ಪೊಲೀಸ್ ಸರ್ಪಗಾವಲಿನಲ್ಲಿ ಗುದ್ನೇಶ್ವರ ಜಮೀನು ಸರ್ವೇ

| Published : Aug 19 2025, 01:00 AM IST

ಪೊಲೀಸ್ ಸರ್ಪಗಾವಲಿನಲ್ಲಿ ಗುದ್ನೇಶ್ವರ ಜಮೀನು ಸರ್ವೇ
Share this Article
  • FB
  • TW
  • Linkdin
  • Email

ಸಾರಾಂಶ

ದೇವಸ್ಥಾನದ ಜಾಗದಲ್ಲಿ ತಾಲೂಕಾಡಳಿತ ಸೌಧ ಮತ್ತು ನೂತನ ನ್ಯಾಯಾಲಯ ಮತ್ತು ಬುದ್ಧ, ಬಸವ, ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಈ ಜಾಗವನ್ನು ನಿಗದಿಪಡಿಸಿ ಜಿಲ್ಲಾಧಿಕಾರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಹ ಸಲ್ಲಿಸಿದ್ದರು. ಈ ಜಾಗವನ್ನು ಸರ್ಕಾರಿ ಕಟ್ಟಡಕ್ಕೆ ನೀಡುವುದಿಲ್ಲ ಎಂದು ಗುದ್ನೇಪ್ಪನಮಠ ವಾರ್ಡ್‌ ನಿವಾಸಿಗಳು ನ್ಯಾಯಾಲಯದ ಮೆಟ್ಟಿಲೇರಿ ತಡಯಾಜ್ಞೆ ತಂದಿದ್ದರು.

ಕುಕನೂರು:

ಪಟ್ಟಣದ ಗುದ್ನೇಶ್ವರಮಠದ ದೇವಾಲಯದ ಜಮೀನು ಸರ್ವೇ ಕಾರ್ಯವನ್ನು ಜಿಲ್ಲಾ ಉಪ ವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ ಹಾಗೂ ಪೊಲೀಸ್ ಸರ್ಪಗಾವಲಿನಲ್ಲಿ ಮಾಡಲಾಯಿತು.

ಪೊಲೀಸ್ ಸರ್ಪಗಾವಲಿನೊಂದಿಗೆ ಜಾಗದ ಸರ್ವೇ ನಂ. 78ರ ಸುತ್ತಮುತ್ತಲಿನ ಜಾಗದ ಗಡಿ ಭಾಗವನ್ನು ಸಹಾಯಕ ಉಪವಿಭಾಗಾಧಿಕಾರಿ ಕ್ಯಾ. ಮಹೇಶ ಮಾಲಗಿತ್ತಿ ನೇತೃತ್ವದಲ್ಲಿ ತಹಸೀಲ್ದಾರ್ ಎಚ್. ಪ್ರಾಣೇಶ್ ಜತೆಗೆ ಸರ್ವೇ ಅಧಿಕಾರಿಗಳೊಂದಿಗೆ ಸರ್ವೇ ನಡೆಸಲಾಯಿತು. ಸಿಪಿಐ ಮೌನೇಶ ಮಾಲಿಪಾಟೀಲ್ ಹಾಗೂ ಡಿ.ಆರ್‌. ಪೊಲೀಸ್‌ ಸಿಬ್ಬಂದಿಗಳಿದ್ದರು.

ದೇವಸ್ಥಾನದ ಜಾಗದಲ್ಲಿ ತಾಲೂಕಾಡಳಿತ ಸೌಧ ಮತ್ತು ನೂತನ ನ್ಯಾಯಾಲಯ ಮತ್ತು ಬುದ್ಧ, ಬಸವ, ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಈ ಜಾಗವನ್ನು ನಿಗದಿಪಡಿಸಿ ಜಿಲ್ಲಾಧಿಕಾರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಹ ಸಲ್ಲಿಸಿದ್ದರು. ಈ ಜಾಗವನ್ನು ಸರ್ಕಾರಿ ಕಟ್ಟಡಕ್ಕೆ ನೀಡುವುದಿಲ್ಲ ಎಂದು ಗುದ್ನೇಪ್ಪನಮಠ ವಾರ್ಡ್‌ ನಿವಾಸಿಗಳು ನ್ಯಾಯಾಲಯದ ಮೆಟ್ಟಿಲೇರಿ ತಡಯಾಜ್ಞೆ ತಂದಿದ್ದರು. ಸದ್ಯ ಸರ್ವೇ ನಂ.78ರ ಹೊರತುಪಡಿಸಿದ ಜಾಗವನ್ನು ಅಳೆತೆ ಮಾಡಲಾಗಿದ್ದು, ಈ ಸರ್ವೇ ಕಾರ್ಯ ನಿವಾಸಿಗಳಲ್ಲಿ ಮತ್ತಷ್ಟು ತಿರುವು ನೀಡಿದೆ.

ಸರ್ಕಾರಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಗ್ರಾಮಸ್ಥರು ಮತ್ತು ಸರ್ಕಾರಿ ಅಧಿಕಾರಿಗಳ ನಡುವೆ ಈಗಾಗಲೇ ತಿಕ್ಕಾಟ ನಡೆದು ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ನ್ಯಾಯಾಲಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಡೆಯಾಜ್ಞೆ ನೀಡಿದೆ ಎನ್ನಲಾಗಿದೆ. ಆದರೂ ಕೂಡ ಅಧಿಕಾರಿಗಳು ಮತ್ತೊಮ್ಮೆ ಸರ್ವೇ ಕಾರ್ಯಕ್ಕೆ ಮುಂದಾಗಿದ್ದು ದೇವಸ್ಥಾನದ ಭೂಮಿ ಕೈತಪ್ಪುವ ಭೀತಿಯಲ್ಲಿ ದೇವಸ್ಥಾನ ಸೇವಕರು ಮತ್ತು ಗ್ರಾಮಸ್ಥರು ಆತಂಕಕ್ಕೆ ಒಳಗಾಗುವಂತೆ ಮಾಡಿದೆ.

ಸರ್ವೇ ಕಾರ್ಯ ಕುರಿತು ಪ್ರತಿಕ್ರಿಯಿಸಿದ ಉಪ ವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ, ದೇವಸ್ಥಾನದ ಕೆಲ ಜಮೀನಿಗೆ ಸಂಬಂಧಿಸಿದ ಪ್ರಕರಣಕ್ಕೆ ನ್ಯಾಯಾಲಯ ತಡಯಾಜ್ಞೆ ನೀಡಿದ್ದು ಅದನ್ನು ಪಾಲಿಸುತ್ತೇವೆ. ವಿವಾದಿತ ಜಾಗದಲ್ಲಿ ಸರ್ವೇ ಮಾಡಲ್ಲ. ಸರ್ವೇ ನಂ. 78ರ ಜಮೀನುಗೂ ಸರ್ವೇ ಕಾರ್ಯಕ್ಕೂ ಸಂಬಂಧವಿಲ್ಲ. ನ್ಯಾಯಾಲಯದಲ್ಲಿ ವ್ಯಾಜ್ಯ ಇರುವುದರಿಂದ ಆ ಜಾಗದಲ್ಲಿ ಸರ್ವೇ ಮಾಡಲು ಯಾವುದೇ ರೀತಿಯ ಕಾಮಗಾರಿ ನಡೆಸಲು ನಿರ್ಬಂಧಿಸಲಾಗಿದೆ. ಇದು ಸಾಮಾನ್ಯ ಮಾಹಿತಿ ವೀಕ್ಷಣೆಯಾಗಿದ್ದು ಸರ್ಕಾರಿ ಜಮೀನುಗಳಿಗೆ ಸಂಬಂಧಪಟ್ಟಂತೆ ಗಡಿ ಭಾಗದ ಸರ್ವೇ ಕಾರ್ಯ ನಡೆಸಲಾಗುತ್ತಿದೆ ಎಂದರು.