ಪೊಲೀಸರ ಸೇವೆ, ತ್ಯಾಗ, ಬಲಿದಾನ ಸ್ಮರಣೀಯ: ಡಿಸಿ ಫೌಜಿಯಾ
KannadaprabhaNewsNetwork | Published : Oct 22 2023, 01:00 AM IST
ಪೊಲೀಸರ ಸೇವೆ, ತ್ಯಾಗ, ಬಲಿದಾನ ಸ್ಮರಣೀಯ: ಡಿಸಿ ಫೌಜಿಯಾ
ಸಾರಾಂಶ
ಜಿಲ್ಲಾಡಳಿತ ವತಿಯಿಂದ ಪೊಲೀಸ್ ಹುತಾತ್ಮ ದಿನ ಆಚರಣೆ, 3 ಸುತ್ತು ಗುಂಡು ಹಾರಿಸಿ ಗೌರವ ನಮನ
ಕಲಬುರಗಿ: ದೇಶಕ್ಕಾಗಿ ತಮ್ಮ ಪ್ರಾಣ ತೆತ್ತ ಪೊಲೀಸರ ಸೇವೆ, ತ್ಯಾಗ, ಬಲಿದಾನವನ್ನು ನಾವೆಲ್ಲವರು ಸ್ಮರಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಹೇಳಿದರು. ಈಶಾನ್ಯ ವಲಯ ಪೊಲೀಸ್, ಕಲಬುರಗಿ ನಗರ ಮತ್ತು ಜಿಲ್ಲಾ ಪೊಲೀಸ್ ವತಿಯಿಂದ ನಗರದ ಪರೇಡ್ ಮೈದಾನದ ಹುತಾತ್ಮ ಸ್ಮಾರಕದ ಮುಂದೆ ನಡೆದ ಪೊಲೀಸ್ ಹುತಾತ್ಮ ದಿನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಜಿಲ್ಲೆಯಲ್ಲಿ ಹಾಗೂ ನಗರದಲ್ಲಿ ದೊಡ್ಡ ಕಾರ್ಯಕ್ರಮಗಳಿಂದ ಹಿಡಿದು ಸಣ್ಣದೊಂದು ಸಭೆ, ಸಮಾರಂಭಗಳ ಸಂದರ್ಭದಲ್ಲಿ ಪೊಲೀಸರು ನಿರ್ವಹಿಸುವ ಕರ್ತವ್ಯ ನಿಜಕ್ಕೂ ಶ್ಲಾಘನೀಯ, ನಿಮಗೊಂದು ಸಲಾಮ್ ಎಂದು ಪೊಲೀಸರ ಸೇವೆ ಸ್ಮರಿಸಿದರು. ಜಿಲ್ಲಾಧಿಕಾರಿ ಫೌಜಿಯಾ ತರನ್ನೂಮ್, ಐಜಿಪಿ ಅಜಯ ಹಿಲೋರಿ, ಸಿಇಓ ಭವರ್ ಸಿಂಗ್ ಮೀನಾ, ಕಮೀಷನರ್ ಚೇತನ್ ಆರ್, ಎಸ್ಪಿ ಅಡ್ಡೂರು ಶ್ರೀನಿವಾಸುಲು, ಡಿಸಿಪಿ ಕನೀಕಾ ಸಿಕ್ರೇವಾಲ್, ಬಸವರಾಜ ಜಿಳ್ಳೆ, ಸಂತೋಷ ಪಾಟೀಲ್, ಪ್ರಾಣೇಶ, ಪ್ರವೀಣ ಕುಮಾರ್, ಗುರುನಾಥ, ಜೇಮ್ಸ್ ಮಿನೇಜಸ್, ಜೆ.ಎಚ್. ಇನಾಂದಾರ್, ಸಂತೋಷ ಬನಹಟ್ಟಿ, ಉಮೇಶ ಚಿಕ್ಕಮಠ, ಗೋಪಿ, ಭೂತೇಗೌಡ, ವಿ.ಎಂ ಜೋತಿ, ಜಿ.ಎಮ್ ಯಾತನೂರ, ಎಸ್.ಎಲ್ ಉಪಳಾಂಕರ್, ಎಸ್.ಎಲ್ ಮೋಮಿನ್, ಶರಣಬಸಪ್ಪ, ಎನ್.ಎಸ್ ಬೋರಟ್ಟಿ, ಶರಣಬಸಪ್ಪ, ಬಿ. ನಾರಾಯಣ, ಕುಬೇರ ರಹೇಮಾನೆ, ಮಹಾದೇವ ಪಂಚಮುಖಿ, ವಾಜೀದ್ ಪಟೇಲ್, ಉಂದಳಪ್ಪ, ಮಹಾದೇವ ಪಾಟೀಲ್, ಪತ್ಮಾವತಿ, ಅಮರೇಶ, ವಾಜೀದ್ ಉರ್ ರೇಹಮಾನ್, ಚಂದ್ರಕಾಂತ, ಕೆ. ಅನಂತ, ಶಿವಪುತ್ರ, ದೇಶಪಾಂಡೆ, ಶರಬಣ್ಣ, ರಾಜಶೇಖರ ಸೇರಿದಂತೆ ಹಲವರು ಹುತಾತ್ಮರ ಸ್ಮಾರಕಕ್ಕೆ ಹೂಗುಚ್ಛ ಸರ್ಮಪಿಸಿ ಗೌರವ ನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಎಸ್ಪಿ ಅಡ್ಡೂರು ಶ್ರೀನಿವಾಸುಲು ಅವರು 2023ನೇ ಸಾಲಿನಲ್ಲಿ ದೇಶಕ್ಕಾಗಿ ಪ್ರಾಣ ಸಮರ್ಪಿಸಿದ ಒಟ್ಟು 189 ಹುತಾತ್ಮ ಪೊಲೀಸರ ಹೆಸರುಗಳನ್ನು ಗೌರವಪೂರ್ವಕವಾಗಿ ಓದಿದರು. ಇದಕ್ಕೂ ಪೂರ್ವದಲ್ಲಿ ಪೊಲೀಸ್ ವಾದ್ಯವೃಂದದೊಂದಿಗೆ ಪರೇಡ್ ಕಮಾಂಡರ್ ಅರುಣ ಮುರಗುಂಬಿ ಅವರಿಂದ ಗೌರವ ವಂದನೆ, ಹುತಾತ್ಮರ ನೆನಪಿನಲ್ಲಿ 3 ಸುತ್ತು ಗುಂಡು ಹಾರಿಸಲಾಯಿತು. ಪೊಲೀಸ್ ವಾದ್ಯವೃಂದದೊಂದಿಗೆ 3 ಹಂತದಲ್ಲಿ ರಾಷ್ಟ್ರಗೀತೆಯನ್ನು ನುಡಿಸಲಾಯಿತು. ಬಳಿಕ ಇದೇ ಸಂದರ್ಭದಲ್ಲಿ 2 ನಿಮಿಷ ಮೌನವನ್ನು ಆಚರಿಸಲಾಯಿತು.