ಕಳ್ಳತನ ಪ್ರಕರಣ ಬೇಧಿಸಿದ ಪೊಲೀಸರು, 4 ಲಕ್ಷ ಮೌಲ್ಯದ ಚಿನ್ನಾಭರಣ ವಶ

| Published : Aug 30 2024, 01:04 AM IST

ಕಳ್ಳತನ ಪ್ರಕರಣ ಬೇಧಿಸಿದ ಪೊಲೀಸರು, 4 ಲಕ್ಷ ಮೌಲ್ಯದ ಚಿನ್ನಾಭರಣ ವಶ
Share this Article
  • FB
  • TW
  • Linkdin
  • Email

ಸಾರಾಂಶ

ಬ್ಯಾಡಗಿ ತಾಲೂಕಿನ ಬಡಮಲ್ಲಿ ಗ್ರಾಮದಲ್ಲಿ ಕಳೆದ ಜುಲೈ ತಿಂಗಳಿನಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬ್ಯಾಡಗಿ: ತಾಲೂಕಿನ ಬಡಮಲ್ಲಿ ಗ್ರಾಮದಲ್ಲಿ ಕಳೆದ ಜುಲೈ ತಿಂಗಳಿನಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಜುಲೈ 24ರಂದು ಗ್ರಾಮದ ಬಸವರಾಜ ಚನ್ನಬಸಪ್ಪ ದೇವಗಿರಿ ಎಂಬುವರ ಮನೆಯಲ್ಲಿದ್ದ ಸುಮಾರು 73 ಗ್ರಾಂ ಬಂಗಾರದ ಆಭರಣ ಹಾಗೂ ಸುಮಾರು 18 ಸಾವಿರ ನಗದು 4.56 ಲಕ್ಷ ಕಳ್ಳರು ದೋಚಿ ಪರಾರಿಯಾಗಿದ್ದರು, ಘಟನೆ ಕುರಿತು ಕಾಗಿನೆಲೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಹಾವೇರಿ ಜಿಲ್ಲಾ ಎಸ್.ಪಿ.ಅಂಶುಕುಮಾರ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಲಕ್ಷ್ಮಣ ಶಿರಕೋಳ, ಡಿವೈಎಸ್‌ಪಿ ಎಂ. ಎಸ್.ಪಾಟೀಲ ಇವರ ಮಾರ್ಗದರ್ಶನದಲ್ಲಿ ಕಳ್ಳತನ ಪ್ರಕರಣದ ಜಾಡು ಬೆನ್ನು ಹತ್ತಿದ ಸಿಪಿಐ ಮಹಾಂತೇಶ ಲಂಬಿ ಕಾಗಿನೆಲೆ ಪಿಎಸ್‌ಐ ಎಸ್.ಡಿ. ಸಾಗರ ಪೊಲೀಸರ ತಂಡವು ಆರೋಪಿ ನಾಗರಾಜ ಕರಬಸಪ್ಪ ಅಂಗಡಿ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ಅದೇ ಗ್ರಾಮದವನಾಗಿದ್ದು, ಆತನಿಂದ 57 ಗ್ರಾಂ ಚಿನ್ನಾಭರಣ (3.90 ಲಕ್ಷ ಮೊತ್ತ) ವಶಪಡಿಸಿಕೊಂಡಿದ್ದಾರೆ.

ತನಿಖಾ ತಂಡದಲ್ಲಿ ಎ.ಎಸ್.ಐ. ಬಿ.ಎಫ್. ಕಡಕೋಳ ಸಿಬ್ಬಂದಿಗಳಾದ ದೇವರಾಜ್ ದುರ್ಗಣ್ಣನವರ, ಬ್ಯಾಡಗಿ ಪೊಲೀಸ್ ಠಾಣೆ ಸಿಬ್ಬಂದಿ ಅಶೋಕ್ ಪ್ರಭು ಸಿಂದಗಿಮಠ, ಹಾವೇರಿ ಮಹಿಳಾ ಪೊಲೀಸ್ ಠಾಣೆಯ ಎಂ.ಸಿ.ಪಾಟೀಲ್, ಎಂ.ಎಚ್.ಮಕರಬ್ಬಿ, ಜಿಲ್ಲಾ ಕಚೇರಿ ಮಾರುತಿ ಹಾಲಭಾವಿ, ಸತೀಶ್ ಮರಕಟ್ಟಿ ಪಾಲ್ಗೊಂಡಿದ್ದರು. ಪ್ರಕರಣವನ್ನು ಕೇವಲ ಒಂದು ತಿಂಗಳ ಅವಧಿಯಲ್ಲಿ ಬೇಧಿಸಿದ ಬ್ಯಾಡಗಿ ಹಾಗೂ ಕಾಗಿನೆಲೆ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.