ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಜನತೆಯ ರಕ್ಷಿಸಲು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಪ್ರಾಣತ್ಯಾಗ ಮಾಡಿ ಹುತ್ಮಾತರಾದ ಪೊಲೀಸರ ಸ್ಮರಣೆಯ ಜೊತೆಗೆ ಅವರನ್ನು ಗೌರವಿಸಿದಾಗ ಮಾತ್ರ ಪೊಲೀಸ್ ಹುತಾತ್ಮರ ದಿನಾಚರಣೆ ಅರ್ಥಪೂರ್ಣವಾಗುತ್ತದೆ ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ಅಭಿಪ್ರಾಯಪಟ್ಟರು.ನಗರದ ಪೊಲೀಸ್ ಕವಾಯಿತು ಮೈದಾನದಲ್ಲಿ ಪೊಲೀಸ್ ಇಲಾಖೆಯಿಂದ ೬೪ನೇ ಪೊಲೀಸ್ ಹುತ್ಮಾತರ ದಿನಾಚರಣೆಯಲ್ಲಿ ಹುತ್ಮಾತ ಪೊಲೀಸರ ಸ್ಮಾರಕದ ಸ್ತಂಭಕ್ಕೆ ಪುಷ್ಪುಗುಚ್ಛವಿಟ್ಟು, ಗೌರವ ಸಮರ್ಪಿಸಿ ಮಾತನಾಡಿದರು.
ಪ್ರಾಣ ಪಣಕ್ಕಿಟ್ಟು ಕರ್ತವ್ಯ ನಿರ್ವಹಣೆಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಣೆ ಸುಲಭವಾದ ಕೆಲಸವಲ್ಲ. ಜವಾಬ್ದಾರಿಯ ಜತೆಗೆ ಕರ್ತವ್ಯ ನಿರ್ವಹಣೆಯಲ್ಲಿ ಕೆಲವೊಮ್ಮೆ ಪ್ರಾಣ ಲೆಕ್ಕಿಸದೆ ಕಾರ್ಯನಿರ್ವಹಿಸಬೇಕಾಗುತ್ತದೆ. ಲಡಾಕ್‌ನ ಹಾಟ್ ಸ್ಪಿಂಗ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ೧೦ ಮಂದಿ ಪೊಲೀಸರ ಮೇಲೆ ಚೀನಾ ಸೈನಿಕರು ದಾಳಿ ಮಾಡಿದ ಹೋರಾಟದಲ್ಲಿ ವೀರ ಮರಣವನ್ನಾಪ್ಪಿದ ಸ್ಮರಣಾರ್ಥವಾಗಿ ಪೊಲೀಸ್ ಹುತ್ಮಾತರ ದಿನಾಚರಣೆ ದೇಶದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.
ಕರ್ತವ್ಯದಲ್ಲಿ ಈವರೆಗೆ ೩೫ ಸಾವಿರ ಮಂದಿ ಪೊಲೀಸರು ಹುತ್ಮಾತ್ಮರಾಗಿದ್ದಾರೆ. ಪ್ರತಿ ದಿನ ಪೊಲೀಸರು ತಮ್ಮ ಕರ್ತವ್ಯದಲ್ಲಿ ಪ್ರಾಣ ಒತ್ತೆಯಿಟ್ಟು ಕೆಲಸ ನಿರ್ವಹಿಸಬೇಕಾಗುತ್ತದೆ, ಅವರ ತ್ಯಾಗ ಬಲಿದಾನ ಆವಿಸ್ಮರಣೀಯ. ಪ್ರತಿ ವರ್ಷ ಅ.೨೧ರಂದು ಪೊಲೀಸ್ ಹುತ್ಮಾತರ ದಿನಾಚರಣೆ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.ಪೊಲೀಸ್ ಕೆಲಸವಲ್ಲ ಅದು ಸೇವೆ
ಪೊಲೀಸರ ಕೆಲಸ ಎನ್ನುದಕ್ಕಿಂತ ಅವರ ಕರ್ತವ್ಯ ಎನ್ನದೆ ಸೇವೆಯೆಂದು ಪರಿಗಣಿಸಲಾಗುವುದು, ದಿನದ ೨೪ ಗಂಟೆಯು ಸಾರ್ವಜನಿಕರ ರಕ್ಷಣೆ ಕಾನೂನು ಸುವ್ಯವಸ್ಥೆ ಕಾಪಾಡಲು ಸದಾ ಸಿದ್ದರಾಗಿರಬೇಕು, ದೇಶದ ಏಕತೆ ಐಕ್ಯತೆಗೆ ಮನೋಭಾವದ ಅವರ ಕರ್ತವ್ಯ ಸ್ಮರಣಿಯ ಹಾಗೂ ಸ್ಫೂರ್ತಿದಾಯಕವಾದದ್ದು. ಪೊಲೀಸರ ಕುಟುಂಬಗಳಿಗೆ ಧೈರ್ಯ ಸ್ಥೆರ್ಯ ತುಂಬಿ ಅವರಿಗೆ ಅಗತ್ಯವಾದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಸಹಕಾರ ನೀಡಬೇಕು ಎಂದರು.ಹಂತ ಹಂತವಾಗಿ ಸೌಲಭ್ಯ ಜಾರಿಈ ಹಿಂದಿನ ಎಸ್.ಪಿ ನಾರಾಯಣ ಆಡಳಿತದ ಸಂದರ್ಭದಲ್ಲಿ ಪೊಲೀಸರಿಗೆ ಅಗತ್ಯ ಕೆಲವು ಸೌಲಭ್ಯಗಳಿಗೆ ಮನವಿ ಮಾಡಿರುವುದನ್ನು ಹಂತಹಂತವಾಗಿ ಒದಗಿಸಲಾಗುತ್ತಿದೆ. ಇದರೊಂದಿಗೆ ಕರ್ತವ್ಯಕ್ಕೆ ಪೂರಕವಾದ ಕೆಲವು ಸೌಲಭ್ಯ ಒದಗಿಸಿದೆ. ಆಧುನಿಕತೆಗೆ ಒತ್ತು ನೀಡುವ ದೆಸೆಯಲ್ಲಿ ಕಡತದ ದಾಖಲಾತಿಗಳನ್ನು ಕಂಪ್ಯೂಟರೀಕರಣ ಮಾಡಿದೆ, ಇಂದಿನ ಕಾರ್ಯಕ್ರಮ ಯಶಸ್ವಿಯಾಗಿ ನಿರ್ವಹಿಸಿದ ಎಲ್ಲಾ ಅಧಿಕಾರಿಗಳಿಗೂ ಸಿಬ್ಬಂದಿಗಳಿಗೂ ಅಭಿನಂದಿಸುವುದಾಗಿ ತಿಳಿಸಿದರು.ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್ ಮಾತನಾಡಿ, ಕಳೆದ ೧೯೫೯ರಲ್ಲಿ ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರ ಮೇಲೆ ಗಡಿಭಾಗದ ಚೀನಾ ಸೈನಿಕರು ಹೆಚ್ಚಿನ ಸಂಖ್ಯೆಯಲ್ಲಿ ದಾಳಿ ಮಾಡಿದಾಗ ವೀರ ಮರಣವನ್ನಪ್ಪಿ ಹುತ್ಮಾತರಾದ ಪೊಲೀಸರ ಗೌರವಾರ್ಥವಾಗಿ ಇಂದು ಪೊಲೀಸ್ ಹುತ್ಮಾತರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಕರ್ತವ್ಯದಲ್ಲಿ ಸಾವನ್ನಾಪ್ಪಿದ ಸ್ಮರಣಾರ್ಥವಾಗಿ ಆಚರಿಸಲಾಗುತ್ತಿದೆ, ಈವರೆಗೆ ರಾಜ್ಯದಲ್ಲಿ ೨೧೩ ಮಂದಿ ಸಾವನ್ನಾಪ್ಪಿದ್ದು, ಪ್ರಸಕ್ತ ಸಾಲಿನಲ್ಲಿ ೫ ಮಂದಿ ಪೊಲೀಸರು ಕರ್ತವ್ಯದಲ್ಲಿ ಸಾವನ್ನಪ್ಪಿದ್ದಾರೆ ಎಂದು ಹುತ್ಮಾತರಾದ ಹೆಸರು ವಾಚಿಸಿದರು.
ಗಣ್ಯರಿಂದ ಮೌನಾಚರಣೆಇದಕ್ಕೂ ಮುನ್ನ ಪೊಲೀಸ್ ಸ್ಮಾರಕ ಸ್ಥಂಭಕ್ಕೆ ಜಿಲ್ಲಾಧಿಕಾರಿ ಅಕ್ರಂಪಾಷ, ಎಡಿಸಿ ಮಂಗಳ, ಎಎಸ್ಪಿ ಜಗದೀಶ್, ರವಿ ಶಂಕರ್, ಡಿವೈಎಸ್ಪಿ ಎಂ.ಎಚ್.ನಾಗ್ತೆ, ನಂದ ಕುಮಾರ್, ಮೀಸಲು ಪೊಲೀಸ್ ಡಿವೈಎಸ್ಪಿ ಮಂಜುನಾಥ್, ನಿವೃತ್ತ ಡಿವೈಎಸ್ಪಿ ವೆಂಕಟಸ್ವಾಮಿ, ಮಹಿಳಾ ಪೊಲೀಸ್ ಅಧಿಕಾರಿಗಳಾದ ವರಲಕ್ಷ್ಮೀ, ಮಂಜುಳ, ಸರಸ್ವತಿ, ವಾರ್ತಾ ಇಲಾಖೆ ಅಧಿಕಾರಿ ಮಂಜೇಶ್, ಹಾಲು ಒಕ್ಕೂಟ ನಿರ್ದೇಶಕ ಹನೀಫ್ ಪುಷ್ಪಗುಚ್ಛಸಲ್ಲಿಸಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಹುತ್ಮತರಾದ ಪೊಲೀಸರಿಗೆ ೨ ನಿಮಿಷ ಮೌನಾಚರಣೆ ಮೂಲಕ ಶಾಂತಿ ಕೋರಿದರು.