ದೂರು ದಾಖಲಾದರೆ ಭವಿಷ್ಯಕ್ಕೆ ಕುತ್ತು: ವಿದ್ಯಾರ್ಥಿಗಳಿಗೆ ಪೊಲೀಸರ ಕಿವಿ ಮಾತು

| Published : Oct 18 2025, 02:02 AM IST

ದೂರು ದಾಖಲಾದರೆ ಭವಿಷ್ಯಕ್ಕೆ ಕುತ್ತು: ವಿದ್ಯಾರ್ಥಿಗಳಿಗೆ ಪೊಲೀಸರ ಕಿವಿ ಮಾತು
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರಿನ ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜು ಬುಧವಾರ ಕಲಾಂ ಸಭಾಂಗಣದಲ್ಲಿ ಎಸ್‌ಜೆಇಸಿ ಎರಡನೇ ವರ್ಷದ ಬಿಇ ವಿದ್ಯಾರ್ಥಿಗಳಿಗಾಗಿ ‘ನಶೆ ವಿರೋಧಿ ಜಾಗೃತಿ ಕಾರ್ಯಕ್ರಮ’ ಆಯೋಜಿಸಿತು.

ಮಂಗಳೂರು: ಮಂಗಳೂರಿನ ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜು (ಎಸ್‌ಜೆಇಸಿ) ಯ ಆಂಟಿ-ಡ್ರಗ್ ಸೆಲ್, ರಸಾಯನಶಾಸ್ತ್ರವಿಭಾಗ ಮತ್ತು ವಿದ್ಯಾರ್ಥಿ ಕಲ್ಯಾಣ ಘಟಕ ಮಂಗಳೂರು ನಗರ ಪೊಲೀಸ್ ಇಲಾಖೆಯ ಸಹಯೋಗದಲ್ಲಿ

ಬುಧವಾರ ಕಲಾಂ ಸಭಾಂಗಣದಲ್ಲಿ ಎಸ್‌ಜೆಇಸಿ ಎರಡನೇ ವರ್ಷದ ಬಿಇ ವಿದ್ಯಾರ್ಥಿಗಳಿಗಾಗಿ ‘ನಶೆ ವಿರೋಧಿ ಜಾಗೃತಿ ಕಾರ್ಯಕ್ರಮ’ವನ್ನು ಆಯೋಜಿಸಿತು.

ಮಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥೆ ಉಪ ಪೊಲೀಸ್ ಆಯುಕ್ತ ಮಿಥುನ್ ಎಚ್.ಎನ್. ಭಾಗವಹಿಸಿದರು. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಅರುಣ್ ಕುಮಾರ್, ಪೊಲೀಸ್ ಕಾನ್ಸ್‌ಟೇಬಲ್ ಪ್ರದೀಪ್,

ವಿದ್ಯಾರ್ಥಿ ಕಲ್ಯಾಣ ಡೀನ್ ಡಾ. ಕೆ. ಜ್ಯೋತಿ ಹಾಗೂ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಪ್ರಮೀಳಾ

ರೀಟಾ ಡಿಸೋಜಾ ಇದ್ದರು.

ಒಮ್ಮೆ ಪೊಲೀಸ್ ದೂರು ನಿಮ್ಮ ಹೆಸರಲ್ಲಿ ದಾಖಲಾದರೆ, ಭವಿಷ್ಯದಲ್ಲಿ ಸರ್ಕಾರಿ ಉದ್ಯೋಗ, ಪಾಸ್‌ಪೋರ್ಟ್ ಅಥವಾ ವೀಸಾ ಪಡೆಯುವುದು ಕಷ್ಟವಾಗಬಹುದು. ಆದ್ದರಿಂದ ವಿದ್ಯಾರ್ಥಿಗಳು ಜವಾಬ್ದಾರಿಯಾಗಿ ವರ್ತಿಸಬೇಕು, ತಮ್ಮ ಡೇಟಾವನ್ನು ರಕ್ಷಿಸಬೇಕು ಹಾಗೂ ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಸಂಪನ್ಮೂಲ ವ್ಯಕ್ತಿಗಳು ಸಲಹೆ ಮಾಡಿದರು.

ಕಾರ್ಯಕ್ರಮದ ಭಾಗವಾಗಿ ಆಯೋಜಿಸಲಾದ ರೀಲ್ ತಯಾರಿ ಸ್ಪರ್ಧೆಯ ವಿಜೇತರಿಗೆ ಬಹುಮಾನ

ವಿತರಣೆ ನಡೆಯಿತು. ಸೌಮ್ಯಾ ಸ್ವಾಗತಿಸಿದರು. ಎಸ್‌ಜೆಇಸಿ ಸಂಯೋಜಕಿ ಶೀತಲ್ ಫರ್ನಾಂಡಿಸ್ ವಂದಿಸಿದರು.