ಸಾರಾಂಶ
ಬೆಳಕಿನ ಹಬ್ಬದ ವೇಳೆ ಅನಧಿಕೃತವಾಗಿ ಅಂಗಡಿ ತೆರೆದು ಪಟಾಕಿ ಮಾರಾಟಕ್ಕಿಳಿದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಳಕಿನ ಹಬ್ಬದ ವೇಳೆ ಅನಧಿಕೃತವಾಗಿ ಅಂಗಡಿ ತೆರೆದು ಪಟಾಕಿ ಮಾರಾಟಕ್ಕಿಳಿದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ನಗರದ ಎಲ್ಲ ಠಾಣೆಗಳ ವ್ಯಾಪ್ತಿ ಗುರುವಾರ ಬೆಳಗ್ಗೆಯಿಂದ ಶುಕ್ರವಾರ ಸಂಜೆವರೆಗೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ, ಅಕ್ರಮ ಪಟಾಕಿಗಳ ಮೇಲೆ ಸುಮಾರು 56 ಪ್ರಕರಣಗಳನ್ನು ದಾಖಲಿಸಿದ್ದಾರೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಮಾರಾಟಕ್ಕೆ ಪರವಾನಿಗೆ ಪಡೆಯುವಂತೆ ಪೊಲೀಸರು ಮನವಿ ಮಾಡಿದ್ದರು. ಅಲ್ಲದೆ ಇದಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿ ಬಳಿಕ ಪರವಾನಿಗೆಗಳನ್ನು ಪೊಲೀಸರು ವಿತರಿಸಿದ್ದರು. ಹೀಗಿದ್ದರೂ ಕೆಲವರು ಅಕ್ರಮವಾಗಿ ಪಟಾಕಿ ಮಾರಾಟಕ್ಕಿಳಿದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.ಯಾವ ವಿಭಾಗದಲ್ಲೆಷ್ಟು ಪ್ರಕರಣ?: ಬೆಂಗಳೂರು ಉತ್ತರ-9, ಬೆಂಗಳೂರು ದಕ್ಷಿಣ-4, ಬೆಂಗಳೂರು ಪೂರ್ವ-6, ಬೆಂಗಳೂರು ಈಶಾನ್ಯ-19, ಬೆಂಗಳೂರು ಆಗ್ನೇಯ ಮತ್ತು ವೈಟ್ ಫೀಲ್ಡ್ ವಿಭಾಗಗಳಲ್ಲಿ ತಲಾ 9 ಸೇರಿ ಒಟ್ಟು 56 ಪ್ರಕರಣಗಳು ದಾಖಲಾಗಿವೆ.