ಪಡಿತರ ಅಕ್ಕಿ ಅಕ್ರಮ ಪ್ರಕರಣಗಳಲ್ಲಿನ ರೂವಾರಿ ಎಂದೇ ಹೇಳಲಾಗುವ ವ್ಯಕ್ತಿಯೊಬ್ಬಾತನ ಹುಟ್ಟುಹಬ್ಬದ ನಿಮಿತ್ಯ, ಏರ್ಪಡಿಸಲಾಗಿದ್ದ ಸಂಭ್ರಮಾಚರಣೆಯಲ್ಲಿ ಖಾಕಿಪಡೆಯ ಕೆಲವು ಅಧಿಕಾರಿಗಳು ಹಾಡು-ನೃತ್ಯಕ್ಕೆ ಹೆಜ್ಜೆ ಹಾಕಿದ್ದಾರೆನ್ನಲಾದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್‌ ಆಗಿದ್ದು, ಈಗಿದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಸುಮಾರು ತಿಂಗಳ ನಡೆದ ಇಂತಹುದ್ದೊಂದು ಔತಣಕೂಟದ ದೃಶ್ಯಾವಳಿ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳ ಕಚೇರಿಗೆ ತಲುಪಿದ್ದು, ವಿವರಣೆ ನೀಡುವಂತೆ ಪತ್ರ ಬರೆದು ಸೂಚಿಸಿದ್ದಾರೆ ಎಂದು "ಕನ್ನಡಪ್ರಭ "ಕ್ಕೆ ಪೊಲೀಸ್‌ ಮೂಲಗಳು ತಿಳಿಸಿವೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ಪಡಿತರ ಅಕ್ಕಿ ಅಕ್ರಮ ದಂಧೆಯಲ್ಲಿ ತೊಡಗಿದ್ದಾನೆನ್ನಲಾದ ಚಾಮನಾಳದ ಮಲ್ಲಿಕ್‌ ಎಂಬಾತನ ಹುಟ್ಟುಹಬ್ಬಕ್ಕೆ ಕೆಲವು ಪೊಲೀಸ್‌ ಅಧಿಕಾರಿಗಳ ಗುಂಪು ತಡರಾತ್ರಿವರೆಗೆ ನಡೆಸಿದ ಸಂತೋಷಕೂಟದ ಈ ವೀಡಿಯೋ ಖಾಕಿಪಡೆಯ ಕಾರ್ಯವೈಖರಿ ಪ್ರಶ್ನಿಸಿದಂತಾಗಿದೆ. ಡಿವೈಎಸ್ಪಿ ಇನಾಂದಾರ್‌ ಹಾಗೂ ಇನ್ಸಪೆಕ್ಟರ್‌ ಉಮೇಶ ಸೇರಿದಂತೆ ಹಲವರ ಉಪಸ್ಥಿತಿ ಖಾಕಿಪಡೆಯ ಕಾರ್ಯವೈಖರಿಗೆ ಓರೆ ಹಚ್ಚಿದಂತಾಗಿದೆ.ಅಕ್ರಮದ ದೂರುಗಳು ಕೇಳಿಬಂದಾಗ ಇಂತಹವರ ವಿರುದ್ಧ ಪೊಲೀಸರು ದೂರು ದಾಖಲಿಸುತ್ತಾರೆಯೇ ? ಪ್ರಾಮಾಣಿಕ ತನಿಖೆ ನಡೆಸುತ್ತಾರೆಯೇ ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಉದ್ಭವಿಸಿದೆ.

ಈ ಹಿಂದೆ, ಕೆಲವು ಪ್ರಕರಣಗಳಲ್ಲಿ ಈತನ ರಕ್ಷಣೆಗೆ ಸುರಪುರದ ಡಿವೈಎಸ್ಪಿ ಜಾವೀದ್ ಇನಾಂದಾರ್‌ ಮುಂದಾಗಿದ್ದರು ಎಂಬುದಾಗಿ ದೂರಲಾಗಿತ್ತು. ಹಾಗಂತ, ಇಂತಹ ಔತಣಕೂಟಗಳು, ಹುಟ್ಟುಹಬ್ಬದ ಸನ್ಮಾನಗಳು ಖಾಕಿಪಡೆಗೆ ಹೊಸದೇನಲ್ಲ. ಖಾಕಿಪಡೆಯ ಗುಂಪೊಂದು ನಡು ಬಗ್ಗಿಸಿ ಸಲಾಮು ಹೊಡೆಯುತ್ತದೆ. ಆಯಕಟ್ಟಿನ ಸ್ಥಳಗಳಲ್ಲಿ ವರ್ಗಾವಣೆಗೆ ಮಾಲೀಕನ ಕೃಪೆಗಾಗಿ ಕಾಯುತ್ತಿರುತ್ತಾರೆ. ಕೆಲವು ಅಧಿಕಾರಿಗಳ ಅಕ್ರಮ ಆಸ್ತಿ ಮಲ್ಲಿಕ್‌ ಹಾಗೂ ಸಂಬಂಧಿಕರ ಹೆಸರಲ್ಲಿ ಇವೆ ಎಂಬ ಮಾತುಗಳು ಇಲ್ಲಿ ಸರ್ವೇ ಸಾಮಾನ್ಯ. ಚುನಾವಣೆಗಳಲ್ಲಿ ದೇಣಿಗೆ ಬರುವ ಕಾರಣಕ್ಕೆ ರಾಜಕೀಯ ಪ್ರಭಾವಿಗಳ ಶ್ರೀರಕ್ಷೆಯೂ ಇದೆಯಂತೆ.

ಯಾದಗಿರಿ ಜಿಲ್ಲೆಯಲ್ಲಿ ಅನ್ನಭಾಗ್ಯ ಅಕ್ಕಿ ಅಕ್ರಮ ಪ್ರಕರಣಗಳು ಕಳೆದ ಕೆಲವು ವರ್ಷಗಳಿಂದ ಎಗ್ಗಿಲ್ಲದೆ ನಡೆಯುತ್ತಿವೆ. ಗುರುಮಠಕಲ್‌, ಶಹಾಪುರ ಹಾಗೂ ಕೆಂಭಾವಿ ಸೇರಿದಂತೆ ಅನೇಕ ಕಡೆಗಳಲ್ಲಿ ಈ ಕುರಿತು ಇತ್ತೀಚಿನ ಐದು ವರ್ಷಗಳಲ್ಲಿ ಅನೇಕ ಪ್ರಕರಣಗಳೂ ದಾಖಲಾಗಿವೆ. ಇಲ್ಲಿನ ಪಡಿತರ ಅಕ್ಕಿ ಪಾಲಿಶ್‌ ಆಗಿ ಫಾರಿನ್‌ಗೆ ಮಾರಾಟವಾಗುತ್ತದೆ. ಈ ಕುರಿತು "ಕನ್ನಡಪ್ರಭ "ದ ಸರಣಿ ವರದಿಗಳು ಈ ದಂಧೆಯ ಕರಾಳಮುಖ ಬಯಲಾಗಿಸಿದ್ದವು.

ಅಕ್ಕಿ ಅಕ್ರಮಗಳಲ್ಲಿ ಕೇಳಿಬರುವ ವ್ಯಕ್ತಿ ಜತೆ ಪೊಲೀಸರೇ ಡ್ಯಾನ್ಸ್ ಪಾರ್ಟಿ ಮಾಡಿರುವುದು ನೋಡಿದರೆ ಇದು ಬೇಲಿಯೇ ಎದ್ದು ಹೊಲ ಮೇಯ್ದಂತೆ. ಅಕ್ರಮ ಕಂಡುಬಂದಾಗ ಇಂತಹವರ ವಿರುದ್ಧ ಪೊಲೀಸರು ದೂರು ದಾಖಲಿಸುತ್ತಾರೆಯೇ ? ಎಂದು ಕರವೇ ಜಿಲ್ಲಾಧ್ಯಕ್ಷ ಭೀಮುನಾಯಕ್‌