ಶಿಗ್ಗಾಂವಿ: ವೀರ ಯೋಧ ಪೊಲೀಸರ ಸ್ಮರಣೆ ಮುಖ್ಯವಾಗಿದ್ದು, ಅವರ ದೇಶಾಭಿಮಾನ, ಧೈರ್ಯ, ಸಾಹಸ ಹಾಗೂ ಕಾಯಕ ನಿಷ್ಠೆ ಶ್ರೇಷ್ಠವಾದುದು ಎಂದು ಗಂಗೆಭಾವಿ ಕೆಎಸ್ಆರ್ಪಿ 10ನೇ ಪಡೆ ಕಮಾಂಡಂಟ್ ಎನ್.ಬಿ. ಮೆಳ್ಳಾಗಟ್ಟಿ ಹೇಳಿದರು.
ತಾಲೂಕಿನ ಗಂಗೆಭಾವಿ ಕೆಎಸ್ಆರ್ಪಿ 10ನೇ ಪಡೆ ಆವರಣದಲ್ಲಿ ನಡೆದ ಪೊಲೀಸ್ ಹುತಾತ್ಮರ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತ್ಯಾಗ ಮತ್ತು ಸೇವಾ ಮನೋಭಾವನೆ ಹೊಂದುವ ಮೂಲಕ ತಾಯಿ ನಾಡಿಗಾಗಿ ತಮ್ಮ ಪ್ರಾಣಬಲಿದಾನ ಮಾಡುವುದು ಶ್ರೇಷ್ಠವಾಗಿದೆ. ಅಂಥವರು ಹುತಾತ್ಮರಾಗುತ್ತಾರೆ. ನಾಡಿನ ಜನರ ಮನದಲ್ಲಿ ಶಾಶ್ವತ ನೆಲೆ ಕಾಣುತ್ತಾರೆ. ಅವರ ಸ್ಮರಣೆ ಮಾಡುವುದು ಅರ್ಥಪೂರ್ಣವಾಗಿದೆ ಎಂದರು.ಕೆಎಸ್ಆರ್ಪಿ ಪಡೆಯ ಪೊಲೀಸರು ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರ ಸೇವೆ ನಿಜಕ್ಕೂ ಶ್ಲಾಘನೀಯ. ಗಲಭೆ, ವ್ಯಾಜ್ಯ ಹಾಗೂ ಗಲಾಟೆಗಳನ್ನು ತಡೆಯುವ ಮೂಲಕ ಸಮಾಜದ ಸುವ್ಯವಸ್ಥೆಗೆ ಸಂರಕ್ಷಣಾ ಕಾರ್ಯದಲ್ಲಿ ನಿರತರಾಗುತ್ತಿದ್ದಾರೆ. ಲಡಾಖನ್ ಹಾಟ್ ಸ್ಪಿಂಗ್ಸ್ನಲ್ಲಿ ಚೀನಾ ಸೈನಿಕರು ದಿಢೀರ್ ಭಾರತೀಯ ಸೈನಿಕರ ಮೇಲೆ ದಾಳಿ ಮಾಡಿ ಮೋಸ ಮಾಡುತ್ತಾರೆ. ಅಂತಹ ಸಂದರ್ಭದಲ್ಲಿ ಹುತಾತ್ಮರಾದವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಡೆಪ್ಯೂಟಿ ಕಮಾಂಡಂಟ್ ಮಂಜಪ್ಪ ಕೋಟಿಹಾಳ ಮಾತನಾಡಿದರು. ಸಹಾಯಕ ಕಮಾಂಡಂಟ್ಗಳಾದ ದಾವಲಸಾಬ ಯಲಿಗಾರ, ಸುಲೇಮಾನ ಹಂಚಿಮನಿ, ಪೊಲೀಸ್ ಅಧಿಕಾರಿಗಳಾದ ಸಂತೋಷ ವಸ್ತ್ರದ, ಹನುಮೇಶ ಜಿ., ರಾಜೇಂದ್ರ ಶಿರಗುಪ್ಪಿ ಇದ್ದರು.