ಪೊಲೀಸರು ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡಿಸಲಿ: ನಿವೃತ್ತ ಪಿಎಸ್ಐ ವೆಂಕಟೇಶಲು

| Published : Apr 03 2024, 01:35 AM IST

ಪೊಲೀಸರು ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡಿಸಲಿ: ನಿವೃತ್ತ ಪಿಎಸ್ಐ ವೆಂಕಟೇಶಲು
Share this Article
  • FB
  • TW
  • Linkdin
  • Email

ಸಾರಾಂಶ

ಜನರು ಪೊಲೀಸರ ಮೇಲೆ ನಂಬಿಕೆ ಇಟ್ಟಿದ್ದಾರೆ. ಹಾಗಾಗಿ, ನಮ್ಮ ಕೆಲಸ ನಾವು ಮಾಡಬೇಕಿದೆ. ಅದರ ಜೊತೆಗೆ ಕುಟುಂಬಕ್ಕೆ ಸಮಯ ನೀಡಬೇಕಿದೆ ಎಂದು ನಿವೃತ್ತ ಪಿಎಸ್ಐ ವೆಂಕಟೇಶಲು ಹೇಳಿದರು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ನಮ್ಮ ಒಂದು ಕಣ್ಣು ನೌಕರಿಯ ಮೇಲೆ ಇಟ್ರೆ, ಮತ್ತೊಂದು ಕಣ್ಣು ಕುಟುಂಬದ ಮೇಲೆ ಇರಬೇಕು. ಮಕ್ಕಳು ನಮ್ಮ ಅವಲಂಬನೆಯಾಗದಂತೆ ನೋಡಿಕೊಳ್ಳುವ ರೀತಿಯಲ್ಲಿ ಉತ್ತಮ ಶಿಕ್ಷಣ ಕೊಡಿಸಬೇಕಿದೆ ಎಂದು ನಿವೃತ್ತ ಪಿಎಸ್ಐ ವೆಂಕಟೇಶಲು ಹೇಳಿದರು.

ವಿಜಯನಗರ ಜಿಲ್ಲಾ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಮಂಗಳವಾರ ಭಾಗವಹಿಸಿ ಮಾತನಾಡಿದರು.ಇಲಾಖೆಯಲ್ಲಿ ನಾವು ಸೇವೆ ಸಲ್ಲಿಸುವುದರ ಜೊತೆಗೆ ಕುಟುಂಬಕ್ಕೂ ಆದ್ಯತೆ ನೀಡಬೇಕಿದೆ. ನಮಗೆ ಒತ್ತಡಗಳಿವೆ, ಅಧಿಕಾರಿಗಳು ಕೂಡ ಒತ್ತಡ ಹೇರುತ್ತಾರೆ ಎಂಬುದು ಇದೆ. ಆದರೆ, ಜನರು ಅಬಕಾರಿ, ಆರ್‌ಟಿಒ ಕೇಸ್ ಗಳಿಗೂ ಪೊಲೀಸರಿಗೆ ಕರೆ ಮಾಡೋದು ಸಹಜ. ಜನರು ಪೊಲೀಸರ ಮೇಲೆ ನಂಬಿಕೆ ಇಟ್ಟಿದ್ದಾರೆ. ಹಾಗಾಗಿ, ನಮ್ಮ ಕೆಲಸ ನಾವು ಮಾಡಬೇಕಿದೆ. ಅದರ ಜೊತೆಗೆ ಕುಟುಂಬಕ್ಕೆ ಸಮಯ ನೀಡಬೇಕಿದೆ ಎಂದರು.

ನಮ್ಮ ವೃತ್ತಿ ಜೀವನದಲ್ಲಿ ಹಲವಾರು ಕ್ರೈಂಗಳು, ಸ್ವಾರಸ್ವಕರ ಘಟನೆಗಳು ಕಂಡಿದ್ದೇವೆ. ನಮ್ಮಲ್ಲಿ ಉತ್ತಮ ಕ್ರೈಂ ತಂಡ ಇದೆ ಎಂದು ಮಂಜುನಾಥ್ ಮೇಟಿ ಸೇರಿದಂತೆ ಇತರೆ ಕ್ರೈಂ ಸಿಬ್ಬಂದಿ ನೆನಪಿಸಿಕೊಂಡರು.

ನಿವೃತ್ತ ಆರ್‌ಎಸ್‌ಐ ತುಕ್ಯಾ ನಾಯ್ಕ, ನಿವೃತ್ತ ಪಿಎಸ್ಐ ಶರಣಪ್ಪ ಮೇಟಿ ಮಾತನಾಡಿದರು.

ಎಸ್ಪಿ ಶ್ರೀಹರಿಬಾಬು ಬಿ.ಎಲ್., ಎಎಸ್ಪಿ ಸಲೀಂ ಪಾಷಾ, ಹೊಸಪೇಟೆ ಡಿವೈಎಸ್ಪಿ ಶರಣಬಸವೇಶ್ವರ, ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ, ಹರಪನಹಳ್ಳಿ ಡಿವೈಎಸ್ಪಿ ವೆಂಕಟಪ್ಪ ನಾಯಕ, ಸಿಪಿಐಗಳಾದ ಲಖನ್ ಮುಸುಗುಪ್ಪಿ, ಶ್ರೀಕಾಂತ್, ಅಶ್ವತ್ಥ ನಾರಾಯಣ, ಗುರುರಾಜ್, ದೀಪಕ್ ಬೂಸರೆಡ್ಡಿ, ಕಿರಣ್ ಸಾಮ್ರಾಟ್, ವಿಕಾಸ್ ಲಮಾಣಿ, ವಿನಾಯಕ್ ಮತ್ತಿತರರಿದ್ದರು.