ಪೊಲೀಸರ ಸೇವೆ ಶ್ಲಾಘನೀಯ: ನ್ಯಾ. ರೇಖಾ

| Published : Oct 22 2024, 12:16 AM IST / Updated: Oct 22 2024, 12:17 AM IST

ಸಾರಾಂಶ

Police service commendable: Ny. Rekha

-ಪೊಲೀಸ್ ಹುತ್ಮಾತರ ದಿನಾಚರಣೆ ಕಾರ್ಯಕ್ರಮ । ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ ಪೊಲೀಸ್ ಹುತ್ಮಾತರ ವೇದಿಕೆಗೆ ನಮನ

-------

ಕನ್ನಡಪ್ರಭ ವಾರ್ತೆ ಯಾದಗಿರಿ

ಸೈನಿಕರು ದೇಶದ ಗಡಿ ಕಾಯ್ದರೆ, ಪೊಲೀಸರು ದೇಶದೊಳಗಿನ ಜೀವ, ಆಸ್ತಿ-ಪಾಸ್ತಿ ಕಾಯುವ ಮೂಲಕ ಅಮ್ಯೂಲ ಕಾಯಕ ಮಾಡುತ್ತಿದ್ದಾರೆ ಎಂದು ಜಿಲ್ಲಾ ನ್ಯಾಯಾಧೀಶರಾದ ಬಿ.ಎಸ್. ರೇಖಾ ಹೇಳಿದರು.

ನಗರದ ಪೊಲೀಸ್ ಅಧಿಕ್ಷಕರ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಪೊಲೀಸ್ ಹುತ್ಮಾತರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಜಗತ್ತಿನ ಬೇರೆ, ಬೇರೆ ದೇಶಗಳ ಪೊಲೀಸರ ಕರ್ತವ್ಯಕ್ಕಿಂತ, ನಮ್ಮ ದೇಶದ ಪೊಲೀಸರ ಕೆಲಸ ಗಮರ್ನಾಹವಾಗಿದೆ ಎಂದರು.

ನಮ್ಮ ರಾಜ್ಯದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ಸಾರ್ವಜನಿಕರೊಂದಿಗೆ ಉತ್ತಮ ಸಂಬಂಧ ಹೊಂದುವ ಮೂಲಕ ಜನಸ್ನೇಹಿಯಾಗಿದ್ದಾರೆ. ಜೀವದ ಹಂಗು ತೊರೆದು ರಕ್ಷಣೆ ನೀಡುವ ಸಮಯದಲ್ಲಿ ಅನೇಕರು ಜೀವ ಕಳೆದುಕೊಳ್ಳುತ್ತಾರೆ. ಪೊಲೀಸರಿಗೆ ಹಬ್ಬ ಹರಿದಿನಗಳು ಅಂತ ಕುಟುಂಬದವರೊಂದಿಗೆ ಆಚರಿಸಲು ಅವಕಾಶವೇ ಇಲ್ಲ. ಜನರಿಗೆ ಸಂಭ್ರಮಿಸಲು ಅವಕಾಶ ನೀಡಿ, ಅವರು ರಕ್ಷಣೆಯಲ್ಲಿ ಇರುತ್ತಾರೆ. ಇದಕ್ಕಾಗಿ ಅವರೊಂದಿಗೊಂದು ಗೌರವದ ನಮಸ್ಕಾರ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ ಪ್ರಾಸ್ತಾವಿಕವಾಗಿ ಮಾತನಾಡಿ, ಪೊಲೀಸ್ ಹುತ್ಮಾತರ ದಿನದ ಮಹತ್ವ ವಿವರಿಸಿ, ಕಳೆದ ಒಂದು ವರ್ಷದಲ್ಲಿ ದೇಶದಲ್ಲಿ 216 ಪೊಲೀಸರು ಕರ್ತವ್ಯದ ವೇಳೆ ಜೀವ ಕಳೆದುಕೊಂಡಿದ್ದಾರೆ ಎಂದರು.

ಜಿಲ್ಲಾಧಿಕಾರಿ ಡಾ. ಸುಶೀಲಾ ಬಿ., ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಒರಡಿಯಾ, ಹೆಚ್ಚುವರಿ ಎಸ್.ಪಿ. ಧರಣೇಶ ಅತಿಥಿಗಳಾಗಿ ಭಾಗವಹಿಸಿದ್ದರು.

ಡಿಎಸ್ಪಿಗಳಾದ ಜಾವಿದ್ ಇನಾಮದಾರ, ಅರುಣಕುಮಾರ, ಭರತ, ಸಿಪಿಐ ಸುನೀಲ ಮೂಲಿಮನಿ ಸೇರಿದಂತೆ ವಿವಿಧ ಠಾಣೆಗಳ ಪೊಲೀಸ್ ಅಧಿಕಾರಿಗಳು ಇದ್ದರು. ನಿವೃತ್ತ ಪೊಲೀಸ್ ಅಧಿಕಾರಿ, ಸಿಬ್ಬಂದಿ, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಪೊಲೀಸ್ ಹುತ್ಮಾತರ ವೇದಿಕೆಗೆ ಹೂಗುಚ್ಛ ಮತ್ತು ಹೂ ಹಾಕಿ ನಮನ ಸಲ್ಲಿಸಿದರು. ಮೂರು ಸುತ್ತು ಗುಂಡು ಹಾರಿಸಿ, ಪೊಲೀಸ್ ವಂದನೆ ಸಲ್ಲಿಸಲಾಯಿತು.

----

21ವೈಡಿಆರ್2: ಯಾದಗಿರಿ ನಗರದ ಪೊಲೀಸ್ ಅಧೀಕ್ಷಕರ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಪೊಲೀಸ್ ಹುತ್ಮಾತರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯಧೀಶರಾದ ಬಿ.ಎಸ್. ರೇಖಾ ಅವರು ಪೊಲೀಸ್ ಹುತ್ಮಾತರ ವೇದಿಕೆಗೆ ಹೂಗುಚ್ಛ ಮತ್ತು ಹೂ ಹಾಕಿ ನಮನ ಸಲ್ಲಿಸಿದರು.

-----

21ವೈಡಿಆರ್3: ಯಾದಗಿರಿ ನಗರದ ಪೊಲೀಸ್ ಅಧಿಕ್ಷಕರ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಪೊಲೀಸ್ ಹುತ್ಮಾತರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ಸುಶೀಲಾ ಅವರು ಪೊಲೀಸ್ ಹುತ್ಮಾತರ ವೇದಿಕೆಗೆ ಹೂಗುಚ್ಛ ಮತ್ತು ಹೂ ಹಾಕಿ ನಮನ ಸಲ್ಲಿಸಿದರು.

-----

21ವೈಡಿಆರ್4: ಯಾದಗಿರಿ ನಗರದ ಪೊಲೀಸ್ ಅಧೀಕ್ಷಕರ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಪೊಲೀಸ್ ಹುತ್ಮಾತರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ ಅವರು ಪೊಲೀಸ್ ಹುತ್ಮಾತರ ವೇದಿಕೆಗೆ ಹೂಗುಚ್ಛ ಮತ್ತು ಹೂವು ಹಾಕಿ ನಮನ ಸಲ್ಲಿಸಿದರು.