ಶಾಲಾ ಮಕ್ಕಳಿಗೆ ಪೊಲೀಸ್ ಠಾಣೆ ಪರಿಚಯ.

| Published : Oct 30 2023, 12:30 AM IST

ಸಾರಾಂಶ

ಶಾಲಾ ಮಕ್ಕಳಿಗೆ ಪೊಲೀಸ್ ಠಾಣೆ ಪರಿಚಯ.
ಕಡೂರು: ಜನಸ್ನೇಹಿ ಮನೋಭಾವದವರಾದ ಪೊಲೀಸರಿಗೆ ಸಮಾಜ ರಕ್ಷಿಸುವ ಹೊಣೆಗಾರಿಕೆ ಇದೆ ಎಂದು ಅಫರಾಧ ವಿಭಾಗದ ಪಿಎಸೈ ಕೆ.ಶೋಭಾ ತಿಳಿಸಿದರು. ಕಡೂರಿನ ಪ್ರಜ್ಞಾ ಶಾಲೆ ವಿದ್ಯಾರ್ಥಿಗಳು ಕಡೂರು ಪೊಲೀಸ್ ಠಾಣೆಗೆ ಭೇಟಿ ನೀಡಿ ಇಲಾಖೆ ಕಾರ್ಯವೈಖರಿ ವೀಕ್ಷಿಸಿದ ಬಳಿಕ ಶೋಭಾ ಅವರೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿಗಳು ಕಾನೂನಿನ ಬಗ್ಗೆ ಕನಿಷ್ಟ ಪ್ರಜ್ಞೆ ಬೆಳೆಸಿ ಕೊಳ್ಳಬೇಕು. ವಿಶೇಷವಾಗಿ ಹೆಣ್ಣು ಮಕ್ಕಳು ತಮ್ಮ ಸುರಕ್ಷತೆ ಬಗ್ಗೆ ಎಚ್ಚರ ವಹಿಸಬೇಕು. ಅಗತ್ಯ ಕಂಡು ಬಂದಾಗ ಮಹಿಳಾ ಪೊಲೀಸರ ಸಹಾಯ ಪಡೆಯಬೇಕು. ಮುಕ್ತವಾಗಿ ಠಾಣೆಗೆ ಬಂದು ತಮ್ಮ ಸಮಸ್ಯೆ ಹೇಳಿಕೊಳ್ಳಬಹುದು. ಜೀವನದಲ್ಲಿ‌ ನಿಖರವಾದ ಗುರಿಯಿಟ್ಟುಕೊಂಡು ಮುನ್ನಡೆದು ಸಾಧನೆ ಮಾಡಬೇಕು ಎಂದರು. ಪೊಲೀಸರ ಕಚೇರಿ ದಿನಚರಿ, ಕಾನೂನು ಅನುಷ್ಠಾನಗೊಳಿಸುವ ಕ್ರಮ, ವೈರ್ ಲೆಸ್ ಉಪಕರಣಗಳ ಬಳಕೆ, ಪೊಲೀಸ್ ಬೀಟ್ ವ್ಯವಸ್ಥೆ, ಅಧಿಕಾರಿ ದರ್ಜೆಗಳ ವಿವರ ಮುಂತಾದವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಪೊಲೀಸ್ ಸಿಬ್ಬಂದಿ ಎಚ್.ಆರ್.ಉಮೇಶ್, ನಾರಾಯಣಪ್ಪ, ಪ್ರಜ್ಞಾ ಶಾಲೆ ಮುಖ್ಯ ಶಿಕ್ಷಕಿ ಕ್ಲಾರಾ ಡಿ ಮೆಲ್ಲೋ, ಶಿಕ್ಷಕಿಯರಾದ ಸೌಮ್ಯ, ಶಿಲ್ಪ ಇದ್ದರು. 28ಕೆಕೆಡಿಯು2. ಕಡೂರು ಪೋಲೀಸ್ ಠಾಣೆಗೆ ಪ್ರಜ್ಞಾ ಶಾಲೆಯ ವಿಧ್ಯಾಥಿಗಳು ಭೇಟಿ ನೀಡಿದರು.