ಮಹಿಳೆಯರು, ಮಕ್ಕಳು ಹಾಗೂ ಕಾರ್ಮಿಕರ ಸುರಕ್ಷತೆ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ‘ಅಕ್ಕಪಡೆ’ ಸಿಬ್ಬಂದಿಗಳು ವಿವಿಧ ಗ್ರಾಮಗಳಲ್ಲಿ ವ್ಯಾಪಕ ಜಾಗೃತಿ ಅಭಿಯಾನ ಹಾಗೂ ಪರಿಶೀಲನೆ ನಡೆಸಿದರು. ಅಕ್ಕಪಡೆ ತಂಡವು ಕಾಟಕೇರಿ, ಹೇರವನಾಡು, ಬೆಟ್ಟಗೇರಿ, ಐವತ್ತೋಕ್ಲು ಕಾಲೋನಿ, ಬೆಂಗೂರು ನಿಸರ್ಗ ಕಾಲೋನಿ ಹಾಗೂ ಚೇರಂಬಾಣೆ ವಾರದ ಸಂತೆಯ ಸ್ಥಳಗಳಿಗೆ ತೆರಳಿ, ಅಲ್ಲಿನ ತೋಟದ ಲೈನ್ ಮನೆಗಳಿಗೆ ಭೇಟಿ ನೀಡಿತು. ಈ ಸಂದರ್ಭದಲ್ಲಿ ಲೈನ ಮನೆಗಳಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬರು ತಮ್ಮ ಗುರುತಿನ ದಾಖಲಾತಿಗಳನ್ನು ವ್ಯಾಪ್ತಿಯ ಪೊಲೀಸ್ ಠಾಣೆಗೆ ಕಡ್ಡಾಯವಾಗಿ ಸಲ್ಲಿಸುವಂತೆ ಸೂಚಿಸಲಾಯಿತು.
ನಾಪೋಕ್ಲು ; ಮಹಿಳೆಯರು, ಮಕ್ಕಳು ಹಾಗೂ ಕಾರ್ಮಿಕರ ಸುರಕ್ಷತೆ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ‘ಅಕ್ಕಪಡೆ’ ಸಿಬ್ಬಂದಿಗಳು ವಿವಿಧ ಗ್ರಾಮಗಳಲ್ಲಿ ವ್ಯಾಪಕ ಜಾಗೃತಿ ಅಭಿಯಾನ ಹಾಗೂ ಪರಿಶೀಲನೆ ನಡೆಸಿದರು. ಅಕ್ಕಪಡೆ ತಂಡವು ಕಾಟಕೇರಿ, ಹೇರವನಾಡು, ಬೆಟ್ಟಗೇರಿ, ಐವತ್ತೋಕ್ಲು ಕಾಲೋನಿ, ಬೆಂಗೂರು ನಿಸರ್ಗ ಕಾಲೋನಿ ಹಾಗೂ ಚೇರಂಬಾಣೆ ವಾರದ ಸಂತೆಯ ಸ್ಥಳಗಳಿಗೆ ತೆರಳಿ, ಅಲ್ಲಿನ ತೋಟದ ಲೈನ್ ಮನೆಗಳಿಗೆ ಭೇಟಿ ನೀಡಿತು. ಈ ಸಂದರ್ಭದಲ್ಲಿ ಲೈನ ಮನೆಗಳಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬರು ತಮ್ಮ ಗುರುತಿನ ದಾಖಲಾತಿಗಳನ್ನು ವ್ಯಾಪ್ತಿಯ ಪೊಲೀಸ್ ಠಾಣೆಗೆ ಕಡ್ಡಾಯವಾಗಿ ಸಲ್ಲಿಸುವಂತೆ ಸೂಚಿಸಲಾಯಿತು.
ಸೈಬರ್ ಅಪರಾಧ ತಡೆಗೆ ಎಚ್ಚರಿಕೆ: ರೇಷನ್ ಕಾರ್ಡ್ e-KYC ಮಾಡುವ ಸಂದರ್ಭದಲ್ಲಿ ಅಪರಿಚಿತರಿಗೆ ಹಾಗೂ ಯಾರೊಂದಿಗೂತಮ್ಮ UPI, PIN, ಮತ್ತು OTP ವಿವರಗಳನ್ನು ಹಂಚಿಕೊಳ್ಳದಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು. ಸೈಬರ್ ವಂಚನೆಗೊಳಗಾಗದಂತೆ ಎಚ್ಚರಿಕೆಯಿಂದಿರಲು ಮನವಿ ಮಾಡಲಾಯಿತು.ಶಿಕ್ಷಣ ಹಾಗೂ ಬಾಲ್ಯವಿವಾಹ ತಡೆ: ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡುವುದು, ಬಾಲ್ಯವಿವಾಹ ನಿಷೇಧ ಹಾಗೂ ಪೋಕ್ಸೋ ಕಾಯ್ದೆಯ ಕುರಿತು ವಿವರಣೆ ನೀಡಲಾಯಿತು.
ಸಾಮಾಜಿಕ ಜಾಗೃತಿ: ಮಾದಕ ವ್ಯಸನಗಳ ದುಷ್ಪರಿಣಾಮ ಹಾಗೂ ದುರ್ಬಳಕೆ, ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಲೈಂಗಿಕ ಕಿರುಕುಳ ತಡೆ ಕಾಯ್ದೆಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.ಸಂಚಾರ ಹಾಗೂ ಸೋಷಿಯಲ್ ಮೀಡಿಯಾ: ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡುವುದು ಕಾನೂನುಬಾಹಿರ ಎಂದ ತಿಳಿಸಿದ ಸಿಬ್ಬಂದಿ, ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ಮತ್ತು ಅದರಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದರು.ಅಲ್ಲದೆ, ತುರ್ತು ಸಂದರ್ಭಗಳಲ್ಲಿ ನೆರವಾಗುವ 112 (ತುರ್ತು ನೆರವು), 181 (ಮಹಿಳಾ ಸಹಾಯವಾಣಿ), 1098 (ಮಕ್ಕಳ ಸಹಾಯವಾಣಿ), 1930 (ಸೈಬರ್ ಕ್ರೈಮ್ ಸಹಾಯವಾಣಿ) ಹಾಗೂ ಅಕ್ಕಪಡೆಯ ಸೇವೆಗಳ ಕುರಿತು ಮಾಹಿತಿ ನೀಡಲಾಯಿತು. ಅಕ್ಕಪಡೆ ಸಿಬ್ಬಂದಿ ಗೃಹ ರಕ್ಷಕ ದಳದ ಆಶಾ ಮತ್ತು ಚಾಂದನಿ ಪಾಲ್ಗೊಂಡಿದ್ದರು.