ಶ್ರೀಶೈಲ ಮಠದಕನ್ನಡಪ್ರಭ ವಾರ್ತೆ ಬೆಳಗಾವಿಬೆಳಗಾವಿ ಜಿಲ್ಲಾ ಪಂಚಾಯಿತಿ ಚುನಾವಣೆಯ ರಾಜಕೀಯ ಲೆಕ್ಕಾಚಾರಕ್ಕೆ ಚಾಲನೆ ದೊರೆತಿದೆ. ಬೆಳಗಾವಿ ಜಿಲ್ಲಾ ಪಂಚಾಯಿತಿಯ 90 ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಮೀಸಲಾತಿ ಕರಡು ಅಧಿಸೂಚನೆ ಪ್ರಕಟವಾಗಿದ್ದು, ಹಲವು ಕ್ಷೇತ್ರಗಳ ಆಕಾಂಕ್ಷಿಗಳ ರಾಜಕೀಯ ಭವಿಷ್ಯ ಮೀಸಲಾತಿ ಲೆಕ್ಕಾಚಾರದ ಮೇಲೆ ಅವಲಂಬಿತವಾಗಿದೆ. ಮಹಿಳೆಯರಿಗೆ 45 ಕ್ಷೇತ್ರಗಳು ಮೀಸಲಾಗಿರುವುದು ವಿಶೇಷವಾಗಿದ್ದರೆ, ಹಿಂದುಳಿದ ವರ್ಗ ಅ ಪ್ರವರ್ಗಕ್ಕೆ 22 ಕ್ಷೇತ್ರಗಳನ್ನು ನಿಗದಿಪಡಿಸಿರುವುದು ಗಮನಾರ್ಹ. ವಿಶೇಷವೆಂದರೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಜಿಪಂ ಕ್ಷೇತ್ರಗಳಿರುವುದರಿಂದ ಮುಂಬರುವ ವಿಧಾನಸಭೆಗೂ ಇದು ಮುನ್ನುಡಿಯಾಗಲಿದೆಯೆ ಎಂಬ ಚರ್ಚೆ ಕೂಡ ನಡೆದಿದೆ.
ಶ್ರೀಶೈಲ ಮಠದ
ಕನ್ನಡಪ್ರಭ ವಾರ್ತೆ ಬೆಳಗಾವಿಬೆಳಗಾವಿ ಜಿಲ್ಲಾ ಪಂಚಾಯಿತಿ ಚುನಾವಣೆಯ ರಾಜಕೀಯ ಲೆಕ್ಕಾಚಾರಕ್ಕೆ ಚಾಲನೆ ದೊರೆತಿದೆ. ಬೆಳಗಾವಿ ಜಿಲ್ಲಾ ಪಂಚಾಯಿತಿಯ 90 ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಮೀಸಲಾತಿ ಕರಡು ಅಧಿಸೂಚನೆ ಪ್ರಕಟವಾಗಿದ್ದು, ಹಲವು ಕ್ಷೇತ್ರಗಳ ಆಕಾಂಕ್ಷಿಗಳ ರಾಜಕೀಯ ಭವಿಷ್ಯ ಮೀಸಲಾತಿ ಲೆಕ್ಕಾಚಾರದ ಮೇಲೆ ಅವಲಂಬಿತವಾಗಿದೆ. ಮಹಿಳೆಯರಿಗೆ 45 ಕ್ಷೇತ್ರಗಳು ಮೀಸಲಾಗಿರುವುದು ವಿಶೇಷವಾಗಿದ್ದರೆ, ಹಿಂದುಳಿದ ವರ್ಗ ಅ ಪ್ರವರ್ಗಕ್ಕೆ 22 ಕ್ಷೇತ್ರಗಳನ್ನು ನಿಗದಿಪಡಿಸಿರುವುದು ಗಮನಾರ್ಹ. ವಿಶೇಷವೆಂದರೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಜಿಪಂ ಕ್ಷೇತ್ರಗಳಿರುವುದರಿಂದ ಮುಂಬರುವ ವಿಧಾನಸಭೆಗೂ ಇದು ಮುನ್ನುಡಿಯಾಗಲಿದೆಯೆ ಎಂಬ ಚರ್ಚೆ ಕೂಡ ನಡೆದಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಕ್ಟೋಬರ್ 9ರಂದು ಕರಡು ಅಧಿಸೂಚನೆ ಹೊರಡಿಸಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ನಿಯಮಗಳು, 2023ರ ಅನ್ವಯ ಆವರ್ತನೆ ಆಧಾರದ ಮೇಲೆ ಕ್ಷೇತ್ರಗಳ ಮೀಸಲಾತಿ ನಿಗದಿಪಡಿಸಲಾಗಿದೆ. ಇದು ಕರಡು ಪಟ್ಟಿಯಾಗಿರುವುದರಿಂದ ಆಕ್ಷೇಪಣೆ ಹಾಗೂ ಸಲಹೆಗಳ ಪರಿಶೀಲನೆಯ ನಂತರ ಅಂತಿಮ ಮೀಸಲಾತಿಯಲ್ಲಿ ಬದಲಾವಣೆಗಳಾಗುವ ಸಾಧ್ಯತೆಯೂ ಇದೆ.ಮೀಸಲಾತಿಯ ಅಂಕಿ-ಅಂಶಗಳೇನು?:
ಜಿಲ್ಲೆಯ 90 ಕ್ಷೇತ್ರಗಳನ್ನು ವಿವಿಧ ಪ್ರವರ್ಗಗಳಿಗೆ ಹಂಚಿಕೆ ಮಾಡಲಾಗಿದೆ. ಹಿಂದುಳಿದ ವರ್ಗ ಅ ಗೆ 22, ಪರಿಶಿಷ್ಟ ಜಾತಿಗೆ 11, ಪರಿಶಿಷ್ಟ ಪಂಗಡಕ್ಕೆ 7 ಹಾಗೂ ಹಿಂದುಳಿದ ವರ್ಗ ಬ ಕ್ಕೆ 5 ಕ್ಷೇತ್ರಗಳನ್ನು ನಿಗದಿಪಡಿಸಲಾಗಿದೆ. ಉಳಿದ 45 ಕ್ಷೇತ್ರಗಳು ಸಾಮಾನ್ಯ ವರ್ಗದ ವ್ಯಾಪ್ತಿಯಲ್ಲಿವೆ. ಮಹಿಳಾ ಮೀಸಲಾತಿಯೂ ರಾಜಕೀಯವಾಗಿ ಮಹತ್ವ ಪಡೆದಿದೆ. ಒಟ್ಟು ಕ್ಷೇತ್ರಗಳ ಅರ್ಧದಷ್ಟು ಅಂದರೆ 45 ಕ್ಷೇತ್ರಗಳು ಮಹಿಳೆಯರಿಗೆ ಮೀಸಲಾಗಿವೆ. ಇದರಿಂದ ಹಲವು ಕ್ಷೇತ್ರಗಳಲ್ಲಿ ಪುರುಷ ಆಕಾಂಕ್ಷಿಗಳು ತಮ್ಮ ಕುಟುಂಬದ ಮಹಿಳಾ ಸದಸ್ಯರನ್ನು ಕಣಕ್ಕಿಳಿಸುವ ಅಥವಾ ಹೊಸ ಅಭ್ಯರ್ಥಿಗಳನ್ನು ಹುಡುಕುವ ಅನಿವಾರ್ಯತೆ ಎದುರಾಗಬಹುದು.ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಟಿಕೆಟ್ ಆಕಾಂಕ್ಷಿಗಳ ಚಟುವಟಿಕೆಗಳು ಗರಿಗೆದರಲಿವೆ. ಮೀಸಲಾತಿಗೆ ಅನುಗುಣವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ರಾಜಕೀಯ ಪಕ್ಷಗಳಿಗೆ ಪ್ರಮುಖ ಸವಾಲಾಗಲಿದೆ. ಈಗಾಗಲೇ ಕ್ಷೇತ್ರಗಳಲ್ಲಿ ಜನಸಂಪರ್ಕ ಬೆಳೆಸಿಕೊಂಡಿರುವ ಆಕಾಂಕ್ಷಿಗಳಿಗೆ ಮೀಸಲಾತಿ ಅನುಕೂಲವಾಗದಿದ್ದರೆ, ಬದಲಿ ಅಭ್ಯರ್ಥಿಗಳ ಹುಡುಕಾಟ ಅನಿವಾರ್ಯವಾಗಬಹುದು.
ಆದರೆ, ಕರಡು ಅಧಿಸೂಚನೆ ಪ್ರಕಟವಾಗಿದೆ ಎಂಬ ಕಾರಣಕ್ಕೆ ಈಗಲೇ ಅಂತಿಮ ನಿರ್ಧಾರಕ್ಕೆ ಬರುವುದು ಸೂಕ್ತವಲ್ಲ. ಆಕ್ಷೇಪಣೆ ಸಲ್ಲಿಸಲು ಅವಕಾಶವಿದ್ದು, ಅವುಗಳ ಪರಿಶೀಲನೆಯ ಬಳಿಕ ಸರ್ಕಾರ ಅಂತಿಮ ಪಟ್ಟಿ ಪ್ರಕಟಿಸಲಿದೆ. ಹೀಗಾಗಿ ಚುನಾವಣಾ ಸ್ಪರ್ಧಾಕಾಂಕ್ಷಿಗಳು ಅಂತಿಮ ಅಧಿಸೂಚನೆಗಾಗಿ ಕಾಯಬೇಕಾಗಿದೆ.ಅ.19 ಕೊನೆಯ ಗಡುವು:
ಮೀಸಲಾತಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಅಥವಾ ಸಲಹೆಗಳಿದ್ದರೆ ಅಕ್ಟೋಬರ್ 19, 2026ರ ಸಂಜೆ 5 ಗಂಟೆಯೊಳಗೆ ಸೂಕ್ತ ದಾಖಲೆಗಳೊಂದಿಗೆ ಸರ್ಕಾರದ ಕಾರ್ಯದರ್ಶಿ (ಪಂಚಾಯತ್ ರಾಜ್), ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬಹುಮಹಡಿಗಳ ಕಟ್ಟಡ, 3ನೇ ಹಂತ, 3ನೇ ಮಹಡಿ, ಡಾ. ಅಂಬೇಡ್ಕರ್ ವೀಧಿ, ಬೆಂಗಳೂರು–560001 ವಿಳಾಸಕ್ಕೆ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬಹುದು.ಒಟ್ಟಿನಲ್ಲಿ, 90 ಕ್ಷೇತ್ರಗಳ ಮೀಸಲಾತಿ ಪ್ರಕಟವಾಗಿರುವುದು ಜಿಲ್ಲಾ ಪಂಚಾಯಿತಿ ಚುನಾವಣೆಯ ರಾಜಕೀಯ ಚಟುವಟಿಕೆಗಳಿಗೆ ವೇಗ ನೀಡಿದೆ. ಮಹಿಳೆಯರಿಗೆ 45 ಕ್ಷೇತ್ರಗಳಲ್ಲಿ ಅವಕಾಶ ದೊರೆತಿರುವುದು ಗ್ರಾಮೀಣ ಸ್ಥಳೀಯ ಆಡಳಿತದಲ್ಲಿ ಮಹಿಳಾ ಪ್ರಾತಿನಿಧ್ಯಕ್ಕೆ ಮಹತ್ವದ ಹೆಜ್ಜೆಯಾಗಿದೆ. ಆದರೆ, ಅಂತಿಮ ಮೀಸಲಾತಿ ಪ್ರಕಟವಾದ ಬಳಿಕವೇ ಯಾವ ಕ್ಷೇತ್ರದಲ್ಲಿ ಯಾರಿಗೆ ಸ್ಪರ್ಧೆಯ ಅವಕಾಶ ದೊರೆಯಲಿದೆ ಎಂಬುದು ಸ್ಪಷ್ಟವಾಗಲಿದೆ.
ಪ್ರವರ್ಗವಾರು ಮೀಸಲಾತಿ
ಮೀಸಲಾತಿ ಪ್ರವರ್ಗ -ಒಟ್ಟು ಕ್ಷೇತ್ರಗಳು - ಮಹಿಳೆಯರಿಗೆ ಮೀಸಲುಪರಿಶಿಷ್ಟ ಜಾತಿ - 11 - 6
ಪರಿಶಿಷ್ಟ ಪಂಗಡ - 7 - 4ಹಿಂದುಳಿದ ವರ್ಗ ಅ - 22 - 11
ಹಿಂದುಳಿದ ವರ್ಗ ಬ - 5 - 3ಸಾಮಾನ್ಯ ವರ್ಗ - 45 - 21
ಒಟ್ಟು - 90 -45 ------ಕ್ಷೇತ್ರವಾರು ಮೀಸಲಾತಿ ಪಟ್ಟಿ:
ಅನಂತಪೂರ ಸಾಮಾನ್ಯ (ಮಹಿಳೆ),ಗುಂಡೇವಾಡಿ ಸಾಮಾನ್ಯ , ಮದಭಾವಿ ಸಾಮಾನ್ಯ ,ಅಥಣಿ ಗ್ರಾಮೀಣ ಸಾಮಾನ್ಯ (ಮಹಿಳೆ) ,ದರೂರ (ಶೇಗುಣಸಿ) ಅನುಸೂಚಿತ ಜಾತಿ (ಮಹಿಳೆ), ಸತ್ತಿ ಹಿಂದುಳಿದ ಅ ವರ್ಗ , ಕೊಕಟನೂರ ಅನುಸೂಚಿತ ಜಾತಿ, ಐಗಳಿ ಸಾಮಾನ್ಯ (ಮಹಿಳೆ) , ತೆಲಸಂಗ ಸಾಮಾನ್ಯ , ಮೋಳೆಸಾಮಾನ್ಯ, ಮಂಗಸೂಳಿ ಸಾಮಾನ್ಯ (ಮಹಿಳೆ), ಉಗಾರ ಬುದ್ರುಕ ಹಿಂದುಳಿದ ಅ ವರ್ಗ, ನೇಸರಗಿ ಸಾಮಾನ್ಯ , ನಾಗನೂರು ಅನುಸೂಚಿತ ಪಂಗಡ (ಮಹಿಳೆ), ಸಂಪಗಾಂವ ಸಾಮಾನ್ಯ (ಮಹಿಳೆ), ಸಂಗೊಳ್ಳಿಸಾಮಾನ್ಯ (ಮಹಿಳೆ), ಬೆಳವಡಿ ಸಾಮಾನ್ಯ (ಮಹಿಳೆ), ದೊಡವಾಡ ಹಿಂದುಳಿದ ಅ ವರ್ಗ (ಮಹಿಳೆ), ಅಂಬಡಗಟ್ಟಿ ಅನುಸೂಚಿತ ಪಂಗಡ, ಖೋದಾನಪೂರ ಹಿಂದುಳಿದ ಅ ವರ್ಗ, ಕಾದ್ರೋಳ್ಳಿ ಹಿಂದುಳಿದ ಬ ವರ್ಗ, ಕಾಕತಿ ಅನುಸೂಚಿತ ಪಂಗಡ (ಮಹಿಳೆ), ಕಡೋಲಿ ಸಾಮಾನ್ಯ (ಮಹಿಳೆ), ಹಿಂಡಲಗಾ ಸಾಮಾನ್ಯ, ಉಚಗಾಂವ ಹಿಂದುಳಿದ ಬ ವರ್ಗ, ಬೆಳಗುಂದಿ ಸಾಮಾನ್ಯ (ಮಹಿಳೆ), ಯಳ್ಳೂರ ಹಿಂದುಳಿದ ಅ ವರ್ಗ (ಮಹಿಳೆ), ಹಲಗಾ ಸಾಮಾನ್ಯ, ಅಂಕಲಗಿ ಸಾಮಾನ್ಯ, ಸಾಂಬ್ರಾಹಿಂದುಳಿದ ಅ ವರ್ಗ, ಸುಳೇಭಾವಿ ಸಾಮಾನ್ಯ , ಹಿರೇಕುಡಿ ಹಿಂದುಳಿದ ಅ ವರ್ಗ (ಮಹಿಳೆ), ಚಿಕ್ಕೋಡಿ ಗ್ರಾಮೀಣ ಸಾಮಾನ್ಯ (ಮಹಿಳೆ), ಕೇರೂರ ಅನುಸೂಚಿತ ಜಾತಿ (ಮಹಿಳೆ), ಖಡಕಲಾಟ ಸಾಮಾನ್ಯ , ಪಟ್ಟಣಕುಡಿ ಹಿಂದುಳಿದ ಅ ವರ್ಗ, ಕರೋಶಿ ಸಾಮಾನ್ಯ (ಮಹಿಳೆ), ನಾಗರಮುನ್ನೋಳಿ ಸಾಮಾನ್ಯ (ಮಹಿಳೆ), ಕಾರದಗಾ ಸಾಮಾನ್ಯ, ಕೋಗನೊಳ್ಳಿಸಾಮಾನ್ಯ, ಬೇಡಕಿಹಾಳ ಹಿಂದುಳಿದ ಅ ವರ್ಗ (ಮಹಿಳೆ), ಸೌಂದಲಗಾ ಹಿಂದುಳಿದ ಅ ವರ್ಗ (ಮಹಿಳೆ), ಅಕ್ಕೋಳ ಅನುಸೂಚಿತ ಜಾತಿ, ಸುಲದಾಳ ಸಾಮಾನ್ಯ, ಗೋಟೂರ ಅನುಸೂಚಿತ ಪಂಗಡ (ಮಹಿಳೆ), ಮಕ್ಕಳಗೇರಿ ಸಾಮಾನ್ಯ, ಮಮದಾಪೂರ ಹಿಂದುಳಿದ ಅ ವರ್ಗ, ಘಟಪ್ರಭಾ ಅನುಸೂಚಿತ ಜಾತಿ (ಮಹಿಳೆ) , ಮೆಳವಂಕಿ ಹಿಂದುಳಿದ ಅ ವರ್ಗ , ಶಿಂಧಿಕುರಬೇಟ ಸಾಮಾನ್ಯ (ಮಹಿಳೆ), ತುಕ್ಕಾನಟ್ಟಿಹಿಂದುಳಿದ ಬ ವರ್ಗ (ಮಹಿಳೆ), ಹಳ್ಳೂರ ಹಿಂದುಳಿದ ಅ ವರ್ಗ (ಮಹಿಳೆ), ಕುಲಗೋಡ ಸಾಮಾನ್ಯ, ಯಾದವಾಡ ಅನುಸೂಚಿತ ಜಾತಿ, ಕಣಗಲಾ ಸಾಮಾನ್ಯ, ಅಮ್ಮಣಗಿ ಸಾಮಾನ್ಯ , ಎಲಿಮುನ್ನೋಳಿ ಹಿಂದುಳಿದ ಅ ವರ್ಗ, ಬೆಲ್ಲದ ಬಾಗೇವಾಡಿಅನುಸೂಚಿತ ಜಾತಿ (ಮಹಿಳೆ) , ಘೋಡಗೇರಿಹಿಂದುಳಿದ ಅ ವರ್ಗ (ಮಹಿಳೆ), ಹೆಬ್ಬಾಳ ಸಾಮಾನ್ಯ (ಮಹಿಳೆ), ಠಾಣಾ ಹತ್ತರಗಿ ಅನುಸೂಚಿತ ಪಂಗಡ , ಯಮಕನಮರಡಿ ಸಾಮಾನ್ಯ, ಪಾಶ್ಚಾಪೂರ ಹಿಂದುಳಿದ ಅ ವರ್ಗ (ಮಹಿಳೆ), ಜಾಂಬೋಟಿಸಾಮಾನ್ಯ, ಗರ್ಲಗುಂಜಿಸಾಮಾನ್ಯ (ಮಹಿಳೆ), ಪಾರಿಶ್ಚಾಡ ಅನುಸೂಚಿತ ಜಾತಿ (ಮಹಿಳೆ), ಕಕ್ಕೇರಿ ಅನುಸೂಚಿತ ಪಂಗಡ (ಮಹಿಳೆ), ನಂದಗಡಹಿಂದುಳಿದ ಅ ವರ್ಗ (ಮಹಿಳೆ) , ಲೊಂಡಾಸಾಮಾನ್ಯ (ಮಹಿಳೆ) , ಕುಡಚಿ ಗ್ರಾಮೀಣಹಿಂದುಳಿದ ಅ ವರ್ಗ, ಅಲಖನೂರಹಿಂದುಳಿದ ಅ ವರ್ಗ (ಮಹಿಳೆ), ಹಿಡಕಲ್ ಸಾಮಾನ್ಯ (ಮಹಿಳೆ), ಇಟನಾಳ ಸಾಮಾನ್ಯ, ಮೇಖಳಿ ಸಾಮಾನ್ಯ (ಮಹಿಳೆ) , ರಾಯಬಾಗ (ಗ್ರಾಮೀಣ)ಅನುಸೂಚಿತ ಜಾತಿ (ಮಹಿಳೆ), ನಸಲಾಪೂರಸಾಮಾನ್ಯ (ಮಹಿಳೆ) , ಹುಲಕುಂದಸಾಮಾನ್ಯ (ಮಹಿಳೆ), ಬಟಕುರ್ಕಿಅನುಸೂಚಿತ ಜಾತಿ, ಕಟಕೋಳಹಿಂದುಳಿದ ಬ ವರ್ಗ (ಮಹಿಳೆ), ಗೊಡಚಿ ಹಿಂದುಳಿದ ಅ ವರ್ಗ, ಹಲಗತ್ತಿಸಾಮಾನ್ಯ (ಮಹಿಳೆ) , ಸುರೇಬಾನಸಾಮಾನ್ಯ, ಉಗರಗೋಳ ಹಿಂದುಳಿದ ಬ ವರ್ಗ (ಮಹಿಳೆ), ಸವದತ್ತಿ ಗ್ರಾಮೀಣ ಹಿಂದುಳಿದ ಅ ವರ್ಗ, ಶಿಂಧೋಗಿಹಿಂದುಳಿದ ಅ ವರ್ಗ (ಮಹಿಳೆ), ಕರೀಕಟ್ಟಿ ಸಾಮಾನ್ಯ, ಹೊಸೂರಅನುಸೂಚಿತ ಜಾತಿ, ಮುರಗೋಡಸಾಮಾನ್ಯ, ಯರಝರ್ವಿ ಅನುಸೂಚಿತ ಪಂಗಡ , ಸತ್ತಿಗೇರಿ ಸಾಮಾನ್ಯ.