ಸಾರಾಂಶ
ಧಾರವಾಡ: ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವುದು ಹೆಮ್ಮೆಯ ಸಂಗತಿ. ಪೊಲೀಸರು ರಕ್ಷಣಾ ಸೇವೆಯೊಂದಿಗೆ ಕುಟುಂಬಕ್ಕೂ ಆದ್ಯತೆ ನೀಡಬೇಕು. ಕುಟುಂಬ ಸದಸ್ಯರ ಆರೋಗ್ಯ, ಶಿಕ್ಷಣಗಳಿಗೆ ಮಹತ್ವ ನೀಡಬೇಕು ಎಂದು ನಿವೃತ್ತ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಶಂಕರ ರಾಗಿ ಹೇಳಿದರು.
ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ಮೀಸಲು ಪೊಲೀಸ್ ಪಡೆಯ ಕವಾಯತ್ತು ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಮತ್ತು ನಿವೃತ್ತ ಅಧಿಕಾರಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.ಪೊಲೀಸ್ ಅಧಿಕಾರಿ, ಸಿಬ್ಬಂದಿ ಸೇವೆಗೆ ತಕ್ಕ ಸೌಲಭ್ಯಗಳನ್ನು ಪಡೆಯಬೇಕು. ಸರ್ಕಾರ ಪೊಲೀಸರ ಸಮಸ್ಯೆಗಳಿಗೆ, ಮೂಲಸೌಕರ್ಯಗಳಿಗೆ ಕಿವಿ ಆಗಬೇಕು ಎಂದರು.
ನಮ್ಮನ್ನು ನಂಬಿರುವ ಕುಟುಂಬಕ್ಕೂ ನ್ಯಾಯ ಸೀಗುವಂತೆ ಗಮನ ಹರಿಸಬೇಕು. ಸೇವಾ ನಿವೃತ್ತಿ ನಂತರ ನಮ್ಮ ಯೋಗಕ್ಷೇಮ ನೋಡಿಕೊಳ್ಳುವವರು ನಮ್ಮ ಕುಟುಂಬದವರು. ಆದ್ದರಿಂದ ಅವರಿಗೂ ಗಮನ ನೀಡಬೇಕು ಎಂದರು.ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಗೋಪಾಲ ಎಂ. ಬ್ಯಾಕೋಡ ಸ್ವಾಗತಿಸಿ, ಪೊಲೀಸ ಕಲ್ಯಾಣ ನಿಧಿಯ ವರದಿ ವಾಚಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎನ್.ವಿ. ಬರಮನಿ ವಂದಿಸಿದರು. ಕೆಎಸ್‌ಐಎಫ್‌ಸಿ ಕಮಾಂಡೆಂಟ್ ಗಣೇಶ ಹಾಗೂ ಉಪ ಪೊಲೀಸ ಅಧೀಕ್ಷಕ ಎಸ್.ಎಂ. ನಾಗರಾಜ ವೇದಿಕೆಯಲ್ಲಿದ್ದರು. ಮೀಸಲು ಪೊಲೀಸ್ ಪಡೆಯ ಎ.ಎಫ್. ಜಿಲ್ಲೇನವರ,. ವೈ.ಎಂ. ದಿಡ್ಡಮನಿ ನಿರೂಪಿಸಿದರು.
ನಿವೃತ್ತ ಲೋಕಾಯುಕ್ತ ಎಸ್.ಪಿ. ಶಂಕರ ರಾಗಿ ಪರೇಡ್ ಕಮಾಂಡರ್ ಎಫ್.ಆರ್. ಡೊಕ್ಕಣ್ಣವರ ಸಹಾಯದಲ್ಲಿ ತೆರೆದ ಜೀಪ್‌ನಲ್ಲಿ ವಿವಿಧ ಪರೇಡ್ ತಂಡಗಳ ವಿಕ್ಷಣೆ ಮಾಡಿ, ಗೌರವ ಸ್ವಿಕರಿಸಿದರು. ಮೀಸಲು ಪೊಲೀಸ್ ಪಡೆಯ ವೈ.ಎಫ್. ಭಜಂತ್ರಿ ನೇತೃತ್ವದ ಪೊಲೀಸ್ ಬ್ಯಾಂಡ್ ತಂಡ ಸ್ಟಿಕ್ ಮೇಜರ್ ಸಾಗರ ಬಸರಕೊಡಿ ಸಹಾಯದಲ್ಲಿ ಬ್ಯಾಂಡ್ ನುಡಿಸಿದರು.ಪೊಲೀಸ್ ಅಧಿಕಾರಿ ಜಿ.ಎಲ್. ಜುಂಜೂರಿ ಬೆಂಗಾವಲಿನಲ್ಲಿ ವಿ.ಡಿ. ಕುರಗೋವಿನಕೊಪ್ಪ ರಾಷ್ಟ್ರಧ್ವಜವನ್ನು ಮತ್ತು ಎಸ್.ಆರ್. ಕರಿಕಟ್ಟಿ ಅವರು ಪೊಲೀಸ್ ಧ್ವಜದೊಂದಿಗೆ ಆಗಮಿಸಿ ಧ್ವಜಗಳಿಗೆ ಗೌರವ ಸಲ್ಲಿಸಿದರು.
ಗೌರವ ಸಲ್ಲಿಕೆಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ವಿವಿಧ ಅಧಿಕಾರಿ ಮತ್ತು ಸಿಬ್ಬಂದಿಗಳಾದ ಎಚ್.ಜಿ. ತಳವಾರ, ಎನ್.ವೈ. ಗೊಂದಳಿ, ಎ.ಜಿ. ಹವಗಿ, ಕೆ.ಎಚ್. ಕರ್ಜಗಿ, ಎಸ್.ಕೆ. ನಾಗನಗೌಡರ, ಆರ್.ಜೆ. ಪಂಗಳೇರ, ಎಲ್.ಎಸ್. ಮುತ್ತಿನ, ಎ.ಎಂ. ಅಂಬಿಗೇರ, ಆರ್.ಎನ್. ಗೋರಗುದ್ದಿ, ವಿ.ಎಸ್. ಬೆಳಗಾಂಕರ, ಚಾಮುಂಡೇಶ್ವರಿ, ಎಂ.ಎಸ್. ಅಂಚಿ, ಎಂ.ಎ. ಗೋಲಂದಾಜ, ಬಿ.ಎಸ್. ಹುಬ್ಬಳ್ಳಿ ಮತ್ತು ಬಿ.ಎಂ. ಮಡಿವಾಳರ ಅವರನ್ನು ಸನ್ಮಾನಿಸಲಾಯಿತು.