ ಸಲಹೆ ನೀಡಿ ದೂರು ಸ್ವೀಕರಿಸುತ್ತಿದ್ದಾರೆಂದು ಹೇಳಿದರು.ಛಲವಾದಿ ಸಂಘಟನೆಯ ಸಂಚಾಲಕ ಕುಣಿಕೆನಹಳ್ಳಿ ಜಗದೀಶ್ ಮಾತನಾಡಿ, ನೂರಾರು ವರ್ಷಗಳಿಂದ ಶೋಷಣೆಗೆ ಒಳಗಾಗಿದ್ದ ದಲಿತರ ಹಿತ ರಕ್ಷಣೆ ಮಾಡುವ ಸಲುವಾಗಿ ಡಾ.ಅಂಬೇಡ್ಕರ್ ರವರು ಸಂವಿಧಾನ ರಚಿಸಿ ಜಾತಿ ನಿಂದನೆ ಪ್ರಕರಣ ದಾಖಲಿಸಲು ಅನುವು ಮಾಡಿಕೊಟ್ಟಿದ್ದಾರೆ. ಇದನ್ನು ಯಾವೊಬ್ಬ ದಲಿತರೂ ದುರುಪಯೋಗಪಡಿಸಿಕೊಂಡಿಲ್ಲ ಎಂದು ಹೇಳಿದರು.

ಈ ಸಂಧರ್ಭದಲ್ಲಿ ದಲಿತ ಮುಖಂಡರಾದ ಮಾದಿಹಳ್ಳಿ ಚಂದ್ರಶೇಖರ್, ಕೋಳಘಟ್ಟ ಕೇಶವ, ಅರಳೀಕೆರೆ ಶೇಖರ್, ಕೆಂಪಣ್ಣ, ನಂಜುಂಡ, ಬಾಳೇಕಾಯಿ ಶೇಖರ್, ಮೇಲನಹಳ್ಳಿ ಹರೀಶ್, ಕೊಂಡಜ್ಜಿ ರಂಗಸ್ವಾಮಿ, ಹುಲಿಕೆರೆ ರಘು, ಕಾಂತರಾಜು, ಸೋಮೇನಹಳ್ಳಿ ಆಕಾಶ್, ಮಂಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.