ಸಾರಾಂಶ
ಮಧುಗಿರಿಯಲ್ಲಿ ಗಣೇಶ ಸ್ಥಾಪನೆಗೆ ಖಾಯಂ ಪೆಂಡಾಲ್ ನಿರ್ಮಿಸುವ ಮೂಲಕ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಾಗಿದೆ ಎಂದು ಶ್ರೀಕ್ಷೇತ್ರ ಸಿದ್ದರಬೆಟ್ಟದ ಶ್ರೀವೀರಭದ್ರಶಿವಾಚಾರ್ಯಸ್ವಾಮಿಜಿ ನುಡಿದರು.
ಕನ್ನಡಪ್ರಭ ವಾರ್ತೆ ಮಧುಗಿರಿ
ಮಧುಗಿರಿಯಲ್ಲಿ ಗಣೇಶ ಸ್ಥಾಪನೆಗೆ ಖಾಯಂ ಪೆಂಡಾಲ್ ನಿರ್ಮಿಸುವ ಮೂಲಕ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಾಗಿದೆ ಎಂದು ಶ್ರೀಕ್ಷೇತ್ರ ಸಿದ್ದರಬೆಟ್ಟದ ಶ್ರೀವೀರಭದ್ರಶಿವಾಚಾರ್ಯಸ್ವಾಮಿಜಿ ನುಡಿದರು.ಪಟ್ಟಣದ ಶ್ರೀಮಲ್ಲೇಶ್ವರಸ್ವಾಮಿ ಮತ್ತು ಶ್ರೀವೆಂಕಟರಮಣಸ್ವಾಮಿ ದೇವಸ್ಥಾನಗಳ ಮಧ್ಯ ಭಾಗದಲ್ಲಿ ಶ್ರೀ ವಿದ್ಯಾಗಣಪತಿ ಮಹಾಮಂಡಳಿಯಿಂದ ಬಾಲಗಾಂಗಾಧರ್ ತಿಲಕ್ ಮಂಟಪದಲ್ಲಿ ಪ್ರತಿಷ್ಠಾಪನಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಗಣಪತಿಯನ್ನು ಎಲ್ಲರೂ ನಿತ್ಯ ಪೂಜಿಸುವುದು ವಾಡಿಕೆ. ಆದರೆ ಆತನಿಗೆ ವಿಶೇಷವಾಗಿ ಭಾದ್ರಪದ ಮಾಸದಲ್ಲಿ ಗಣೇಶ ಚತುರ್ಥಿಗೆ ಪ್ರತಿಷ್ಠಾಪಿಸಿ ಪೂಜಿಸುವುದು ಹೆಚ್ಚು ಮಹತ್ವ ಪಡೆದಿದೆ. ಇಂತಹ ಲೋಕಕಲ್ಯಾಣಕ್ಕೆ ರಾಜಕೀಯ ಮುಖಂಡರು ಇಚ್ಛಾಶಕ್ತಿ ವಹಿಸಿ ಅನುಕೂಲ ಮಾಡಿಕೊಟ್ಟಿರುವುದು ಉತ್ತಮ ಕೆಲಸವಾಗಿದೆ ಎಂದು ಶುಭ ಹಾರೈಸಿದರು.ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್ ಮಾತನಾಡಿ, ಭಕ್ತರ ಬಹುದಿನಗಳ ಬೇಡಿಕೆಯಾಗಿದ್ದ, ಶ್ರೀವಿದ್ಯಾಗಣಪತಿ ಶಾಶ್ವತ ಶೆಡ್ ನಿರ್ಮಾಣದ ಕನಸು ನನಸಾಗಿದ್ದು, ಶಾಸಕ ಕೆ.ಎನ್.ರಾಜಣ್ಣ ಮತ್ತು ಎಂಎಲ್‌ಸಿ ಆರ್.ರಾಜೇಂದ್ರ ಅವರು ಮುತುವರ್ಜಿ ವಹಿಸಿ ಭಕ್ತಾದಿಗಳಿಗೆ ಅನುಕೂಲವಾಗಲೆಂದು ಈ ಗಣಪತಿ ಪೆಂಡಾಲನ್ನು ತ್ವರಿತವಾಗಿ ನಿರ್ಮಿಸಿಕೊಟ್ಟಿದ್ದಾರೆ. ಹಾಗಾಗಿ ಅವರಿಗೆ ಮಧುಗಿರಿಯ ಸಮಸ್ತ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಎಸಿಗೋಟೂರು ಶಿವಪ್ಪ, ಡಾ.ಎಂ.ಜಿ.ಶ್ರೀನಿವಾಸಮೂರ್ತಿ , ಬಿಇಒ ಕೆ.ಎನ್.ಹನುಮಂತರಾಯಪ್ಪ, ತುಮುಲ್ ನಿರ್ದೇಶಕ ಬಿ.ನಾಗೇಶ್‌ಬಾಬು, ಶಂಕರನಾರಾಯಣಶ್ರೇಷ್ಠಿ, ಎಂ.ಕೆ.ನಂಜುಂಡರಾಜು, ಎಂ.ವಿ.ಗೋವಿಂದರಾಜು, ತಿಮ್ಮರಾಯಪ್ಪ, ಸಿಪಿಐ ಹನುಮಂತರಾಯಪ್ಪ, ಎಂ.ಶ್ರೀಧರ, ಆಲೀಮ್, ಮಂಜುನಾಥ ಆಚಾರ್, ಎಂ.ಆರ್.ಜಗನ್ನಾಥ್, ಎಂ.ಎಸ್.ಚಂದ್ರಶೇಖರ್, ರಮೇಶ್,ಶ್ರೀನಿವಾಸಮೂರ್ತಿ, ಎಸ್‌ವಿಎಲ್ ಶ್ರೀಧರ, ಕೆ.ವಿ.ಮಂಜುನಾಥ ಗುಪ್ತ, ಜಿ.ಆರ್.ಧನ್‌ಪಾಲ್, ದೋಲಿಬಾಬು, ಜಿ.ನಾರಾಯಣರಾಜು, ರಘುಯಾದವ್, ಬಿ.ಆರ್.ಸತ್ಯನಾರಾಯಣ್, ಮೂಡ್ಲಿಗಿರೀಶ್, ಕೆ.ಎಸ್.ಪಾಂಡುರಂಗಾರೆಡ್ಡಿ, ಗೋಪಾಲ್, ಕಲಾರಂಗದ ಅಧ್ಯಕ್ಷ ಚಿ.ಸೂ.ಕೃಷ್ಣೂರ್ತಿ, ಕಸಾಪ ಅಧ್ಯಕ್ಷೆ ಸಹನಾ ನಾಗೇಶ್, ಎಂ.ವಿ.ಶ್ರೀನಿವಾಸ್, ನಾಗರಾಜು, ಅರ್ಚಕರಾದ ನಟರಾಜ ದೀಕ್ಷಿತ್, ಅನಂತಪದ್ಮನಾಭ ಭಟ್ಟರು ಸೇರಿ ಇತರರು ಉಪಸ್ಥಿತರಿದ್ದರು.