ಪೊಲೀಸ್‌ ಅಂದ್ರೆ ಭಯವಲ್ಲ, ಭರವಸೆ: ಎಸ್ಪಿ ಅಮರನಾಥ ರೆಡ್ಡಿ

| Published : Feb 13 2024, 12:48 AM IST

ಸಾರಾಂಶ

ಲೋಕಾಪುರ: ಪೊಲೀಸ್‌ ಅಂದರೆ ಭಯವಲ್ಲ, ಅದೊಂದು ಭರವಸೆ. ಪೊಲೀಸ್‌ ಠಾಣೆಗಳು ಇರುವುದು ಹೇದರಿಸುವುದಕ್ಕಲ್ಲ. ಸಾರ್ವಜನಿಕರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಲು ಹಾಗೂ ಸಾರ್ವಜನಿಕರ ಸೇವೆಗಾಗಿ ಈ ಇಲಾಖೆ ಇರುವುದೆಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಹೇಳಿದರು. ಸಮೀಪದ ವರ್ಚಗಲ್ಲ ಗ್ರಾಮದಲ್ಲಿ ಹಮ್ಮಿಕೊಂಡ ಪೊಲೀಸರು ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಕಾರ್ಯಕ್ರಮದ ಉದ್ದೇಶ ಗ್ರಾಮಗಳಿಗೆ ಹೋಗಿ ಅವರಿರುವ ಸ್ಥಳಗಳಲ್ಲಿ ಅವರ ಜೋತೆ ಚರ್ಚಿಸಿ ಅವರ ಸಮಸ್ಯೆ ಪೊಲೀಸ್ ಇಲಾಖೆಯಿಂದ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವುದಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಲೋಕಾಪುರ

ಪೊಲೀಸ್‌ ಅಂದರೆ ಭಯವಲ್ಲ, ಅದೊಂದು ಭರವಸೆ. ಪೊಲೀಸ್‌ ಠಾಣೆಗಳು ಇರುವುದು ಹೇದರಿಸುವುದಕ್ಕಲ್ಲ. ಸಾರ್ವಜನಿಕರ ಸಮಸ್ಯೆಗಳಿಗೆ ತುರ್ತಾಗಿ ಸ್ಪಂದಿಸಲು ಹಾಗೂ ಸಾರ್ವಜನಿಕರ ಸೇವೆಗಾಗಿ ಈ ಇಲಾಖೆ ಇರುವುದೆಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಹೇಳಿದರು.

ಸಮೀಪದ ವರ್ಚಗಲ್ಲ ಗ್ರಾಮದಲ್ಲಿ ಹಮ್ಮಿಕೊಂಡ ಪೊಲೀಸರು ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಕಾರ್ಯಕ್ರಮದ ಉದ್ದೇಶ ಗ್ರಾಮಗಳಿಗೆ ಹೋಗಿ ಅವರಿರುವ ಸ್ಥಳಗಳಲ್ಲಿ ಅವರ ಜೋತೆ ಚರ್ಚಿಸಿ ಅವರ ಸಮಸ್ಯೆ ಪೊಲೀಸ್ ಇಲಾಖೆಯಿಂದ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವುದಾಗಿದೆ, ಸಾರ್ವಜನಿಕರು ಸಮಸ್ಯೆಗಳಿದ್ದಾಗ ಠಾಣೆಗಳಿಗೆ ಬಂದು ದೂರು ನೀಡಿದಾಗ ದೂರನ್ನು ಸ್ವೀಕರಿಸಿಕೊಂಡು ಅದನ್ನು ಪರಿಹರಿಸಲು ಸಮಯ ತೆಗೆದುಕೊಳ್ಳುತ್ತದೆ, ನೇರವಾಗಿ ಹಳ್ಳಿಗಳಿಗೆ ಹೋದರೆ ಅಲ್ಲಿಯ ಸಮಸ್ಯೆ ತಿಳಿದು ಸ್ಥಳದಲ್ಲಿಯೇ ಪರಿಹಾರ ಕೊಡಿಸಲು ಸಾಧ್ಯವಾಗುತ್ತದೆ ಎಂದರು.

ಜಮಖಂಡಿ ಡಿವೈಎಸ್‌ಪಿ ಶಾಂತವೀರ ಮಾತನಾಡಿ, ರಾಜ್ಯದಲ್ಲಿ ಪೋಲಿಸರ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಮಾತ್ರ ಮೂರು ತಿಂಗಳಿಂದ ಮಾಡುತ್ತಿದ್ದು, ಇದರಿಂದ ಉತ್ತಮ ಫಲಿತಾಶ ಹಾಗೂ ಮೇಲಧಿಕಾರಿಗಳಿಂದ ಮೆಚ್ಚುಗೆ ಬರುತ್ತಿದೆ. ಸಾರ್ವಜನಿಕರಿಗೆ ತುರ್ತು ಸಮಸ್ಯೆಗಳಿದ್ದಾಗ ೧೧೨ಗೆ ಕರೆ ಮಾಡಿದರೆ ತುರ್ತಾಗಿ ತಮ್ಮ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಹೇಳಿದರು.

ಮುಧೋಳ ಸಿಪಿಐ ಆರ್.ಆರ್. ಪಾಟೀಲ, ಪಿಎಸ್‌ಐ ರಾಕೇಶ ಬಗಲಿ, ಗ್ರಾಮದ ಹಿರಿಯರಾದ ಹನುಮಂತ ತುಳಸಿಗೇರಿ, ಶಂಕರಗೌಡ ಪಾಟೀಲ, ವಿಠ್ಠಲ ತುಳಸಿಗೇರಿ, ಭೀಮನಗೌಡ ಪಾಟೀಲ, ವಿಠ್ಠಲ ಪೂಜಾರಿ, ವಿಷ್ಣುಗೌಡ ಪಾಟೀಲ, ಕರಿಯಪ್ಪ ಪೂಜಾರಿ, ರವಿ ಪಾಟೀಲ, ದುರ್ಗಪ್ಪ ಮಾದರ, ಗ್ರಾಮಸ್ಥರು ಹಾಗೂ ಪೋಲಿಸ ಇಲಾಖೆ ಸಿಬ್ಬಂದಿ ಇದ್ದರು. ಕಾರ್ಯಕ್ರಮವನ್ನು ಎಂ.ಬಿ, ಮುದನೂರ ನಿರೂಪಿಸಿದರು.