ನೋ ಪಾರ್ಕಿಂಗ್‌ನಲ್ಲಿ ಬೈಕ್‌ ನಿಲ್ಲಿಸಿದವರಿಗೆ ಪೊಲೀಸರ ಶಾಕ್‌

| Published : Jun 09 2025, 01:12 AM IST

ನೋ ಪಾರ್ಕಿಂಗ್‌ನಲ್ಲಿ ಬೈಕ್‌ ನಿಲ್ಲಿಸಿದವರಿಗೆ ಪೊಲೀಸರ ಶಾಕ್‌
Share this Article
  • FB
  • TW
  • Linkdin
  • Email

ಸಾರಾಂಶ

ಸಿನಿಮಾ ನೋಡಲು. ಶಾಪಿಂಗ್ ಮಾಡಲು ಬಂದು ಇಲ್ಲಿನ ಮಾಲ್‌ಗಳ ಮುಂದಿನ ರಸ್ತೆಯ ನೋ ಪಾರ್ಕಿಂಗ್‌ ಝೋನ್‌ನಲ್ಲಿ ವಾಹನಗಳನ್ನು ನಿಲ್ಲಿಸಿ ಹೋಗಿದ್ದರು. ತಮ್ಮ ಕೆಲಸ ಮುಗಿಸಿಕೊಂಡು ವಾಪಸ್‌ ಬಂದು ನೋಡಿದಾಗ ಚಕ್ರಗಳು ಲಾಕ್‌ ಆಗಿದ್ದವು. ಕೆಲವರು ಪೊಲೀಸರೊಂದಿಗೆ ವಾಗ್ವಾದ ನಡೆಸಿ ತಮ್ಮ ಬೈಕ್‌ಗಳನ್ನು ಬಿಡಿಸಿಕೊಳ್ಳಲು ನೋಡಿದರೆ, ಕೆಲವರು ನಿಲ್ಲಿಸಿದ ತಪ್ಪಿನ ಅರಿವಾಗಿ ದಂಡ ಕಟ್ಟಿ ಮನೆಯತ್ತ ನಡೆದರು.

ಹುಬ್ಬಳ್ಳಿ: ಇಲ್ಲಿನ ಗೋಕುಲ ರಸ್ತೆಯ ನೋ ಪಾರ್ಕಿಂಗ್‌ ಜೋನ್‌ನಲ್ಲಿ ಬೈಕ್‌ ನಿಲ್ಲಿಸಿದವರಿಗೆ ಭಾನುವಾರ ಟ್ರಾಫಿಕ್‌ ಪೊಲೀಸರು ಶಾಕ್‌ ನೀಡಿದ್ದಾರೆ.

ಭಾನುವಾರ ರಜಾ ಮೂಡ್‌ನಲ್ಲಿ ಎಲ್ಲೆಂದರಲ್ಲಿ ಬೈಕ್‌ಗಳನ್ನು ನಿಲ್ಲಿಸಿ ಹೋಗಿದ್ದರು. ಏಕಾಏಕಿ ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರಿಂದ ಜನ ಕಂಗಾಲಾದರು.

ಸಿನಿಮಾ ನೋಡಲು. ಶಾಪಿಂಗ್ ಮಾಡಲು ಬಂದು ಇಲ್ಲಿನ ಮಾಲ್‌ಗಳ ಮುಂದಿನ ರಸ್ತೆಯ ನೋ ಪಾರ್ಕಿಂಗ್‌ ಝೋನ್‌ನಲ್ಲಿ ವಾಹನಗಳನ್ನು ನಿಲ್ಲಿಸಿ ಹೋಗಿದ್ದರು. ತಮ್ಮ ಕೆಲಸ ಮುಗಿಸಿಕೊಂಡು ವಾಪಸ್‌ ಬಂದು ನೋಡಿದಾಗ ಚಕ್ರಗಳು ಲಾಕ್‌ ಆಗಿದ್ದವು. ಕೆಲವರು ಪೊಲೀಸರೊಂದಿಗೆ ವಾಗ್ವಾದ ನಡೆಸಿ ತಮ್ಮ ಬೈಕ್‌ಗಳನ್ನು ಬಿಡಿಸಿಕೊಳ್ಳಲು ನೋಡಿದರೆ, ಕೆಲವರು ನಿಲ್ಲಿಸಿದ ತಪ್ಪಿನ ಅರಿವಾಗಿ ದಂಡ ಕಟ್ಟಿ ಮನೆಯತ್ತ ನಡೆದರು. ಇನ್ನೂ ಕೆಲವರು ಗೊತ್ತಿಲ್ಲದೆ ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದು, ಮುಂದಿನ ಸಾರಿ ಹೀಗೆ ಮಾಡುವುದಿಲ್ಲ, ಇದೊಂದು ಸಾರಿ ಬೈಕ್‌ ಬಿಟ್ಟುಬಿಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದರು. ಪೊಲೀಸರು ದಂಡ ಕಟ್ಟಿದವರಿಗೆ ಮತ್ತೊಮ್ಮೆ ಹೀಗೆ ಮಾಡದಂತೆ ಹೇಳಿ ಲಾಕ್‌ ತೆಗೆದು ಕೊಡುತ್ತಿದ್ದರು. ಸಂಜೆ ವರೆಗೆ ಪೊಲೀಸರ ಕಾರ್ಯಾಚರಣೆ ಮುಂದುವರಿದಿತ್ತು.