ರಾಜಕೀಯ ಧ್ರುವೀಕರಣ: ಕಮಲಕ್ಕೆ ಬ್ಯಾಡ್<bha>;</bha> ಕೈ ಗೆ ಲಕ್ಕಿPolitical Polarization: Bad for Kamala<bha>;</bha> Lucky for Kai

| Published : Dec 31 2023, 01:30 AM IST

ರಾಜಕೀಯ ಧ್ರುವೀಕರಣ: ಕಮಲಕ್ಕೆ ಬ್ಯಾಡ್<bha>;</bha> ಕೈ ಗೆ ಲಕ್ಕಿPolitical Polarization: Bad for Kamala<bha>;</bha> Lucky for Kai
Share this Article
  • FB
  • TW
  • Linkdin
  • Email

ಸಾರಾಂಶ

2023ರ ವರ್ಷದ 4 ತಿಂಗಳು ಜಿಲ್ಲೆಯಲ್ಲಿ ಯಾವುದೇ ಕ್ಷೇತ್ರದಲ್ಲೂ ನಿರೀಕ್ಷಿತ ಬೆಳವಣಿಗೆಯಾಗದಿದ್ದರೂ, ಚುನಾವಣಾ ವರ್ಷವಾಗಿದ್ದರಿಂದ ರಾಜಕೀಯ ವಲಯದಲ್ಲಿ ಕ್ಷೀಪ್ರ ಬದಲಾವಣೆಗಳಾದವು. ಮೂಡಿಗೆರೆ ಮಾಜಿ ಸಚಿವ ಬಿ.ಬಿ.ನಿಂಗಯ್ಯ ಹಾಗೂ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ತಮ್ಮ ಮಾತೃ ಪಕ್ಷಗಳಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಗೆ ತೆರಳಿದರು.

- ಆನೆ ತುಳಿತಕ್ಕೆ ಮೂವರು ಬಲಿ । ಮಲೆನಾಡಿನಲ್ಲಿ ಅಬ್ಬರದ ಸದ್ದು ಮಾಡಿದ ಕಾಡಾನೆಗಳು । ಜಿಲ್ಲೆಯಲ್ಲಿ ಮತ್ತೆ ಆವರಿಸಿಕೊಂಡ ಬರಗಾಲದ ಕಾರ್ಮೋಡ

Three victims of elephant trampling. Forests roared in the hills. Drought has hit the district againಹಿನ್ನೋಟ-

2023ಆರ್. ತಾರಾನಾಥ್ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮುಂಗಾರು ಮಳೆಯ ಏರು ಪೇರು, ಕಾಡಾನೆಗಳ ಉಪಟಳ, ಮಲೆನಾಡಿನಲ್ಲಿ ಪ್ರಾಣಿ- ಮಾನವ ಸಂಘರ್ಷ ಪ್ರತಿ ವರ್ಷದಂತೆ 2023 ರಲ್ಲೂ ಮುಂದುವರೆದಿತ್ತು. ರಾಜಕೀಯ ಕ್ಷೇತ್ರದಲ್ಲಿ ಬಿಜೆಪಿಗೆ ಬಾರೀ ಹಿನ್ನಡೆಯಾಗಿದ್ದರೆ ಕಾಂಗ್ರೆಸ್‌ಗೆ ಲಕ್ಕಿ ಈಯರ್. 2023ರ ವರ್ಷದ 4 ತಿಂಗಳು ಜಿಲ್ಲೆಯಲ್ಲಿ ಯಾವುದೇ ಕ್ಷೇತ್ರದಲ್ಲೂ ನಿರೀಕ್ಷಿತ ಬೆಳವಣಿಗೆಯಾಗದಿದ್ದರೂ, ಚುನಾವಣಾ ವರ್ಷವಾಗಿದ್ದರಿಂದ ರಾಜಕೀಯ ವಲಯದಲ್ಲಿ ಕ್ಷೀಪ್ರ ಬದಲಾವಣೆಗಳಾದವು. ಮೂಡಿಗೆರೆ ಮಾಜಿ ಸಚಿವ ಬಿ.ಬಿ.ನಿಂಗಯ್ಯ ಹಾಗೂ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ತಮ್ಮ ಮಾತೃ ಪಕ್ಷಗಳಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಗೆ ತೆರಳಿದರು. ಮೇ 10 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವರಾದ ಸಿ.ಟಿ. ರವಿ, ಡಿ.ಎನ್. ಜೀವರಾಜ್, ಮಾಜಿ ಶಾಸಕರಾದ ಡಿ.ಎಸ್. ಸುರೇಶ್- ಬೆಳ್ಳಿ ಪ್ರಕಾಶ್ ಗೆ ಸೋಲಾಯಿತು. ಜಿಲ್ಲೆಯ ಎಲ್ಲಾ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಜಯ ತಂದುಕೊಟ್ಟಿತು. ಕಡೂರು, ಚಿಕ್ಕಮಗಳೂರು ಹಾಗೂ ಮೂಡಿಗೆರೆ ಕ್ಷೇತ್ರದಲ್ಲಿ ಮೊದಲ ಬಾರಿಗೆ ಹೊಸಬರಿಗೆ ಅವಕಾಶ ಸಿಕ್ಕಿತು. ಜೂನ್‌ ನಲ್ಲಿ ನಿರೀಕ್ಷೆಯಷ್ಟು ಮಳೆ ಬರಲಿಲ್ಲ. ಜುಲೈನಲ್ಲಿ ಮಲೆನಾಡಿನಲ್ಲಿ ಸುರಿದ ಭಾರೀ ಮಳೆಗೆ ಶೃಂಗೇರಿ ಪಟ್ಟಣ, ತುಂಗಾ, ಭದ್ರಾ ಹಾಗೂ ಹೇಮಾವತಿ ನದಿ ಪಾತ್ರದ ಕೃಷಿ ಪ್ರದೇಶ ಜಲಾವೃತ ವಾಗಿತ್ತು. ಆದರೆ, ಬಯಲುಸೀಮೆಯಲ್ಲಿ ಮಳೆ ಕೊರತೆ, ಸಾಲಬಾಧೆಯಿಂದ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡರು. ಅಜ್ಜಂಪುರ, ಕಡೂರು ತಾಲೂಕು ಹೊರತುಪಡಿಸಿ ಉಳಿದ 7 ತಾಲೂಕುಗಳಲ್ಲಿ ಆನೆಗಳ ಉಪಟಳ ಹೆಚ್ಚಾಗಿತ್ತು. ಹಲವೆಡೆ ಆನೆಗಳು ತಿಂಗಳುಗಟ್ಟಲೆ ಬೀಡು ಬಿಟ್ಟಿದ್ದವು. ಆನೆ ತುಳಿತಕ್ಕೆ ಮೂರು ಮಂದಿ ಮೃತಪಟ್ಟಿದ್ದರೆ, ವಿದ್ಯುತ್ ತಂತಿಗೆ ಆನೆಯೊಂದು ಬಲಿಯಾಯಿತು. ಕಾರ್ಯಾಚರಣೆ ವೇಳೆಯಲ್ಲಿ ಕಾಡಾನೆ ಮೃತಪಟ್ಟಿತು. ರಾಜಕೀಯ ಮುತ್ಸದ್ಧಿ, ಸಂಸದೀಯ ಪಟು ಡಿ.ಬಿ. ಚಂದ್ರೇಗೌಡ ಅವರನ್ನು ಕಳೆದುಕೊಂಡ ವರ್ಷ ಇದಾಯಿತು.----ಜನವರಿ:

2- ಬಿಜೆಪಿಯ ಭೂತ್ ವಿಜಯ ಅಭಿಯಾನಕ್ಕೆ ಆಯನೂರು ಮಂಜುನಾಥ್ ಚಾಲನೆ

3- ಕಳೆದ 9 ತಿಂಗಳ ಹಿಂದೆ ಬೆಂಗಳೂರಿನಲ್ಲಿ ಕೊಲೆ ಮಾಡಿ ಚಾರ್ಮಡಿ ಘಾಟ್‌ನಲ್ಲಿ ಬಿಸಾಡಿದ ಮೃತದೇಹ ಪತ್ತೆಗೆ ಕಾರ್ಯಾಚರಣೆ 11- ತರೀಕೆರೆ ತಾಲೂಕಿನ ಬೇಲೆನಹಳ್ಳಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಚಾಲನೆ

18- ಐದು ದಿನಗಳ ಚಿಕ್ಕಮಗಳೂರು ಹಬ್ಬಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಚಾಲನೆ

21- ಚಿಕ್ಕಮಗಳೂರಿಗೆ ಆಗಮಿಸಿದ ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆ, ಆಶ್ರಯ ಮೈದಾನದಲ್ಲಿ ಬಹಿರಂಗ ಕಾರ್ಯಕ್ರಮ.

24- ಎನ್.ಆರ್.ಪುರ ತಾಲೂಕಿನ ಬಿ. ಕಣಬೂರು ಗ್ರಾಮದಲ್ಲಿ ಮಂಗನ ಕಾಯಿಲೆ ಪತ್ತೆ ------ಫೆಬ್ರವರಿ

1- ಕೇಂದ್ರದ ಆರ್ಥ ಸಚಿವೆ ನಿರ್ಮಲ ಸೀತಾರಾಮ್ ಮಂಡಿಸಿದ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರು. ಘೋಷಣೆ

14- ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ತೆರಳುವ ಸಂದರ್ಭದಲ್ಲಿ ರಾಜ್ಯಪಾಲರು ಮೂಡಿಗೆರೆಯ ಹಳಸೆ ಶಿವಣ್ಣ ರವರ ಎಸ್ಟೇಟ್‌ಗೆ ಭೇಟಿ ನೀಡಿದ್ದರು.

19- ಬಿಜೆಪಿ ತೊರೆದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಎಚ್.ಡಿ. ತಮ್ಮಯ್ಯ ಕಾಂಗ್ರೆಸ್‌ಗೆ ಸೇರ್ಪಡೆ

20- ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ 2 ದಿನದ ಪ್ರವಾಸಕ್ಕಾಗಿ ಕೊಪ್ಪ, ಶೃಂಗೇರಿ, ಚಿಕ್ಕಮಗಳೂರಿಗೆ ಭೇಟಿ

- ಬಾಳೆಹೊನ್ನೂರು ಬಿದರೆ ಗ್ರಾಮದ ಬಳಿ ವ್ಯಕ್ತಿಯೋರ್ವರು ಆಕಸ್ಮಿಕವಾಗಿ ಹಾರಿಸಿದ ಗುಂಡಿಗೆ ಇಬ್ಬರು ಸಹೋದರರ ಬಲಿ

23- ಪೊಲೀಸ್ ಇಲಾಖೆಯಿಂದ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿ ಪರವಾನಗಿ ಇಲ್ಲದ 41 ಬಂದೂಕುಗಳು, 2 ರಿವಾಲ್ವರ್ ವಶ

25- ಜಿಲ್ಲೆಯಲ್ಲಿ ಜೆಡಿಎಸ್‌ನಿಂದ ಪಂಚರತ್ನ ಯಾತ್ರೆ, ಎರಡು ದಿನದ ಯಾತ್ರೆಯಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಭಾಗಿ

26- ಕಳಸದ ಕೊಂಡದಮನೆ ಬಳಿ ಕಾರ್ಯಾಚರಣೆಯಲ್ಲಿ ಆನೆಗಳು ತಿರುಗಿ ಬಿದ್ದಾಗ ಇಬ್ಬರು ಅರಣ್ಯ ಸಿಬ್ಬಂದಿ ಭದ್ರಾ ನದಿಗೆ ಹಾರಿ ಪ್ರಾಣ ಉಳಿಸಿಕೊಂಡರು ----

ಮಾರ್ಚ್‌

5- ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪಗೆ ರೇಣುಕಾಚಾರ್ಯ ಪ್ರಶಸ್ತಿ ಗೌರವಿಸಲಾಯಿತು

19- ಚಿಕ್ಕಮಗಳೂರಿನ ಮೆಡಿಕಲ್ ಕಾಲೇಜು ಆವರಣದಲ್ಲಿ ಫಲಾನುಭವಿಗಳ ಸಮಾವೇಶ

---ಏಪ್ರಿಲ್

1- ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಚುನಾವಣಾ ಟಿಕೆಟ್ ಆಕಾಂಕ್ಷಿ, ಬೆಂಬಲಿಗರ ನಡುವೆ ಮಾರಾಮರಿ

3- ತರೀಕೆರೆಯ ಬೇಲೆನಹಳ್ಳಿ ಬಳಿ ಚೆಕ್ ಪೋಸ್ಟ್‌ನಲ್ಲಿ 9.50 ಕೋಟಿ ರು. ಮೌಲ್ಯದ ಚಿನ್ನಾಭರಣ ಪೊಲೀಸರ ವಶಕ್ಕೆ

11- ಮುತ್ತಿನಕೊಪ್ಪದ ಅರಂಬಳ್ಳಿ ಗ್ರಾಮದ ಬಳಿ ವಿದ್ಯುತ್ ಸ್ಪರ್ಶದಿಂದ ಗಂಡಾನೆ ಸಾವು

13- ಕಾಂಗ್ರೆಸ್‌ಗೆ ಹೋಗಿದ್ದ ವೈಎಸ್‌ವಿ ದತ್ತ ಮರಳಿ ಜೆಡಿಎಸ್‌ಗೆ ಆಗಮನ

14- ದೂರು ಸ್ವೀಕರಿಸಲು ಪೊಲೀಸರು ಸತಾಯಿಸಿದ್ದರಿಂದ ಮಹಿಳೆಯೋಬ್ಬರು ಮೂಡಿಗೆರೆ ಪೊಲೀಸ್ ಠಾಣೆ ಕಟ್ಟಡದ ಮೇಲೆ ಹತ್ತಿದ್ದರು

19- ಬಿಜೆಪಿ ಟಿಕೇಟ್ ಸಿಗದೆ ವ್ಯಕ್ತಿಯೋರ್ವ ಶಿವನಿ ರೈಲ್ವೆ ನಿಲ್ದಾಣದ ಬಳಿ ಟವರ್ ಏರಿದ್ದರು

24- ಎಐಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಮಲ್ಲಿಕಾರ್ಜುನ ಖರ್ಗೆ ಚಿಕ್ಕಮಗಳೂರಿಗೆ ಆಗಮನ

25- ಚುನಾವಣಾ ಪ್ರಚಾರದ ನಿಮಿತ್ತ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಶೃಂಗೇರಿಗೆ ಭೇಟಿ----

ಮೇ

2- ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಚುನಾವಣಾ ಪ್ರಚಾರ

6- ಕೊಪ್ಪಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್‌ನಾಥ್ ಭೇಟಿ

10- ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆ: ಮತದಾನ

13- ವಿಧಾನಸಭಾ ಚುನಾವಣಾ ಫಿಲಿತಾಂಶ ಪ್ರಕಟ: ಬಿಜೆಪಿಗೆ ಎಲ್ಲಾ ಕ್ಷೇತ್ರಗಳಲ್ಲಿ ಸೋಲು, 20 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಕಾಂಗ್ರೆಸ್‌ಗೆ ಗೆಲುವು

20- ಮೂಡಿಗೆರೆ ಚಿಕ್ಕಳ್ಳ ಬಳಿ ಮಳೆಗೆ ಮರ ಬಿದ್ದು ಸ್ಕೂಟಿಯಲ್ಲಿ ಹೋಗುತ್ತಿದ್ದ ವ್ಯಕ್ತಿ ಸಾವು

- ತರೀಕೆರೆ ತಾಲೂಕಿನ ಲಕ್ಕವಳ್ಳಿ ಬಳಿ ಭದ್ರಾ ಎಡ ದಂಡೆ ನಾಲೆಯಲ್ಲಿ ಈಜಲು ಹೋಗಿದ್ದ ರವಿಚಂದ್ರ, ಅನನ್ಯ, ಶಾಮವೇಣಿ ನೀರಿನಲ್ಲಿ ಮುಳುಗಿ ಸಾವು

22- ಜಿಲ್ಲೆಯ ಐವರು ನೂತನ ಶಾಸಕರಿಂದ ವಿಧಾನಸೌಧದಲ್ಲಿ ಪ್ರಮಾಣ ವಚನ ಸ್ವೀಕಾರ

29- ತರೀಕೆರೆಯ ಕಂಠಿನಮಡ್ಡು ಗ್ರಾಮದಲ್ಲಿ ಆಕಸ್ಮಿಕವಾಗಿ ಕೆರೆಗೆ ಬಿದ್ದು ಇಬ್ಬರು ಬಾಲಕರ ಸಾವು ----ಜೂನ್

7- ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಸ್ವಾಮೀಜಿ ಕಾಶ್ಮೀರದ ಶಾರದಾಂಬೆ ದೇಗುಲಕ್ಕೆ ಭೇಟಿ

11- ಕಡೂರಿನ ಯಗಟಿಪುರದ ದೇವಾಲಯದ ಆವರಣದಲ್ಲಿ ಸಿಡಿಲಿಗೆ ಓರ್ವ ಬಲಿ

22- ಅಮೆರಿಕಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಆಲ್ದೂರಿನ ವಿಜ್ಞಾನಿ ಅವೇಜ್ ಅಹಮದ್ ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು

23- ಚಿಕ್ಕಮಗಳೂರು ತಾಲೂಕಿನ ಆಣೂರಿನಲ್ಲಿ ನಿಧಿಗಾಗಿ 15 ಅಡಿ ಆಳದಷ್ಟು ಗುಂಡಿ ತೆಗೆಯಲಾಗಿತ್ತು.

----ಜುಲೈ

14- ಕದ್ರಿಮಿದ್ರಿ ಸಮೀಪದ ಕೆಸವಿನಮನೆ ಗ್ರಾಮದಲ್ಲಿ ತಂತಿ ಬೇಲಿಗೆ ಸಿಲುಕಿದ್ದ ಚಿರತೆ ರಕ್ಷಣೆ

19- ಭಾರಿ ಮಳೆಗೆ ಮೂಡಿಗೆರೆ ತಾಲೂಕಿನ ದಾರದಹಳ್ಳಿ ಬಳಿ ದೇವಮ್ಮ ನೀರು ಪಾಲಾಗಿದ್ದರು

20- ಶೃಂಗೇರಿಗೆ ಜಾರ್ಖಂಡ್ ರಾಜ್ಯದ ರಾಜ್ಯಪಾಲರು ಭೇಟಿ -----ಆಗಸ್ಟ್ 2- ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆ ಡಯಾಲಿಸಿಸ್ ಕೇಂದ್ರದ ಸಿಬ್ಬಂದಿ ಮುಷ್ಕರ

7- ಮೆದುಳು ನಿಷ್ಕ್ರೀಯಗೊಂಡ ಮಹಿಳೆ ಅಂಗಾಂಗ ದಾನ

12- ಮೂಡಿಗೆರೆ ಮುದ್ರೆ ಮನೆ ಬಳಿ ರಸ್ತೆ ಅಪಘಾತದಲ್ಲಿ ತಾಯಿ- ಮಗ ಸಾವು

13- ಅಕ್ರಮ ಭೂ ಮಂಜೂರು ಹಿನ್ನಲೆಯಲ್ಲಿ ಕಡೂರಿನ ಹಿಂದಿನ ತಹಸೀಲ್ದಾರ್ ಉಮೇಶ್ ವಿರುದ್ಧ ಎಫ್‌ಐಆರ್ ದಾಖಲು

16- ಚಿಕ್ಕಮಗಳೂರಿನ ಹೌಸಿಂಗ್ ಬೋಡ್‌ರ್ಯ ಬಳಿ ಕಟ್ಟರ್ ಬಳಸಿ ಎಟಿಎಂನಲ್ಲಿದ್ದ 14 ಲಕ್ಷ ರು. ಕಳುವು ---ಸೆಪ್ಟಂಬರ್

3- ಆಲ್ದೂರಿನ ಕಂಚುಗಲ್ ದುರ್ಗದ ಬಳಿ ಆನೆ ದಾಳಿಗೆ ವ್ಯಕ್ತಿ ದುರ್ಮರಣ

24- ಕೊಪ್ಪ ತಾಲೂಕಿನ ಕಡೆಗದ್ದೆಗ್ರಾಮದಲ್ಲಿದ್ದ 3 ಬೆಲ್ಜಿಯಂ ನಾಯಿಗಳನ್ನು ಭಾರತೀಯ ಸೇನೆಗೆ ಹಸ್ತಾಂತರ ಮಾಡಲಾಯಿತು ----

ಅಕ್ಟೋಬರ್

1- ಕಡೂರು ತಾಲೂಕಿನ ಪಂಚನಹಳ್ಳಿಯಲ್ಲಿ ಮಗನಿಂದ ತಾಯಿ ಹತ್ಯೆ

14- ಮೂಡಿಗೆರೆ ತಾಲೂಕಿನ ಕಿರುಗುಂದ ಗ್ರಾಮದಲ್ಲಿ ಕುಡಿದ ಮತ್ತಿನಲ್ಲಿ ಪತಿಯಿಂದಲೇ ಪತ್ನಿ ಹತ್ಯೆ

26- ಹುಲಿ ಉಗುರು ಧರಿಸಿದ ಖಾಂಡ್ಯ ದೇವಾಲಯದ ಇಬ್ಬರು ಅರ್ಚಕರು ಪೊಲೀಸರಿಂದ ಬಂಧನ

----

ನವೆಂಬರ್

6- ಹಿರಿಯ ರಾಜಕಾರಣಿ, ರಾಜಕೀಯ ಮುತ್ಸದ್ದಿ ಡಿ.ಬಿ. ಚಂದ್ರೇಗೌಡ ನಿಧನ

- ಕಡೂರಿನ ಮಚೇರಿ ಗ್ರಾಮದಲ್ಲಿ ಮಳೆಯಿಂದ ಮನೆ ಗೋಡೆ ಕುಸಿದು ವ್ಯಕ್ತಿ ಸಾವು

8- ಚಿಕ್ಕಮಗಳೂರು ತಾಲೂಕಿನ ಗಾಳಿಗಂಡಿ ಗ್ರಾಮದಲ್ಲಿ ಕಾಡಾನೆ ತುಳಿತಕ್ಕೆ ಮಹಿಳೆ ದಾರುಣ ಸಾವು

9- ಆಲ್ದೂರು ವಲಯದಲ್ಲಿ ಕಾಡಾನೆ ಕಾರ್ಯಾಚರಣೆ ಆರಂಭ

10- ಶೃಂಗೇರಿಯಲ್ಲಿ 32 ಅಡಿ ಎತ್ತರದ ಶಂಕರಾಚಾರ್ಯರ ಭವ್ಯ ಮೂರ್ತಿ ಲೋಕಾರ್ಪಣೆ

11- ಜಿಲ್ಲೆಯ ಬರಪೀಡಿತ ಪ್ರದೇಶಕ್ಕೆ ಮಾಜಿ ಸಚಿವ ಆರಗ ಜ್ಞಾನೇಂದ್ರ ನೇತೃತ್ವದ ಬಿಜೆಪಿ ತಂಡ ಭೇಟಿ : ಪರಿಶೀಲನೆ

16- ಸಾರಗೋಡು ಬಳಿ ಕಾಡಾನೆ ಸೆರೆ: ಅದೇ ದಿನ ನಲ್ಲೂರಿನಲ್ಲಿ ಆನೆಗಳ ಹಿಂಡು ಕಬ್ಬಿನಗದ್ದೆಯಲ್ಲಿ ಬೀಡು ಬಿಟ್ಟಿತ್ತು

22- ಭೈರಾಪುರ ಬಳಿ ಕಾಡಾನೆ ಕಾರ್ಯಾಚರಣೆಯಲ್ಲಿ ತೊಡಗಿದ್ದ ಆನೆ ನಿಗ್ರಹ ಪಡೆ ಸಿಬ್ಬಂದಿ ಕಾರ್ತಿಕ್‌ಗೌಡ ಆನೆ ತುಳಿತಕ್ಕೆ ಬಲಿ.

30- ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ವಕೀಲ ಪ್ರೀತಂ ಮೇಲೆ ಪೊಲೀಸರಿಂದ ಹಲ್ಲೆ ----

ಡಿಸೆಂಬರ್

1- ವಕೀಲರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ಪೊಲೀಸ್ ಸಿಬ್ಬಂದಿ ಅಮಾನತು, ಬೆಳಿಗ್ಗೆ ವಕೀಲರಿಂದ ರಾತ್ರಿ ಪೊಲೀಸರಿಂದ ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ

3- ಮೂಡಿಗೆರೆ ಮೇಕನಗದ್ದೆ ಬಳಿ ಕಾರ್ಯಾಚರಣೆ ವೇಳೆ ಕಾಡಾನೆ ಮೃತ.

9- ರಾಣಿ ಝರಿ ಬಳಿ ಟ್ರಕ್ಕಿಂಗ್‌ಗೆ ಹೋಗಿದ್ದ ಬೆಂಗಳೂರು ಮೂಲ ವ್ಯಕ್ತಿ ಭರತ್ ಸಾವು

12- ದೇವವೃಂದದ ಬಳಿ ಪತ್ನಿಗೆ ಮತ್ತಿನ ಔಷಧಿ ನೀಡಿ ಸಾಯಿಸಿದ ಪತಿ

20- ಮೂಡಿಗೆರೆ ತಾಲೂಕಿನ ಕೆಸವಳಲು ಗ್ರಾಮದಲ್ಲಿ ಶಾಲೆಗೆ ತೆರಳಲು ಬಸ್ ಕಾಯುತ್ತಿದ್ದ 7ನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವು ---- 30 ಕೆಸಿಕೆಎಂ 1ಚಿಕ್ಕಮಗಳೂರಿನಲ್ಲಿ ನಡೆದ ಚಿಕ್ಕಮಗಳೂರು ಹಬ್ಬ------ 30 ಕೆಸಿಕೆಎಂ 2ಬಾಳೆಹೊನ್ನೂರಿನ ರಂಬಾಪುರಿ ಪೀಠದಲ್ಲಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರಿಗೆ ರೇಣುಕಾಚಾರ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.----- 30 ಕೆಸಿಕೆಎಂ 3ಹಿರಿಯ ಮುತ್ಸದ್ಧಿ ಡಿ.ಬಿ. ಚಂದ್ರೇಗೌಡರ ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ --- 30 ಕೆಸಿಕೆಎಂ 4ಮೂಡಿಗೆರೆ ತಾಲೂಕಿನ ಭೈರಾಪುರ ಬಳಿ ಕಾರ್ಯಾಚರಣೆ ಸಂದರ್ಭದಲ್ಲಿ ಕಾಡಾನೆ ಮೃತಪಟ್ಟಿತು.