ಸಾರಾಂಶ
ಕಳೆದ ೩೫-೪೦ ವರ್ಷಗಳಿಂದ ಪೋಲಿಯೋ ಲಸಿಕೆಯನ್ನು ಹಾಕಲಾಗುತ್ತಿದೆ. ದೇಶದಲ್ಲಿ ಪೋಲಿಯೋ ನಿರ್ಮೂಲನೆಯತ್ತ ಹೆಜ್ಜೆ ಹಾಕಿದೆ ಎಂದು ಬಸವಾಪಟ್ಟಣ ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅನಿಲ್‌ಕುಮಾರ್ ತಿಳಿಸಿದರು. ಬಸವಾಪಟ್ಟಣದ ಪೋಲಿಯೋ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲಸಿಕಾ ಕಾರ್ಯಕ್ರಮಬಸವಾಪಟ್ಟಣ: ಮಾ.೩ ರಂದು ಪೋಲಿಯೋ ನಿಯಂತ್ರಣಕ್ಕಾಗಿ ಪೋಲಿಯೋ ಲಸಿಕೆ ಹಾಕಲು ರಾಜ್ಯ ಅರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಳೆದ ೩೫-೪೦ ವರ್ಷಗಳಿಂದ ಪೋಲಿಯೋ ಲಸಿಕೆಯನ್ನು ಹಾಕಲಾಗುತ್ತಿದೆ. ದೇಶದಲ್ಲಿ ಪೋಲಿಯೋ ನಿರ್ಮೂಲನೆಯತ್ತ ಹೆಜ್ಜೆ ಹಾಕಿದೆ. ಪೋಲಿಯೋ ಬರುವುದಕ್ಕೆ ಮುನ್ನ ಎಚ್ಚೆತ್ತುಕೊಂಡಲ್ಲಿ ಅದರ ದುಷ್ಟಪರಿಣಾಮಗಳನ್ನು ತಡೆಗಟ್ಟಬಹುದು ಎಂದು ಬಸವಾಪಟ್ಟಣ ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅನಿಲ್‌ಕುಮಾರ್ ತಿಳಿಸಿದರು.
ಗ್ರಾಮದಲ್ಲಿ ನಡೆದ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಮಾತನಾಡಿ, ಪೋಲಿಯೋಗೆ ಒಮ್ಮೆ ತುತ್ತಾದರೆ ಅಂಗವೈಕಲ್ಯತೆ ಜೀವನ ಪೂರ್ತಿ ಬಾಧಿಸುತ್ತದೆ. ಎಲ್ಲಾ ಮಕ್ಕಳಿಗೂ ಒಂದೇ ದಿನ ಲಸಿಕೆ ಹಾಕಿಸುವುದರಿಂದ ವೈಫಲ್ಯದ ನಿರ್ಮೂಲನೆಗೆ ಹೆಚ್ಚು ಸಹಾಯಕವಾಗುತ್ತದೆ. ಅರೋಗ್ಯ ಇಲಾಖೆಗೆ ಸುಮಾರು ೫ ಪ್ರಾಥಮಿಕ ಅರೋಗ್ಯ ಕೇಂದ್ರ ಒಟ್ಟು ೧೬ ಬೂತ್‌ಗಳಲ್ಲಿ ಒಟ್ಟು ೨೦೧೬ ಮಕ್ಕಳನ್ನು ಗುರುತಿಸಲಾಗಿದೆ. ಎಲ್ಲರೂ ಸಹ ೦-೫ ವರ್ಷದ ಒಳಗಿನ ಮಕ್ಕಳನ್ನು ಲಸಿಕೆ ಕೇಂದ್ರಗಳಿಗೆ ಕರೆತಂದು ಲಸಿಕೆ ಹಾಕಿಸಿ ಪೋಲಿಯೋ ಮುಕ್ತ ರಾಜ್ಯ ಮಾಡಲು ಸಹಕರಿಸಬೇಕು ಎಂದು ಮನವಿ ಮಾಡಿದರು.ಅರೋಗ್ಯ ಕೇಂದ್ರದ ಹಿರಿಯ ವೈದ್ಯ ಡಾ.ರಾಜೇಶ್ ಮಾತನಾಡಿ, ಸಮಾಜದ ಎಲ್ಲಾ ೦-೫ ವರ್ಷದ ಒಳಗಿನ ಎಲ್ಲಾ ಮಕ್ಕಳಿಗೂ ಲಸಿಕೆ ಹಾಕಿಸಲು ಅಸಕ್ತಿ ವಹಿಸಬೇಕು. ಇದೊಂದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು ಪೋಲಿಯೋ ಮುಕ್ತ ರಾಜ್ಯ ಸ್ಥಾಪನೆಗೆ ಮುಂದಾಗಿ ಬಲಿಷ್ಠ ಅರೋಗ್ಯ ನಿರ್ಮಾಣದಲ್ಲಿ ಪ್ರತಿಯೊಬ್ಬರೂ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ಬಸವಾಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧ, ಗ್ರಾಪಂ ಉಪಾಧ್ಯಕ್ಷ ಕುಮಾರ್, ಬಿ.ಜೆ. ಗ್ರಾಮ ಅರೋಗ್ಯ ನ್ಯಾಯ ಸಮಿತಿಯ ಸದಸ್ಯರಾದ ಗಣೇಶ, ಎಸ್.ಆರ್ ರಮೇಶ್, ಪ್ರಕಾಶ, ಮಲ್ಲೆಗೌಡ, ಅರೋಗ್ಯ ಕೇಂದ್ರದ ಹಿರಿಯ ಅರೋಗ್ಯ ನಿರೀಕ್ಷಕ ಲೋಕೇಶ್, ಶುಶ್ರೂಷಕಿಯರಾದ ಪದ್ಮ, ಸವಿತಾ, ಲಕ್ಷ್ಮೀ, ಕೃಷ್ಣವೇಣಿ ಸಿಬ್ಬಂದಿ ಇಲಿಯಾಸ್ ಪಾಷ, ವಿಜಯಕುಮಾರ್ ಅಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕರು ಇದ್ದರು.ಮಗುವೊಂದಕ್ಕೆ ಪೋಲಿಯೋ ಹನಿ ಹಾಕುವ ಮೂಲಕ ಬಸವಾಪಟ್ಟಣದಲ್ಲಿ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.